ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾ

|
Google Oneindia Kannada News

Recommended Video

Lok Sabha Elections 2019: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ | ಇದರ ನಡುವೆ ಸಾಲು ಸಾಲು ರಜೆ

ಹದಿನೇಳನೇ ಲೋಕಸಭೆಗೆ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸಿದೆ. ಅನಿರೀಕ್ಷಿತ ಎನ್ನುವಂತೆ, ಎರಡು ಹಂತದಲ್ಲಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಆಯೋಗ ಪ್ರಕಟಿಸಿರುವ ಎರಡು ದಿನಾಂಕ ಏಪ್ರಿಲ್ 18 ಮತ್ತು 23. ಬೆಂಗಳೂರು ವ್ಯಾಪ್ತಿಯ ನಾಲ್ಕೂ ಲೋಕಸಭಾ ಕ್ಷೇತ್ರಗಳ ಚುನಾವಣೆ ಏಪ್ರಿಲ್ 18, ಗುರುವಾರ ನಡೆಯುತ್ತಿದೆ.

ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ, ಅಂದರೆ ಬರೋಬ್ಬರಿ ಒಂದು ತಿಂಗಳು ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ಚುನಾವಣಾ ನೀತಿಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಹಾಗಾಗಿ, ಇತರರಿಗಿಂತ ನಾವೇ ಗ್ರೇಟ್ ಎನ್ನುವ ರಾಜಕೀಯ ಪಕ್ಷಗಳ ಜಾಹೀರಾತುಗಳಿಗೆ ಬ್ರೇಕ್ ಬೀಳಲಿದೆ.

2014 ಲೋಕಸಭಾ ಚುನಾವಣೆ: ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ರಹಸ್ಯವೇ ಬೇರೆ ಇತ್ತು2014 ಲೋಕಸಭಾ ಚುನಾವಣೆ: ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ರಹಸ್ಯವೇ ಬೇರೆ ಇತ್ತು

ಇದರ ಜೊತೆಗೆ, ಸಾರ್ವಜನಿಕರು ತಾವು ಇಷ್ಟಪಟ್ಟ ಪಕ್ಷಗಳ ಪರವಾಗಿ ಸಾಮಾಜಿಕ ತಾಣದಲ್ಲಿ ಪ್ರಚಾರ ಮಾಡಬಾರದು ಎನ್ನುವ ಸುಳ್ಳುಸುದ್ದಿಯೂ ಹರಿದಾಡಲಾರಂಭಿಸಿದೆ. ಇನ್ನು, ಎರಡೂ ಹಂತದ ಚುನಾವಣೆಯ ದಿನ ಹೇಗಿದೆಯೆಂದರೆ ಒಂದು ದಿನ ಅಥವಾ ಎರಡು ದಿನ ರಜೆ ಹಾಕಿದರೆ, ಹೆಚ್ಚುಕಮ್ಮಿ ಒಂದು ವಾರ ರಜೆ ಸಿಗಲಿದೆ. ಪ್ರಮುಖವಾಗಿ, ಇದರ ಎಫೆಕ್ಟ್ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳ ಚುನಾವಣೆಯ ಮೇಲೆ ಬೀಳಲಿದೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚುನಾವಣೆಯ ಮಹತ್ವ, ನಮ್ಮ ಕರ್ತವ್ಯವನ್ನು ಬಡಿದೆಬ್ಬಿಸುವ ಪುಂಖಾನುಪುಂಖ ಮೆಸೇಜುಗಳು ಸಾಮಾಜಿಕ ತಾಣದಲ್ಲಿ ಬಂದು ಬೀಳಲಾರಂಬಿಸುತ್ತಿದೆ. ಅಸಲಿಗೆ, ಸಾಮಾಜಿಕ ತಾಣದಲ್ಲಿ ಕರ್ತವ್ಯ ಪ್ರಜ್ಞೆಯ ಬಗ್ಗೆ ಮಾತನಾಡುವ ಶೂರರೇ ಚುನಾವಣೆಗೆ ಇನ್ನೊಂದು ದಿನ ರಜೆ ಸಿಕ್ಕೆತೆಂದು, ಊರಿಗೋ ಪ್ರವಾಸಕ್ಕೋ ಗಂಟುಮೂಟೆ ಕಟ್ಟುಕೊಂಡು ಹೋಗುವ ಉದಾಹರಣೆಗಳೇ ಜಾಸ್ತಿ.

ಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರುಕರ್ನಾಟಕ: 2014ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದ ಐವರು ಮುಖಂಡರು

ಬೇಸಿಗೆ ರಜೆ, ಸಾಲುಸಾಲು ಹಬ್ಬಹರಿದಿನಗಳ ನಡುವೆ, ಕರ್ನಾಟಕದ ಎರಡೂ ಹಂತದ ಚುನಾವಣೆ ನಿಗದಿಯಾಗಿದೆ. ಮತದಾನ ಕಡ್ಡಾಯ ಎನ್ನುವ ಕಾನೂನು ನಮ್ಮಲ್ಲಿ ಇಲ್ಲದೇ ಇರುವುದರಿಂದ, ವೋಟ್ ಹಾಕದೇ ಒಂದೋ ಮನೆಯಲ್ಲಿ ಕೂರುವವರು, ಇಲ್ಲವೇ ಊರಿಗೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ದುರಂತವೆಂದರೆ, ಇಂತವರೇ ಮತದಾನದ ಮಹತ್ವವನ್ನು ಸಾರುವ ತಮಾಷೆಯ ಕೆಲಸವನ್ನು ಮಾಡುತ್ತಿರುತ್ತಾರೆ.

ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳು

ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳು

ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳು, ಮತದಾನದ ಮಹತ್ವವನ್ನು ಸಾರುವ ಹಲವು ಕಾರ್ಯಕ್ರಮ/ಸೆಮಿನಾರ್ ಗಳನ್ನು ಹಮ್ಮಿಕೊಳ್ಳುತ್ತವೆ. ಆದರೆ, ಇದುವರೆಗೆ ಇದ್ಯಾವುದೂ ಮತದಾರರನ್ನು ಚುನಾವಣಾ ಬೂತ್ ಗೆ ಕರೆತರುವಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ ಎನ್ನುವುದು ಸತ್ಯ. ಯಾಕೆಂದರೆ, ಗ್ರಾಮೀಣ ಭಾಗದಲ್ಲಿನ ಜನರ ಉತ್ಸಾಹಕ್ಕೆ ಹೋಲಿಸಿದರೆ, ನಗರ ಪ್ರದೇಶದ ಜನರು ಹೆಚ್ಚುಕಮ್ಮಿ ಸೋಮಾರಿಗಳೇ..

ಏಪ್ರಿಲ್ ಹದಿನೆಂಟರಂದು ಬೆಂಗಳೂರಿನ ನಾಲ್ಕೂ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ

ಏಪ್ರಿಲ್ ಹದಿನೆಂಟರಂದು ಬೆಂಗಳೂರಿನ ನಾಲ್ಕೂ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ

ಏಪ್ರಿಲ್ ಹದಿನೆಂಟರಂದು ಚುನಾವಣಾ ದಿನಾಂಕ ಬೆಂಗಳೂರಿನ ನಾಲ್ಕೂ ಲೋಕಸಭಾ ಕ್ಷೇತ್ರಕ್ಕೆ (ದಕ್ಷಿಣ, ಉತ್ತರ, ಸೆಂಟ್ರಲ್, ಗ್ರಾಮಾಂತರ) ದಿನ ನಿಗದಿ ಮಾಡಿದೆ. ಚುನಾವಣೆಯ ದಿನಾಂಕದ ಹಿಂದೆ ಮುಂದೆ ಬರುವ ರಜೆಗಳ ಪಟ್ಟಿ ಇಂತಿದೆ. ಒಂದು ತಿಂಗಳ ಮೊದಲೇ ರಜೆಯ ಪ್ಲ್ಯಾನ್ ಹಾಕಿಕೊಡುತ್ತಿದ್ದೇವೆ ಎಂದು ಯಾರೂ ಅಪಾರ್ಥ ಮಾಡಿಕೊಳ್ಳಬಾರದು ಎನ್ನುವುದೊಂದು ಮನವಿ.

