ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ನ ಒಂದು ಸ್ಥಾನ: ಜೆಡಿಎಸ್ ನಲ್ಲಿ ಐದು ಮಂದಿ ತಿಪ್ಪರಲಾಗ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಉಳಿದ ಅವಧಿಗೆ ಆಯ್ಕೆಯಾಗಲಿರುವ ಮೂರು ಸ್ಥಾನಗಳಿಗೆ ಜೆಡಿಎಸ್ ನಲ್ಲಿ ಭಾರಿ ಲಾಬಿ ಆರಂಭವಾಗಿದ್ದ, ಜೆಡಿಎಸ್ ಗೆ ದಕ್ಕಬಹುದಾದ ಒಂದು ಸ್ಥಾನಕ್ಕೆ ಐದಕ್ಕೂ ಹೆಚ್ಚು ಆಕಾಕ್ಷಿಗಳು ಲಾಬಿ ನಡೆಸಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಮೂರು ಸ್ಥಾನಗಳಲ್ಲಿ ಎರಡು ಕಾಂಗ್ರೆಸ್ ಗೆ ದಕ್ಕಲಿದ್ದು, ಒಂದು ಮಾತ್ರ ಜೆಡಿಎಸ್ ಪಾಲಾಗಲಿದೆ, ಹೀಗಾಗಿ ಬುಧವಾರದಿಂದ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿದ್ದರೆ, ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠರು ಖಾಲಿ ಇರುವ ಒಂದು ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ

ಮೂಲಗಳ ಪ್ರಕಾರ ಮಾಜಿ ಶಾಸಕರಾದ ಮಧು ಬಂಗಾರಪ್ಪ, ವೈಎಸ್ ವಿ ದತ್ತ ಹಾಗೂ ರಮೇಶ್ ಬಾಬು ಪ್ರಬಲ ಆಕಾಂಕ್ಷಿಗಳಾಗಿದ್ದು, ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಹಾಗೂ ಜೆಡಿಎಸ್ ಮುಖಂಡ ಅಮರ್ ನಾಥ್ ಅವರ ಹೆಸರು ಕೂಡ ಕೇಳಿಬರುತ್ತಿದೆ.

ಜಾತಿ ಪ್ರಭಾವ ಪ್ರಾಬಲ್ಯದ ಮೇಲೆ ಅಭ್ಯರ್ಥಿಗಳಿಗೆ ಟಿಕೆಟ್ ದೊರಕಲಿದೆ. ಜೆಡಿಎಸ್ ವರಿಷ್ಠರು ತಮ್ಮ ಮಾನದಂಡ ಗಳಿಗೆ ಅನುಸಾರ ಟಿಕೆಟ್ ಹಂಚಿಕೆ ಮಾಡಲಿದ್ದಾರೆ. ಎಚ್‌ಡಿ ದೇವೇಗೌಡರ ನೇತೃತ್ವದಲ್ಲಿ ಇಂದು(ಸೆ.20)ರಂದು ಸಭೆ ನಡೆಯಲಿದ್ದು, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ ಖಾಲಿ ಇರುವ ಮೂರು ಸ್ಥಾನಗಳಿಗೆ ವಿಧಾನಸಭೆಯ ಸದಸ್ಯರು ಮೂವರು ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ, ಸೆ.22ರಂದು ನಾಮಪತ್ರಕ್ಕೆ ಕೊನೆಯ ದಿನವಾಗಿದೆ. ಸೆ.26 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ.

3 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ 3 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ

ಈ ಹಿನ್ನೆಲೆಯಲ್ಲಿ ಗುರುವಾರ ಅಂತಿಮ ಸಭೆ ನಡೆಯಲಿದ್ದು, ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್, ಸಚಿವ ಎಚ್‌ಡಿ ರೇವಣ್ಣ, ಇತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧು ಮೇಲೆ ಎಚ್ಡಿಕೆಗೆ ಪ್ರೀತಿ ದತ್ತ ಮೇಲೆ ದೇವೇಗೌಡರಿಗೆ ಒಲವು

ಮಧು ಮೇಲೆ ಎಚ್ಡಿಕೆಗೆ ಪ್ರೀತಿ ದತ್ತ ಮೇಲೆ ದೇವೇಗೌಡರಿಗೆ ಒಲವು

ಮಧು ಬಂಗಾರಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆಂಬ ನಿರೀಕ್ಷೆ ಇತ್ತಾದರೂ, ಅವರಿಗೆ ರಾಜ್ಯ ರಾಜಕಾರಣದಲ್ಲೇ ಇರಬೇಕೆಂಬ ಇಚ್ಛೆ ಇರುವುದರಿಂದ ಆ ಸಾಧ್ಯತೆ ಕ್ಷೀಣಿಸಿದೆ. ಪರಿಷತ್ ಗೆ ನಾಮಕರಣ ಮಾಡಿ ಸಚಿವ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂಬುದು ಮಧು ಬೇಡಿಕೆಯಾಗಿದೆ. ಇದಕ್ಕೆ ಸಿಎಂ ಸಹಮತ ಇದೆಯಾದರೂ ಎಚ್ಡಿಕೆಗೆ ಸಹಮತ ಇದೆಯಾದರೂ ದೇವೇಗೌರು ಈವರೆಗೆ ಗುಟ್ಟು ಬಿಟ್ಟುಕೊಟ್ಟಿಲ್ಲ, ಒಂದು ವೇಳೆ ದೊಡ್ಡ ಗೌಡರ ವಿರುದ್ಧವಾಗಿ ರಮೇಶ್ ಬಾಬು ಬೇಡವೆಂದಾದರೆ ದತ್ತ ನೇಮಕ ಮಾಡಿದರೆ ದೇವೇಗೌಡರಿಗೆ ಸಂತೋಷವಾಗುತ್ತದೆ. ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ಪರ ಬಲವಾಗಿ ಸಮರ್ಥನೆ ಮಡಿಕೊಳ್ಳುತ್ತಾರೆ ಎಂಬ ಅಭಿಪ್ರಾಯವಿದೆ.

