ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ 2014 : ದಸರಾ, ಜಯಲಲಿತಾ, ನಂದಿತಾ ಪ್ರಕರಣ

|
Google Oneindia Kannada News

ಸೆಪ್ಟೆಂಬರ್ 24, ಮಂಗಳನ ಅಂಗಳಕ್ಕೆ ಭಾರತ : ಭಾರತ ಅನ್ಯಗ್ರಹ ಯಾನದಲ್ಲಿ ಇತಿ­ಹಾಸ ಬರೆಯಿತು. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ಉಡಾಯಿಸಿರುವ ಮಂಗಳ­­ನೌಕೆ ಸೆ.24ರಂದು ಬೆಳಗ್ಗೆ ಯಶಸ್ವಿಯಾಗಿ ಕೆಂಪು­ಕಾಯದ ಕಕ್ಷೆಗೆ ಸೇರಿತು. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದರು. ಎರಡು ದಿನದ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಇಸ್ರೋಗೆ ಭೇಟಿ ನೀಡಿದ್ದರು.

ಸೆಪ್ಟೆಂಬರ್, 24, ತುಮಕೂರು ಫುಡ್‌ಪಾರ್ಕ್ ಲೋಕಾರ್ಪಣೆ : ತುಮಕೂರು ಹೊರವಲಯದ ವಸಂತನರಸಾಪುರದಲ್ಲಿ ದೇಶದ ಪ್ರಪ್ರಥಮ ಪುಡ್‍ಪಾರ್ಕ್‍ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸುಮಾರು 110 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಪಾರ್ಕ್‌ ಅನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿದ್ದು, ಕೇಂದ್ರ ಆಹಾರ ಸಂಸ್ಕರಣಾ ಕೈಗಾ­ರಿಕಾ ಸಚಿವಾಲಯ ವಿವಿಧ ಹಂತಗಳಲ್ಲಿ ಸಹಾಯಧನವನ್ನು ನೀಡಿದೆ. [ಮೆಗಾ ಫುಡ್ ಪಾರ್ಕ್ ಬಗ್ಗೆ ಮಾಹಿತಿ ಇಲ್ಲಿದೆ ]

Flashback 2014 what happened in Karnataka part 31

ಸೆಪ್ಟೆಂಬರ್ 27, ಜಯಲಲಿತಾಗೆ ಜೈಲು : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬಿದ್ದಿತು, ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ಗಳ ದಂಡ ವಿಧಿಸಿ ಪರಪ್ಪನ ಅಗ್ರಹಾರದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರು ತೀರ್ಪು ನೀಡಿದರು. ಪ್ರಕರಣದ ಇತರ ಆರೋಪಿಗಳಾದ ಸುಧಾಕರನ್, ಶಶಿಕಲಾ ಹಾಗೂ ಇಲವರಸಿ ಅವರಿಗೂ ಸಹ 10 ಕೋಟಿ ದಂಡ ಮತ್ತು 4 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.

ಅ.4 ದೊರೆಯಿಲ್ಲದ ದಸರಾಕ್ಕೆ ತೆರೆ : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2014ರ ದಸರಾ ಮಹೋತ್ಸವಕ್ಕೆ ಅಕ್ಟೋಬರ್‌ 4ರಂದು ತೆರೆ ಬಿದ್ದಿತು. ಸತತ ಮೂರನೇ ವರ್ಷ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿತು. ಮಹಾಜರ ಅನುಪಸ್ಥಿತಿಯಲ್ಲಿ ನಡೆದ ದಸರಾವಿದಾಗಿತ್ತು.

ಅಕ್ಟೋಬರ್ 18, ಜಯಲಲಿತಾಗೆ ಬಿಡುಗಡೆ ಭಾಗ್ಯ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡರು. ಜಯಲಲಿತಾ ಅವರು 22 ದಿನಗಳಿಂದ ಜೈಲಿನಲ್ಲಿದ್ದರು. ಅ.17ರಂದು ಜಾಮೀನು ಮಂಜೂರು ಮಾಡಿತ್ತು. ಅ.18ರಂದು ಜಾಮೀನು ಪ್ರಕ್ರಿಯೆ ಪೂರ್ಣಗೊಂಡು ಅವರು ಬಿಡುಗಡೆಯಾಗಿ ಚೆನ್ನೈಗೆ ತೆರಳಿದರು. [ಜೈಲು ಬಿಟ್ಟ ಜಯಾ, ನಿಟ್ಟುಸಿರು ಬಿಟ್ಟ ಬೆಂಗಳೂರು]

Flashback 2014 what happened in Karnataka part 32

ಅಕ್ಟೋಬರ್ 20, ವಿವಿ ಕುಲಪತಿ ಬಂಧನ : ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರನ್ನು ಲೋಕಾಯುಕ್ತ ಪೊಲೀಸರು ವಿವಿಯಲ್ಲಿ ನಡೆದಿರುವ ಅಕ್ರಮ ನೇಮಕ ಸೇರಿದಂತೆ ವಿವಿಧ ಹಗರಣಗಳ ಸಂಬಂಧ ಬಂಧಿಸಿದರು. ವಿವಿಯ ಅವರ ಕಚೇರಿಯಲ್ಲಿಯೇ ಲೋಕಾಯುಕ್ತ ಪೊಲೀಸರು ಬಂಧಿಸಿದರು. ಡಾ.ಎಚ್.ಬಿ.ವಾಲೀಕಾರ ಅವರ ಜೊತೆಗೆ ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ಅವರನ್ನು ಬಂಧಿಸಲಾಯಿತು. [ಧಾರವಾಡ ವಿವಿ ಹಗರಣಗಳೇನು?]

