ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಕರ್ನಾಟಕಕ್ಕೆ ಬಂತು ಮಲೇಷ್ಯಾ ಮರಳು!

By Gururaj
|
Google Oneindia Kannada News

ಬೆಂಗಳೂರು, ಜೂನ್ 14 : 'ಮಲೇಷ್ಯಾದಿಂದ 6 ಹಡಗುಗಳಲ್ಲಿ ರಾಜ್ಯಕ್ಕೆ ಮರಳು ಆಗಮಿಸಿದೆ. ಎರಡು ತಿಂಗಳಿನಲ್ಲಿ ಅದನ್ನು ಜನರಿಗೆ ಹಂಚಿಕೆ ಮಾಡಲಾಗುತ್ತದೆ' ಎಂದು ಸಚಿವ ರಾಜಶೇಖರ ಪಾಟೀಲ ಹೇಳಿದರು. ಮಲೇಷ್ಯಾದಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮರಳನ್ನು ಆಮದು ಮಾಡಿಕೊಳ್ಳುತ್ತಿವೆ.

ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಆಂಧ್ರಪ್ರದೇಶದ ಕೃಷ್ಣಪಟ್ಟಣ ಬಂದರಿಗೆ 3, ಮಂಗಳೂರು ಬಂದರಿಗೆ ಮೂರು ಹಡಗುಗಳಲ್ಲಿ ಮರಳು ಬಂದಿದೆ' ಎಂದು ಸಚಿವರು ಮಾಹಿತಿ ನೀಡಿದರು.

ಬಿಡದಿಯಲ್ಲಿ ಸಿಗಲಿದೆ ಮಲೇಷಿಯಾದ ಮರಳು ಭಾಗ್ಯಬಿಡದಿಯಲ್ಲಿ ಸಿಗಲಿದೆ ಮಲೇಷಿಯಾದ ಮರಳು ಭಾಗ್ಯ

'ಮರಳು ವಿಲೇವಾರಿಗೆ ಪರವಾನಗಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಎರಡು ತಿಂಗಳವೊಳಗಾಗಿ ಮರಳು ಜನರ ಕೈ ಸೇರಲಿದೆ. ಮರಳಿನ ಕೊರತೆ ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತಿದೆ' ಎಂದು ಸಚಿವರು ಹೇಳಿದರು.

Finally Malaysian sand come to Karnataka

'ರಾಜ್ಯದಲ್ಲಿ 30 ಮಿಲಿಯನ್ ಮೆಟ್ರಿಕ್ ಟನ್ ಮರಳಿಗೆ ಬೇಡಿಕೆ ಇದೆ. ಪ್ರಸ್ತುತ 3.5ಎಂಎಂಟಿ ನದಿ ಮರಳು, 23 ಎಂಎಂಟಿ ಎಂ-ಸ್ಯಾಂಡ್ ಲಭ್ಯವಿದೆ. 3.5 ಎಂಎಂಟಿ ಮರಳು ಕೊರತೆ ನೀಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ 1.40 ಕೋಟಿಯ ಯಂತ್ರಗಳು ವಶಅಕ್ರಮ ಮರಳು ಅಡ್ಡೆ ಮೇಲೆ ದಾಳಿ 1.40 ಕೋಟಿಯ ಯಂತ್ರಗಳು ವಶ

ಮೇಲಷ್ಯಾದಿಂದ ಭಾರತದ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಮರಳನ್ನು ಆಮದು ಮಾಡಿಕೊಳ್ಳುತ್ತಿವೆ. ಅಕ್ಟೋಬರ್‌ನಲ್ಲಿ ತಮಿಳುನಾಡಿಗೆ ಮರಳು ಬಂದಿದೆ. ಈಗ ಕರ್ನಾಟಕಕ್ಕೆ ಮಲೇಷ್ಯಾ ಮರಳು ಬಂದಿದೆ.

ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ.(ಎಂಎಸ್‌ಐಎಲ್) ಮಲೇಷ್ಯಾದಿಂದ 54,000 ಟನ್ ಮರಗಳನ್ನು ಖರೀದಿ ಮಾಡಿದೆ. 50 ಕೆಜಿ ಬ್ಯಾಕ್‌ಗಳನ್ನಾಗಿ ಮಾಡಿ ರಾಜ್ಯದಲ್ಲಿ ಅದು ಮಾರಾಟ ಮಾಡಲಿದೆ.

English summary
Finally Malaysian sand come to Karnataka. Mysore Sales International Limited (MSIL) purchased the 54,000 tonnes of sand from Malaysia, would sell it in state in 50kg bags. Tamil Nadu and Karnataka received sand from Malaysia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X