ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮೀ ಹೆಬ್ಬಾಳ್ಕರ್‌: ಮೊದಲ ದಿನ 8, ಎರಡನೇ ದಿನ 7ಗಂಟೆ 'ಇಡಿ ಡ್ರಿಲ್': ಡಿಕೆಶಿಗೆ ಢವಢವ

|
Google Oneindia Kannada News

ನವದೆಹಲಿ, ಸೆ 20: ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ವರ್ಗಾವಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು, ಎರಡನೇ ದಿನವೂ ತೀವ್ರ ವಿಚಾರಣೆಗೆ ಗುರಿಪಡಿಸಿಸಲಾಗಿದೆ.

ಗುರುವಾರ ಇಡಿ ಕಚೇರಿಗೆ ತೆರಳಿದ್ದ ಹೆಬ್ಬಾಳ್ಕರ್‌, ವಿಚಾರಣೆ ಎದುರಿಸಿದ್ದರು. ಆದರೆ, ಸೂಕ್ತ ದಾಖಲೆಗಳನ್ನು ಕೊಂಡು ಹೋಗದೇ ಇದಿದ್ದರಿಂದ, ದಾಖಲೆ ಸಮೇತ ಹಾಜರಾಗುವಂತೆ ಸೂಚಿಸಲಾಗಿತ್ತು. ಹಾಗಾಗಿ, ಎರಡನೇ ದಿನವೂ ಹಾಜರಾಗಿದ್ದರು.

ಡಿ. ಕೆ. ಶಿವಕುಮಾರ್ ಜಂಘಾಬಲವನ್ನೇ ಅಡಗಿಸಿದ ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆ!ಡಿ. ಕೆ. ಶಿವಕುಮಾರ್ ಜಂಘಾಬಲವನ್ನೇ ಅಡಗಿಸಿದ ಇಡಿ ಸಲ್ಲಿಸಿದ ರಾಶಿರಾಶಿ ದಾಖಲೆ!

ವಿಚಾರಣೆಯ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಆರ್ಥಿಕ ವ್ಯವಹಾರಗಳ ಬಗ್ಗೆ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಿದ್ದಾರೆ ಎನ್ನುವ ಮಾಹಿತಿಯಿದೆ.

First Day Eight, Second Day Seven Hours ED Questions To Belagavi Rural MLA Lakshmi Hebbalkar

ಮೊದಲ ದಿನ ದಾಖಲೆ ಇಲ್ಲದಿದ್ದರೂ ಎಂಟು ಗಂಟೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಎರಡನೇ ದಿನ ಏಳು ಗಂಟೆ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ ಹನ್ನೆರಡು ಗಂಟೆಗೆ. ಹೆಬ್ಬಾಳ್ಕರ್‌, ಇಡಿ ಕಚೇರಿಗೆ ಆಗಮಿಸಿದ್ದರು.

ಇಡಿ ವಿಚಾರಣೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್‌, " ಅಧಿಕಾರಿಗಳ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಿದ್ದೇನೆ. ನಾಳೆ ಮತ್ತೆ ವಿಚಾರಣೆಗೆ ಬರುವಂತೆ, ಯಾವುದೇ ಸೂಚನೆಯಿಲ್ಲ" ಎಂದು ಹೇಳಿದ್ದಾರೆ.

" ಡಿ.ಕೆ.ಶಿವಕುಮಾರ್ ನನ್ನ ರಾಜಕೀಯ ಗುರುಗಳು ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಮ್ಮ ನಡುವೆ ಯಾವುದೇ ಹಣಕಾಸಿನ ಸಂಬಂಧವಿಲ್ಲ" ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಐಶ್ವರ್ಯಾ, ಲಕ್ಷ್ಮೀ ಯಾರನ್ನೇ ವಿಚಾರಣೆ ಮಾಡಲಿ: ಡಿಕೆಶಿಗೆ ಇರೋ ಟೆನ್ಷನ್ ಒಂದೇಐಶ್ವರ್ಯಾ, ಲಕ್ಷ್ಮೀ ಯಾರನ್ನೇ ವಿಚಾರಣೆ ಮಾಡಲಿ: ಡಿಕೆಶಿಗೆ ಇರೋ ಟೆನ್ಷನ್ ಒಂದೇ

ಡಿಕೆಶಿ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂಗಳವಾರದಂದು (ಸೆ 17) ಇಡಿ ನೋಟಿಸ್ ನೀಡಿತ್ತು.

English summary
First Day Eight, Second Day Seven Hours ED Questions To Belagavi Rural MLA Lakshmi Hebbalkar On Money Laundering Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X