ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದ ಮತ್ತೊಂದು ಶಾಕ್!

|
Google Oneindia Kannada News

ಬೆಂಗಳೂರು, ಜೂ. 30: ಜಗತ್ತಿನಲ್ಲಿ ಕೋವಿಡ್-19ನಿಂದ ತೊಂದರೆಗೆ ಒಳಗಾಗದ ಜನರೇ ಇಲ್ಲ ಎಂಬಂತಾಗಿದೆ. ಕೊರೊನಾ ವೈರಸ್ ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆಯನ್ನು ರದ್ದು ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ವಾರ್ಷಿಕ ಗಳಿಕೆ ರಜೆಗಳನ್ನು ಕೂಡ ರದ್ದು ಪಡಿಸಿದೆ.

ಸರ್ಕಾರಿ ನೌಕರರಿಗೆ ಪ್ರತಿ ವರ್ಷ ಅವರ ರಜೆಗಳ ಉಳಿಕೆಯಲ್ಲಿ 30 ದಿನಗಳ ರಜೆಗಳಿಗೆ ಪರ್ಯಾಯವಾಗಿ ಅಷ್ಟು ದಿನಗಳ ಸಂಬಳವನ್ನು ನೀಡುತ್ತಿತ್ತು. ಆದರೆ ಮೊದಲ ಬಾರಿಗೆ, ಈ ವರ್ಷ ಕೊರೊನಾ ವೈರಸ್, ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಉಳಿತಾಯ ಮಾಡಲು ಕ್ರಮ ವಹಿಸುತ್ತಿದೆ.

ಸರ್ಕಾರದಿಂದ ಸಿಹಿ ಸುದ್ದಿ: ಉದ್ಯೋಗಿಗಳ ಭತ್ಯೆಗೆ ತೆರಿಗೆ ವಿನಾಯಿತಿ!ಸರ್ಕಾರದಿಂದ ಸಿಹಿ ಸುದ್ದಿ: ಉದ್ಯೋಗಿಗಳ ಭತ್ಯೆಗೆ ತೆರಿಗೆ ವಿನಾಯಿತಿ!

ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ 2021 ರ ಜೂನ್ ವರೆಗೆ ತುಟ್ಟಿ ಭತ್ಯೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಈಗ ಗಳಿಕೆ ರಜೆಯನ್ನೂ ರದ್ದುಪಡಿಸುವ ಮೂಲಕ ಸರ್ಕಾರಿ ನೌಕರರಿಗೆ ಶಾಕ್ ನೀಡಿದೆ.

 Karnataka state finace department ordered cancellation of leave encashment facility for state govt employees

ಈ ಮಧ್ಯೆ 2020 ಡಿಸೆಂಬರ್ ನಲ್ಲಿ ನಿವೃತ್ತಿ ಹೊಂದುವ ನೌಕರರು ಮಾತ್ರ ಗಳಿಕೆ ರಜೆ ಸೌಲಭ್ಯವನ್ನು ಪಡೆಯಬಹುದು ಎಂದು ಆರ್ಥಿಕ ಇಲಾಖೆ ತಿಳಿಸಿದೆ.

English summary
The finance department has ordered the cancellation of the leave encashment facility for state government employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X