ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ: 5 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕೇಸ್

|
Google Oneindia Kannada News

ಬೆಂಗಳೂರು, ಮೇ 20: ಕರ್ನಾಟಕದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಇಂದು ಮಧ್ಯಾಹ್ನದ ವೇಳೆ ರಾಜ್ಯದಲ್ಲಿ ಒಟ್ಟು 63 ಕೇಸ್‌ಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 1458ಕ್ಕೆ ಏರಿಕೆಯಾಗಿದೆ.

ಹಾಸನದಲ್ಲಿ 21 ಕೇಸ್, ಬೀದರ್‌ನಲ್ಲಿ 10 ಪ್ರಕರಣ, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7 ಕೇಸ್, ಉಡುಪಿಯಲ್ಲಿ 6, ಬೆಂಗಳೂರಿನಲ್ಲಿ 4 ಕೇಸ್ ಸೇರಿದಂತೆ ಒಟ್ಟು 63 ಪ್ರಕರಣಗಳು ದಾಖಲಾಗಿದೆ.

ಎರಡನೇ ಬಾರಿ ಕೊವಿಡ್ 19 ರೋಗಕ್ಕೆ ತುತ್ತಾದವರಿಂದ ವೈರಸ್ ಹರಡುತ್ತಾ?ಎರಡನೇ ಬಾರಿ ಕೊವಿಡ್ 19 ರೋಗಕ್ಕೆ ತುತ್ತಾದವರಿಂದ ವೈರಸ್ ಹರಡುತ್ತಾ?

ಇನ್ನು ರಾಜ್ಯದ ಐದು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100ರ ಗಡಿದಾಟಿದೆ. ಈ ಪೈಕಿ ಇನ್ನು ಎರಡು ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಕೇಸ್ ಸಕ್ರಿಯವಾಗಿದೆ. ಅಷ್ಟಕ್ಕೂ, ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಸೆಂಚುರಿ ಬಾರಿಸಿದೆ. ಮುಂದೆ ಓದಿ....

ಬೆಂಗಳೂರಿನಲ್ಲಿ 250 ಕೇಸ್

ಬೆಂಗಳೂರಿನಲ್ಲಿ 250 ಕೇಸ್

ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿರುವುದು ಬೆಂಗಳೂರಿನಲ್ಲಿ. ಈವರೆಗೂ ಸಿಲಿಕಾನ್‌ ಸಿಟಿಯಲ್ಲಿ 250 ಜನರಿಗೆ ಸೋಂಕು ತಗುಲಿದೆ. ಇಂದು ನಗರದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದೆ. ಈವರೆಗೂ 8 ಜನ ಮೃತಪಟ್ಟಿದ್ದು, 117 ಕೇಸ್ ಸಕ್ರಿಯವಾಗಿದೆ.

ಮಂಡ್ಯದಲ್ಲಿ 168 ಕೇಸ್

ಮಂಡ್ಯದಲ್ಲಿ 168 ಕೇಸ್

ಸದ್ಯ ಕರ್ನಾಟಕದಲ್ಲಿ ಮಂಡ್ಯ ಕೊರೊನಾ ಹಾಟ್‌ಸ್ಪಾಟ್‌ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಈವರೆಗೂ ಮಂಡ್ಯದಲ್ಲಿ ಒಟ್ಟು 168 ಜನರಿಗೆ ಸೋಂಕು ವರದಿಯಾಗಿದೆ. ಇಂದು ಒಂದೇ ದಿನ 8 ಕೇಸ್ ದಾಖಲಾಗಿದೆ. 147 ಪ್ರಕರಣ ಸಕ್ರಿಯವಾಗಿದ್ದು, ಪ್ರಸ್ತುತ ಮಂಡ್ಯದಲ್ಲಿ ಹೆಚ್ಚು ಕೇಸ್ ಆಕ್ಟಿವ್ ಆಗಿದೆ. ಯಾವುದೇ ಸಾವು ಸಂಭವಿಸಿಲ್ಲ.

ಒಂದೇ ದಿನ 5661 ಹೊಸ ಕೇಸ್ ಪತ್ತೆ, 140 ಮಂದಿ ಸಾವುಒಂದೇ ದಿನ 5661 ಹೊಸ ಕೇಸ್ ಪತ್ತೆ, 140 ಮಂದಿ ಸಾವು

ಕಲಬುರಗಿಯಲ್ಲಿ 134 ಕೇಸ್

ಕಲಬುರಗಿಯಲ್ಲಿ 134 ಕೇಸ್

ಕಲಬುರಗಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 134ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ 7 ಹೊಸ ಕೇಸ್ ದಾಖಲಾಗಿದೆ. 72 ಕೇಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಳಗಾವಿಯಲ್ಲಿ 116 ಪ್ರಕರಣ

ಬೆಳಗಾವಿಯಲ್ಲಿ 116 ಪ್ರಕರಣ

ಬೆಳಗಾವಿಯಲ್ಲಿ ಇಂದು ಯಾವುದೇ ಹೊಸ ಕೇಸ್ ವರದಿಯಾಗಿಲ್ಲ. ಆದರೂ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 116ಕ್ಕೆ ಜಗಿದಿದೆ. ಇನ್ನು 51 ಕೇಸ್ ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಒಂದು ಸಾವು ವರದಿಯಾಗಿದೆ.

ದಾವಣೆಗೆರೆಯಲ್ಲಿ 112 ಕೇಸ್

ದಾವಣೆಗೆರೆಯಲ್ಲಿ 112 ಕೇಸ್

ಇನ್ನು ನೂರರ ಗಡಿದಾಟಿದ ಜಿಲ್ಲೆಗಳ ಪೈಕಿಗಳ ದಾವಣೆಗೆರೆ ಐದನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಇಂದು ಯಾವುದೇ ಕೇಸ್ ಪತ್ತೆಯಾಗಿಲ್ಲ. ಆದರೂ ಒಟ್ಟು ಕೇಸ್‌ನ ಸಂಖ್ಯೆ 116. ದಾವಣೆಗೆರೆಯಲ್ಲಿ ಇನ್ನು 99 ಪ್ರಕರಣ ಸಕ್ರಿಯವಾಗಿದ್ದು, ನಾಲ್ಕು ಜನರು ಮೃತಪಟ್ಟಿದ್ದಾರೆ.

English summary
Karnataka Reported 63 new coronavirus cases today. now, total COVID 19 cases rise to 1458 in the state. Bengaluru, Mandya Davangere, kalaburagi, belagavi crossed 100 case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X