ಪರಿಷತ್ ಪ್ರವೇಶಿಸಲು ಉತ್ಸುಕ, ಸಚಿವ ಗಿರಿಗೆ ಮಧು ಲಾಬಿ

ಪರಿಷತ್ ಪ್ರವೇಶಿಸಲು ಉತ್ಸುಕ, ಸಚಿವ ಗಿರಿಗೆ ಮಧು ಲಾಬಿ

ಪರಿಷತ್ಗೆ ಪ್ರವೇಶಿಲು ತುದಿಗಾಲಲ್ಲಿ ನಿಂತಿರುವ ಮಧು ಬಂಗಾರಪ್ಪ ಸಚಿವ ಗಿರಿಗೂ ಲಾಬಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ, ಮಧುಗೆ ಇನ್ನೂ ಸಾಕಷ್ಟು ಕಾಲಾವಕಾಶಗಳಿದ್ದು ನೇರ ಚುನಾವಣೆಯಲ್ಲಿಯೇ ಆಯ್ಕೆಯಾಗುವ ಶಕ್ತಿ ಇದೆ ಎಂಬುದು ಗೌಡರ ನಿಲುವಾಗಿದೆ.

ಪರಿಷತ್ತಿಗೆ ದತ್ತ ಪ್ರವೇಶ, ಪಕ್ಷಕ್ಕೆ ಸದನದ ಒಳಗೂ ಹೊರಗೂ ಶಕ್ತಿ

ಪರಿಷತ್ತಿಗೆ ದತ್ತ ಪ್ರವೇಶ, ಪಕ್ಷಕ್ಕೆ ಸದನದ ಒಳಗೂ ಹೊರಗೂ ಶಕ್ತಿ

ಪರಿಷತ್ತಿಗೆ ದತ್ತ ಪ್ರವೇಶ ಮಾಡಿದರೆ ಪಕ್ಷದ ಒಳಗೂ ಸದನದ ಒಳಗೂ, ಹೊರಗೂ ಶಕ್ತಿ ಇದ್ದಂತಾಗುತ್ತದೆ ಎನ್ನುವುದು ದೇವೇಗೌಡರ ಅಭಿಪ್ರಾಯವಾಗಿದೆ. ಈ ಕುರಿತು ಸೆ.20ರಂದು ಜೆಡಿಎಸ್ ಸಭೆ ಕರೆದಿದ್ದು ಅದರಲ್ಲಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಹಲವು ಮುಖಂಡರು ಪಾಲ್ಗೊಳ್ಳಲಿದ್ದು ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ.

ಪರಿಷತ್ ಅವಧಿ ಉಳಿದಿರುವುದು ವರ್ಷ, ಯಾರಿಗೂ ಇಲ್ಲ ಹರ್ಷ

ಪರಿಷತ್ ಅವಧಿ ಉಳಿದಿರುವುದು ವರ್ಷ, ಯಾರಿಗೂ ಇಲ್ಲ ಹರ್ಷ

ಡಿಸಿಎಂ ಡಾ ಪರಮೇಶ್ವರ್ ಹಾಗೂ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ರಾಜಿನಾಮೆ ನೀಡಿರುವ ಪರಿಷತ್ ಸ್ಥಾನದ ಅವಧಿ 2020 ಜೂನ್ 16ಕ್ಕೆ ಕೊನೆಗೊಳ್ಳಲಿದೆ, ಬಿಜೆಪಿ ಇನ್ನೊಮ್ಮ ಶಾಸಕ ವಿ ಸೋಮಣ್ಣ ರಾಜಿನಾಮೆ ನೀಡಿರುವ ಸ್ಥಾನ 2022 ಜೂನ್ ನಾಲ್ಕಕ್ಕೆ ಕೊನೆಗೊಳ್ಳಲಿದೆ. ಮೂರು ಸ್ಥಾನಗಳ ಪೈಕಿ ಎರಡು ಸ್ಥಾನಗಳು 2020ಕ್ಕೆ ಕೊನೆಗೊಂಡರೆ ಒಂದು ಸ್ಥಾನ ಮಾತ್ರ 2022ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ಗೆ 2 ಸ್ಥಾನ ದಕ್ಕಿದರೆ ಜೆಡಿಎಸ್ ಗೆ 1 ಸ್ಥಾನ ದಕ್ಕಲಿದೆ. ಆ ಕಾರಣಕ್ಕಾಗಿ 2022ರ ವೇಳೆಗೆ ಕೊನೆಗೊಳ್ಳುವ ದೀರ್ಘಾವಧಿಯ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆದಿದೆ. ಆದರೆ 2020ಕ್ಕೆ ಕೊನೆಗೊಳ್ಳುವ ಅವಧಿಯನ್ನು ಜೆಡಿಎಸ್ ಗೆ ನೀಡಲು ಕಾಂಗ್ರೆಸ್ ನಿರ್ದರಿಸಿತ್ತು. ಜೆಡಿಎಸ್ ನಿಂದ ಯಾರೇ ಆಯ್ಕೆಯಾದರೂ ಅವರು ಅವಧಿ ಕೇವಲ ಎರಡೇ ವರ್ಷ.

English summary
Including former MLAs YSV Datta and Madhu Bangarappa over five leaders have been lobbying for council seat which election will be held on October 3. Former MLC Rameshbabu, city JDS president Prakash and others are in the race
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X