ಅಕ್ಟೋಬರ್ 31, ತೀರ್ಥಹಳ್ಳಿಯ ನಂದಿತಾ ಸಾವು : 8 ನೇ ತರಗತಿ ಬಾಲಕಿ ಅಪಹರಣ ನಂದಿತಾ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತು. ಅ.29ರಂದು ಅಸ್ವಸ್ಥ ಸ್ಥಿತಿಯಲ್ಲಿ ಆನಂದಗಿರಿ ಗುಡ್ಡದಲ್ಲಿ ಪತ್ತೆಯಾಗಿದ್ದ ಬಾಲಕಿ, ಅ.31ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಮೂವರು ಯುವಕರ ಗುಂಪು ಆಕೆಯನ್ನು ಅಪಹರಿಸಿ ಆನಂದ ಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ವಿಷಪ್ರಾಶನ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ನಂದಿತಾ ಸಾವಿನ ನಂತರ ತೀರ್ಥಹಳ್ಳಿ ಪಟ್ಟಣದಲ್ಲಿ 15 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

Flashback 2014 what happened in Karnataka part 32

ನವೆಂಬರ್ 1, ನಗರಗಳ ಹೆಸರು ಬದಲಾವಣೆ : ಇಂಗ್ಲಿಷ್ ಭಾಷೆಯಲ್ಲಿ Bangalore ಎಂದಿದ್ದ ಹೆಸರನ್ನು Bengaluru ಎಂದು ಬದಲಾವಣೆ ಮಾಡುವುದು ಸೇರಿದಂತೆ ರಾಜ್ಯದ 12 ನಗರಗಳ ಹೆಸರುಗಳನ್ನು ಬದಲಾಯಿಸಿ ಸರ್ಕಾರ ಅಕ್ಟೋಬರ್ 31ರಂದು ಆದೇಶ ಹೊರಡಿಸಿತು. ನ.1ರಿಂದಲೇ ಜಾರಿಗೆ ಬರುವಂತೆ ಬೆಂಗಳೂರು, ಮಂಗಳೂರು, ಬಳ್ಳಾರಿ, ಬಿಜಾಪುರ, ಚಿಕ್ಕಮಗಳೂರು, ಗುಲ್ಬರ್ಗ, ಮೈಸೂರು, ಹೊಸಪೇಟೆ, ಶಿವಮೊಗ್ಗ, ಹುಬ್ಬಳ್ಳಿ, ತುಮಕೂರಿನ ಹೆಸರನ್ನು ಬದಲಾವಣೆ ಮಾಡಲಾಯಿತು.

ನವೆಂಬರ್ 9, ಡಿವಿಎಸ್ ಕೈ ತಪ್ಪಿದ ರೈಲು : ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟವನ್ನು ಪುನಃ ರಚಿಸಿದರು. ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡರ ಬಳಿಯಿದ್ದ ರೈಲ್ವೆ ಖಾತೆ ಅವರ ಕೈ ತಪ್ಪಿತು. ಸದಾನಂದ ಗೌಡರಿಗೆ ಕಾನೂನು ಖಾತೆ ನೀಡಲಾಯಿತು. ಕೇಂದ್ರದಲ್ಲಿ ಸಚಿವರಾಗಿ ಕೆಲಸ ಆರಂಭಿಸಿದ ಕೇವಲ ಐದೂವರೆ ತಿಂಗಳಲ್ಲಿ ಮಹತ್ವದ ರೈಲ್ವೆ ಖಾತೆ ಡಿ.ವಿ. ಸದಾನಂದಗೌಡರ ಕೈತಪ್ಪಿತು. [ರೈಲ್ವೆ ಡಿವಿಎಸ್ ಕೈ ತಪ್ಪಲು ಕಾರಣಗಳು]

ನವೆಂಬರ್ 10, ಟೆಸ್ಟ್‌ ಕ್ರಿಕೆಟ್‌ಗೆ ಕನ್ನಡಿಗ : ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಕನ್ನಡಿಗನೊಬ್ಬನನ್ನು ಆಯ್ಕೆ ಮಾಡಿತು. ಉತ್ತಮ ಫಾರ್ಮ್ ನಲ್ಲಿರುವ ಕರ್ನಾಟಕದ ಯುವ ಆಟಗಾರ ಕೆ.ಎಲ್. ರಾಹುಲ್ ಭಾರತದ ಟೆಸ್ಟ್ ತಂಡಕ್ಕೆ ಸೇರ್ಪಡೆಯಾದರು. 23ರ ಹರೆಯದ ಬೆಂಗಳೂರಿನ ಬ್ಯಾಟ್ಸ್‌ಮನ್ ರಾಹುಲ್ ಆಯ್ಕೆಗಾರರ ಗಮನ ಸೆಳೆದರು.

English summary
Karnataka 2014 : Here is a look at the top events that unfolded in Karnataka in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X