ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 2014 : ರಾಜ್ ಸ್ಮಾರಕ, ಮೊಬೈಲ್ ಒನ್ ಲೋಕಾರ್ಪಣೆ

|
Google Oneindia Kannada News

ನವೆಂಬರ್ 13, ಬೆಂಗಳೂರಿನಲ್ಲಿ ರಾಜ್ ಪ್ರತಿಮೆಗೆ ಬೆಂಕಿ : ಬೆಂಗಳೂರಿನಲ್ಲಿ ವರನಟ ಡಾ.ರಾಜ್ ಕುಮಾರ್ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದರು. ಸಿಪಾಯಿ ರಾಮು ಚಿತ್ರದಲ್ಲಿ ಅಣ್ಣಾವ್ರು ಸಿಪಾಯಿ ಟೋಪಿ ತೊಟ್ಟಿರುವ ಭಂಗಿಯ ಪ್ರತಿಮೆಗೆ ಕಿಡಿಗೇಡಿಗಳಿಂದ ಅಪಮಾನವಾಯಿತು. ರಾಜರಾಜೇಶ್ವರಿ ನಗರದ ಸಮೀಪವಿರುವ ಬಂಗಾರಪ್ಪ ನಗರದಲ್ಲಿ ಈ ಘಟನೆ ನಡೆಯಿತು. ಒಂದು ವಾರದಲ್ಲಿ ಉದ್ಘಾಟನೆಯಾಗಬೇಕಿದ್ದ ಪ್ರತಿಮೆಗೆ ಬೆಂಕಿ ಹಚ್ಚಲಾಗಿತ್ತು.

ನವೆಂಬರ್ 29, ಡಾ.ರಾಜ್ ಸ್ಮಾರಕ ಲೋಕಾರ್ಪಣೆ : ವರನಟ ಡಾ. ರಾಜಕುಮಾರ್ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಿದ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ನಟ ರಜನಿಕಾಂತ್, ಚಿರಂಜೀವಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Flashback 2014 : what happened in Karnataka part 42

ಡಿಸೆಂಬರ್ 8, ಮುಖ್ಯವಾಹಿನಿಗೆ ಬಂದ ನಕ್ಸಲರು : ಹಲವು ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್ ನಾಯಕರಾದ ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಶರಣಾದರು. ಚಿಕ್ಕಮಗಳೂರು ಪ್ರವಾಸಿ ಮಂದಿರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್, ಶಿವಸುಂದರ್, ನಗರಿ ಬಾಬಯ್ಯ ಮುಂತಾದವರು ಮುಖ್ಯವಾಹಿಗೆ ಬಂದ ನಕ್ಸಲರನ್ನು ಬರಮಾಡಿಕೊಂಡರು.

ಡಿಸೆಂಬರ್ 8, ಮೊಬೈಲ್ ಒನ್ ಲೋಕಾರ್ಪಣೆ : ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಕುಳಿತು 4 ಸಾವಿರ ಸೇವೆಗಳನ್ನು ಪಡೆಯಬಹುದಾದ 'ಮೊಬೈಲ್‌ ಒನ್‌' ಸೇವೆಯನ್ನು ಕರ್ನಾಟಕಕ್ಕೆ ಸಮರ್ಪಣೆ ಮಾಡಲಾಯಿತು. ಮೊಬೈಲ್‌ ಇ-ಆಡಳಿತದಲ್ಲಿ ಮಹತ್ವದ ಹೆಜ್ಜೆಯಾದ ಸೇವೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಉದ್ಘಾಟಿಸಿದರು. [ಮೊಬೈಲ್ ಒನ್ ಸೇವೆ ಬಗ್ಗೆ ಇಲ್ಲಿದೆ ಮಾಹಿತಿ]

ಡಿಸೆಂಬರ್ 9, ಚಳಿಗಾಲದ ಅಧಿವೇಶನ ಆರಂಭ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಚಳಿಗಾಲದ ಅಧಿವೇಶನ ಆರಂಭವಾಯಿತು. ಇಡೀ ಆಡಳಿತ ಯಂತ್ರ ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಆಯಿತು. ಅಧಿವೇಶನದಲ್ಲಿ ದಂದು ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ ಸರ್ಕಾರ ಶಾಸಕರ ರಾತ್ರಿ ಊಟಕ್ಕೆ ಕತ್ತರಿ ಹಾಕಿತು. ತಮ್ಮ ಸ್ವಂತ ಖರ್ಚಿನಲ್ಲಿಯೇ ಶಾಸಕರು ಊಟ ಮಾಡಬೇಕಾಯಿತು.

ಡಿಸೆಂಬರ್ 10, ಸದನದಲ್ಲಿ ಮೊಬೈಲ್ ಮಾಯೆ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಎರಡನೇ ದಿನ ಔರಾದ್ ಕ್ಷೇತ್ರದ ಶಾಸಕ ( ಬಿಜೆಪಿ) ಪ್ರಭು ಚೌವಾಣ್ ಮೊಬೈಲ್ ಫೋನ್ ದುರ್ಬಳಕೆ ಮಾಡಿಕೊಂಡು ಸುದ್ದಿ ಮಾಡಿದರು. ಕಲಾಪ ನಡೆಯುತ್ತಿರುವ ವೇಳೆ ಮೊಬೈಲ್ ಫೋನ್‌ನಲ್ಲಿ ಪ್ರಿಯಾಂಕ ಗಾಂಧಿ ಚಿತ್ರವನ್ನು ಜೂಮ್ ಮಾಡಿ ನೋಡಿ ಖಾಸಗಿ ವಾಹಿನಿಗಳ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದರು. ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಮೊಬೈಲ್‌ನಲ್ಲಿ ಕ್ಯಾಂಡಿಕ್ರಷ್ ಗೇಮ್ ಆಡುತ್ತಿದ್ದರು.