2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!

ಎರಡನೇ ಹಂತದ ಚುನಾವಣೆಗೂ ಸಾಲುಸಾಲು ರಜೆ ಸಿಗಲಿದೆ

ಎರಡನೇ ಹಂತದ ಚುನಾವಣೆಗೂ ಸಾಲುಸಾಲು ರಜೆ ಸಿಗಲಿದೆ

ಚುನಾವಣೆಗೆ ಒಂದು ದಿನದ ಮೊದಲು (ಏ 17) ಮಹಾವೀರ ಜಯಂತಿಗಾಗಿ ಸರಕಾರೀ ರಜೆಯಿದೆ. ಚುನಾವಣೆಯ ಮರುದಿನ ಅಂದರೆ ಏಪ್ರಿಲ್ 19ರಂದು ಮತ್ತೆ ಸರಕಾರೀ ರಜೆ, ಅದು ಗುಡ್ ಫ್ರೈಡೆಗಾಗಿ. ಇದಾದ ನಂತರದ ಎರಡು ದಿನ (ಏ 20, 21) ಶನಿವಾರ, ಭಾನುವಾರ (ಪುಣ್ಯಕ್ಕೆ ಅದು ಸೆಕೆಂಡ್ ಸಾಟರ್ಡೇ ಅಲ್ಲ). ಇದೇ ರೀತಿ ಏಪ್ರಿಲ್ 22ರಂದು ಒಂದು ದಿನ ರಜೆ ಹಾಕಿದರೆ, ಎರಡನೇ ಹಂತದ ಚುನಾವಣೆಗೂ ಸಾಲುಸಾಲು ರಜೆ ಸಿಗಲಿದೆ.

2014ರ ಲೋಕಸಭಾ ಚುನಾವಣೆ

2014ರ ಲೋಕಸಭಾ ಚುನಾವಣೆ

2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ನಡೆದ ಮತದಾನದ ಪ್ರಮಾಣ, ದಕ್ಷಿಣ - ಶೇ. 55.69, ಉತ್ತರ - ಶೇ. 56.47, ಕೇಂದ್ರ - ಶೇ. 55.7 ಮತ್ತು ಗ್ರಾಮಾಂತರ - ಶೇ. 68.8. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಮೊದಲು, ನಂತರ ಬೆಂಗಳೂರು ಕೇಂದ್ರ ಅದಾದ ನಂತರ ಬೆಂಗಳೂರು ಉತ್ತರ. ಅತಿಹೆಚ್ಚು ಮತದಾನವಾದ ಕ್ಷೇತ್ರವೆಂದರೆ ಅದು ದಕ್ಷಿಣಕನ್ನಡ, ಅಲ್ಲಿ ಶೇ. 77.18 ಮತದಾನವಾಗಿತ್ತು.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ಕಳೆದ ಅಸೆಂಬ್ಲಿ ಚುನಾವಣೆ

ಕಳೆದ ಅಸೆಂಬ್ಲಿ ಚುನಾವಣೆ

ಕಳೆದ ಅಸೆಂಬ್ಲಿ ಚುನಾವಣೆ ನಡೆದ ದಿನಾಂಕ ಮೇ 12, 2018ದಂದು (ಶನಿವಾರ). ಗ್ರಾಮೀಣ ಪ್ರದೇಶದಲ್ಲಿ ಶೇ. 70ರ ಮೇಲೆ ಸರಾಸರಿ ಮತದಾನವಾಗಿದ್ದರೆ, ಬೆಂಗಳೂರಿನಲ್ಲಿನ ಮತದಾನದ ಪ್ರಮಾಣ ಜಸ್ಟ್ ಶೇ. 51. ಬೆಂಗಳೂರು ವಾಸಿಗರಿಗೆ ಇರುವ ಸಮಸ್ಯೆ ಒಂದೇ ಎರಡೇ? ಚುನಾವಣೆಯ ಮುನ್ನಾದಿನ ಬೆಂಗಳೂರು ಕೇಂದ್ರ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದಲ್ಲಿ ಹಬ್ಬವನ್ನು ಮೀರಿಸುವ ಜನಸಂದಣಿ ಇತ್ತು, ಮತದಾನ ಮಾಡದೇ ರಜೆ ಕಳೆಯಲು ಹೋದ ನಗರವಾಸಿಗರು, ಗ್ರಾಮೀಣ ಮತದಾರರ ಮುಂದೆ, ಶೇಮ್ ಶೇಮ್ ಅನಿಸಿಕೊಂಡಿದ್ದರು.

