ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಳಿವಳಿಕೆ ಇಲ್ಲದವರಿಂದ ಬಜೆಟ್ ಮಂಡನೆ

|
Google Oneindia Kannada News

Recommended Video

Union Budget 2020-21: ಆರ್ಥಿಕತೆ ಕುಸಿಯುವ ಬಜೆಟ್ ಅಂದ್ರು HD ಕುಮಾರಸ್ವಾಮಿ | HDK | Oneindia Kannada

ಬೆಂಗಳೂರು, ಫೆ. 01: ಆರ್ಥಿಕತೆ ಕುಸಿಯುತ್ತಿರುವ ಸಂದರ್ಭದಲ್ಲಿ ದೇಶಕ್ಕೆ ಮಾರಕವಾಗುವಂತಹ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಮತ್ತಷ್ಟು ಅಧೋಗತಿಗೆ ಇಳಿಯುವಂತೆ ಬಜೆಟ್‌ ತಯಾರಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಪ್ರಗತಿ ಕಾಣುವಂತ ಆಸೆಗಳನ್ನೂ ಕೂಡ ಇಟ್ಟುಕೊಳ್ಳಲು ಆಗದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರ ಬಜೆಟ್ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕೇವಲ ಅಂಕಿ ಅಂಶಗಳ ಬಜೆಟ್ ಇದಾಗಿದ್ದು, ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ಎಷ್ಟು ಯೋಜನೆಗಳು ಅನುಷ್ಠಾನವಾಗಿವೆ? ಎಷ್ಟು ಯೋಜನೆಗಳನ್ನು ಎಷ್ಟು ಈಡೇರಿಸಲಾಗಿದೆ? ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಳೆದ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಮೀಸಲಿರಿಸಿದ್ದ 1.3 ಲಕ್ಷ ಕೋಟಿ ರೂ. ಅನುದಾನವನ್ನು ಕಡಿತಗೊಳಿಸಿ 99 ಸಾವಿರ ಕೋಟಿ ರೂ. ಗಳಿಗೆ ನಿಗದಿಗೊಳಿಸಿದ್ದಾರೆ. ಇದರಿಂದ ಸುಮಾರು 30 ಸಾವಿರ ಕೋಟಿ ರೂ.ಗಳ ಅನುದಾನ ಶಿಕ್ಷಣ ಇಲಾಖೆಗೆ ಕಡಿಮೆ ಆಗಿದೆ ಎಂದು ಆರೋಪಿಸಿದ್ದಾರೆ.

ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು? ಆದಾಯ ತೆರಿಗೆ ಮಿತಿ ಹೆಚ್ಚಳವಿಲ್ಲ, ನಿರ್ಮಲಾ ಹೇಳಿದ ತೆರಿಗೆ ಲೆಕ್ಕವೇನು?

ಜನಮಿಶನ್ ಯೋಜನೆಗೆ ಜನತೆಗೆ ಉಪಯೋಗ ಆಗದಿರುವಷ್ಟು ಹಣವನ್ನು ಮೀಸಲಿಟ್ಟಿದ್ದಾರೆ. ಕಿಸಾನ್ ಉಡಾಣ್ ಯೋಜನೆ ಅಂದ್ರೆ ಎನೂ? ರೈತರನ್ನು ರಸ್ತೆ ಮ ಮೇಲೆ ಓಡಾಡುವುದನ್ನು ಬಿಡಿಸಿ ಆಕಾಶದ ಮೇಲೆ ಓಡಾಡಿಸುತ್ತಾರಾ?. ಬಿಜೆಪಿ ಸರ್ಕಾರದ ಘೋಷಣೆಗಳು ದೇಶದ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಇಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಮಾಡುವ ಯೋಜನೆಗಳಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ವರ್ಷದ ಇಂಟರ್ನಶಿಪ್ ಕೊಡುವ ಘೋಷಣೆ ಮಾಡಿದ್ದಾರೆ. ಇಂಟರ್ನಶಿಪ್ ಕೊಡುತ್ತಾರೆ. ಆದರೆ ಆ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡುವವರು ಯಾರೂ? ಎಂದು ಎಚ್‌ಡಿಕೆ ಬಜೆಟ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

Finance Minister Nirmala Sitharaman has presented fatal Budget to the country

ತಿಳಿವಳಿಕೆ ಇಲ್ಲದವರಿಂದ ಬಜೆಟ್: ಬಜೆಟ್ ತಯಾರಿಕೆಯ ತಿಳಿವಳಿಕೆ ಇಲ್ಲದೆ ಇದ್ದರೆ, ತಿಳಿವಳಿಕೆ ಇರುವಂತಹ ಜನರಿಂದ ಮಾಹಿತಿ ಪಡೆದುಕೊಂಡು ಬಜೆಟ್ ಮಂಡನೆ ಮಾಡಬೇಕಿತ್ತು. ಆಗ ಸ್ವಲ್ಪ ಮಟ್ಟಿಗೆ ಆಗುತ್ತಿರುವ ಹಾನಿಯನ್ನು ತಡೆಯಬಹುದಿತ್ತು. ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಮತ್ತಷ್ಟು ಕುಸಿಯುವಂತೆ ಮಾಡುವ ಬಜೆಟ್ ಇದಾಗಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕತೆ ಮತ್ತಷ್ಟು ಅಧೋಗತಿಯತ್ತ ಹೋಗುವ ವಾತಾವರಣವನ್ನು ಬಜೆಟ್ ಸೃಷ್ಟಿಸಿದೆ. ಭೂಸ್ವಧೀನ ಕಾನೂನಿನ ಪ್ರಕಾರ ರೈತರ ಭೂಮಿಯನ್ನು ಲೀಸ್‌ಗೆ ಕೊಡಲು ತೀರ್ಮಾವನ್ನು ಮಾಡಿದ್ದಾರೆ. ಯಾರ ಅನುಮತಿ ಪಡೆದು ಲೀಸ್‌ ಕೊಡ್ತಾರೆ. ರೈತರ ಹೊಲ ಲೀಸ್‌ಗೆ ಕೊಡುವ ಕಾನೂನು ಮತ್ತೊಂದು ಸಿಎಎ ಕಾಯ್ದೆಯಂತೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

English summary
Finance Minister Nirmala Sitharaman has presented a Union Budget that could be fatal to the country.Former CM HD Kumaraswamy said this would be even more deadly for the country's economy. Kumaraswamy has commented on the Union Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X