Flashback 2014 : what happened in Karnataka part 41

ಡಿಸೆಂಬರ್ 20, ಮಠಗಳಿಗೆ ಮೂಗುದಾರ : ಚಳಿಗಾಲದ ಅಧಿವೇಶನದ ಕೊನೆ ದಿನ ಸರ್ಕಾರ ಮಠಗಳನ್ನು ತನ್ನ ಹತೋಟಿಗೆ ಕಾನೂನು ಪ್ರಕಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ವಿಧೇಯಕವೊಂದನ್ನು ಮಂಡನೆ ಮಾಡಿತು. ಸೂಕ್ತ ನಿರ್ವಹಣೆ ಇಲ್ಲದ ಮಠ, ವಿವಾದಕ್ಕೆ ಸಿಲುಕಿರುವ ಮಠ, ಧಾರ್ಮಿಕ ಸಂಸ್ಥೆಗಳು ಹಾಗೂ ದೇಗುಲಗಳ ಸ್ವಾಧೀನಕ್ಕಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2014ನ್ನು ವಿಧಾನಸಭೆಯಲ್ಲಿ ಮಂಡಿಸಿತು. [ಮಠಗಳಿಗೆ ಮೂಗುದಾರ ಹಾಕಲು ಸರ್ಕಾರ ಸಿದ್ಧ]

ಡಿಸೆಂಬರ್ 23, ಮಹಿಳೆ ಕೊಂದಿದ್ದ ಹುಲಿ ಬಲಿ : ಚಿಕ್ಕಮಗಳೂರಿನಲ್ಲಿ ಮಹಿಳೆ ಕೊಂದಿದ್ದ ಹುಲಿರಾಯನನ್ನು ಗಡಿಪಾರು ಮಾಡಿ ಬೆಳಗಾವಿಯ ಭೀಮಗಡದ ಕಾಡಿಗೆ ಬಿಡಲಾಗಿತ್ತು. ಡಿ.23ರಂದು ಅಲ್ಲಿಯೂ ಅದು ಮಹಿಳೆಯನ್ನು ಕೊಂದು ತಿಂದಿತು. ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಂಜನಾ (23) ಎಂಬ ಮಹಿಳೆಯನ್ನು ಹುಲಿ ಕೊಂದು ಹಾಕಿತು. ನಂತರ ಹುಲಿಯನ್ನು ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿತು.

ಡಿಸೆಂಬರ್ 25, ನಂದಿತಾ ಸ್ಟೋರ್ ಆರಂಭ : ಡಿ.12ರಂದು ತೀರ್ಥಹಳ್ಳಿಯ ನಂದಿತಾ ತಂದೆ ಕೃಷ್ಣಮೂರ್ತಿ ಅವರ ದಿನಸಿ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಡಿ.25 ಅದೇ ಜಾಗದಲ್ಲಿ ಹೊಸ ಕಟ್ಟಡದಲ್ಲಿ 'ನಂದಿತಾ ಸ್ಟೋರ್' ಪುನಃ ಆರಂಭಗೊಂಡಿತು. ತೀರ್ಥಹಳ್ಳಿಯ ಬಾಳೇಬೈಲಿನಲ್ಲಿರುವ ನಂದಿತಾ ತಂದೆ ಕೃಷ್ಣಮೂರ್ತಿ ಅವರ ದಿನಸಿ ಅಂಗಡಿಯನ್ನು ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರು ದೇಣಿಗೆ ಎತ್ತಿ, ಪುನಃ ಅದೇ ಸ್ಥಳದಲ್ಲಿ ಕಟ್ಟಿಕೊಟ್ಟರು.

Flashback 2014 : what happened in Karnataka part 43

ಡಿ. 28, ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ : ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿರುವ ಕೋಕೋನಟ್ ಗ್ರೋವ್ ಎಂಬ ಹೋಟೆಲ್ ಬಳಿ ಬಾಂಬ್ ಸ್ಫೋಟ ಸಂಭವಿಸಿತು. ಹೊಸ ವರ್ಷಾಚರಣೆ ಆಚರಿಸಲು ಸಿದ್ಧತೆ ನಡೆಸುತ್ತಿದ್ದ ನಗರದ ಜನರು ಬಾಂಬ್ ಸ್ಫೋಟದ ಸುದ್ದಿ ಕೇಳಿ ಆತಂಕಗೊಂಡರು. ಬಾಂಬ್ ಸ್ಫೋಟದಲ್ಲಿ ಓರ್ವ ಮಹಿಳೆ ಮೃತಪಟ್ಟರೆ, ಮೂವರು ಗಾಯಗೊಂಡರು.

English summary
Karnataka : Here is a look at the top events that unfolded in Karnataka in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X