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ?ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ?

 ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ

ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ

ಇದೇ ರೀತಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯಲ್ಲೂ ಹೀಗೇ ಆಗಿತ್ತು. ಶನಿವಾರ, 22.08.2015ರಲ್ಲಿ ಚುನಾವಣೆ ನಡೆದಿತ್ತು, ಮಳೆನೀರು ಮನೆಗೆ ನುಗ್ಗಿ ವಿಪರೀತ ತೊಂದರೆಯಾಗುತ್ತಿದ್ದ ಸಮಯವದು. ರಾಜಾಕಾಲವೆ ಒತ್ತುವರಿ, ರಸ್ತೆ ಸಮಸ್ಯೆ ಮುಂತಾದ ಗಂಭೀರ ಸಮಸ್ಯೆಗಳಿದ್ದರೂ, ಬಿಬಿಎಂಪಿ ಚುನಾವಣೆಯಲ್ಲಿ ಮತದಾನವಾಗಿದ್ದು ಕೇವಲ 45% ವೋಟಿಂಗ್ ನಡೆದಿತ್ತು. ಸಿಲಿಕಾನ್ ಸಿಟಿಯ ಜನರೇ, ನೀವ್ಯಾಕೆ ಹೀಗೆ ಎಂದು ರಾಷ್ಟ್ರ ಮಟ್ಟದಲ್ಲಿ ಅಂದು ಸುದ್ದಿಯಾಗಿತ್ತು.

ನಮ್ಮ ಕರ್ತವ್ಯವನ್ನು ಮೆರೆಯುವ ಸಮಯ ಮತ್ತೆ ಬಂದಿದೆ

ನಮ್ಮ ಕರ್ತವ್ಯವನ್ನು ಮೆರೆಯುವ ಸಮಯ ಮತ್ತೆ ಬಂದಿದೆ

ಹಿಂದಿನ ಇತಿಹಾಸಗಳನ್ನೆಲ್ಲಾ ಮರೆತು ನಮ್ಮ ಕರ್ತವ್ಯವನ್ನು ಮೆರೆಯುವ ಸಮಯ ಮತ್ತೆ ಬಂದಿದೆ. ಕೇಂದ್ರದಲ್ಲಿ ಯಾವ ಸರಕಾರ ಇರಬೇಕು ಎನ್ನುವ ನಿರ್ಧರಿಸುವ ಸಮಯವಿದು. ಮಕ್ಕಳಿಗೆ ರಜೆಯಿತ್ತು, ಆಫೀಸ್ ನಲ್ಲೂ ಲೀವ್ ಸಿಕ್ತು ಎಂದು ಮತದಾನದಿಂದ ದೂರವಿರುವ ಕೆಲಸವನ್ನು ಮಾಡದೇ ಸುಭದ್ರ ದೇಶವನ್ನು ಕಟ್ಟುವಲ್ಲಿ, ಮತದಾನ ಮಾಡುವ ಮೂಲಕ ಕೈಜೋಡಿಸೋಣ. ನಮ್ಮ ಕೆಲಸವನ್ನು ನಾವು ಮಾಡೋಣ..

English summary
Loksabha elections 2019: First and Second phase elections in Karnataka on April 18 and 23rd. These dates in between series of Holidays, it is each voters responsibility of caste the votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X