• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಅವರೇ, ಡಬ್ಬಿಂಗ್ ನಿಷೇಧ ತೆರವು ಮಾಡಿ: ಆನ್ ಲೈನ್ ಅರ್ಜಿ

By Mahesh
|

ಬೆಂಗಳೂರು, ಜುಲೈ 30: ಕರ್ನಾಟಕದಲ್ಲಿ ಇತರೆ ಭಾಷೆಯಲ್ಲಿರುವ ಜ್ಞಾನ, ಮನರಂಜನೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರದಂತೆ ಡಬ್ಬಿಂಗ್ ಮೇಲೆ ಒಂದು ಅಸಂವಿಧಾನಿಕವಾದ ಖಾಸಗಿ ನಿಷೇಧ ಜಾರಿಯಲ್ಲಿದೆ. ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಡಬ್ಬಿಂಗ್ ನಿಷೇಧ ಕಾನೂನು ಬಾಹಿರ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನ್ನ ಆದೇಶದಲ್ಲಿ ತಿಳಿಸಿದೆ.

ಈ ಆದೇಶವನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವಂತೆ ಕೋರಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಗೆ ಸಹಿ ಹಾಕಲು ಲೇಖನ ಕೊನೆಯಲ್ಲಿ ಲಿಂಕ್ ನೀಡಲಾಗಿದೆ. [ಡಬ್ಬಿಂಗ್ ಬೆಂಬಲಿಗರಿಗೆ ಆನೆಬಲ: ವಾಣಿಜ್ಯ ಮಂಡಳಿಗೆ ಮುಖಭಂಗ]

ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾ ಹಕ್ಕುಗಳಲ್ಲಿ ಡಬ್ಬಿಂಗ್ ಅನ್ನು ಭಾಷೆಯನ್ನು ಪಸರಿಸುವ ಒಂದು ಸಾಧನವನ್ನಾಗಿ ಗುರುತಿಸಿದೆ. ಜಗತ್ತಿನಾದ್ಯಂತ ಡಬ್ಬಿಂಗ್ ಅನ್ನು ಭಾಷೆ ಬೆಳೆಸಲು, ಹರಡಲು ಒಂದು ಸಾಧನವಾಗಿಯೇ ಬೇರೆ ಬೇರೆ ನುಡಿ ಸಮಾಜಗಳು ಬಳಸುತ್ತಿವೆ. ಹೀಗಿದ್ದರೂ ಖಾಸಗಿ ನಿಷೇಧವೊಂದರಿಂದಾಗಿ ಜಗತ್ತಿನ ಅತ್ಯು ತ್ತಮವಾದ ಮಾಹಿತಿ, ಜ್ಞಾನ, ಮನರಂಜನೆಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಸವಿಯುವ ಆಯ್ಕೆ ಸ್ವಾತಂತ್ರ್ಯದಿಂದ ಕನ್ನಡಿಗರು ವಂಚಿತರಾಗಿದ್ದಾರೆ. [ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]

ಆಯ್ಕೆಯ ಹಕ್ಕನ್ನು ಕಿತ್ತುಕೊಳ್ಳಬೇಡಿ: ಡಬ್ಬಿಂಗ್ ಅನ್ನು ಒಂದು ಉದ್ಯಮದಂತೆ ಮಾಡುವುದರ ಮೇಲಾಗಲೀ, ಡಬ್ ಆದ ಕಾರ್ಯಕ್ರಮಗಳನ್ನು ನೋಡುವುದರ ಮೇಲಾಗಲೀ ಭಾರತದ ಸಂವಿಧಾನ ಮತ್ತು ಕಾನೂನುಗಳು ಯಾವುದೇ ನಿರ್ಬಂಧ ಹೇರಿಲ್ಲ. ಹೀಗಿದ್ದರೂ ಕೆಲವು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಕಾನೂನು ಧಿಕ್ಕರಿಸಿಯಾದರೂ ಕನ್ನಡದಲ್ಲಿ ಡಬ್ಬಿಂಗ್ ಅನ್ನು ತಡೆಯುತ್ತೇವೆ ಅನ್ನುವ ಬೆದರಿಕೆಯ ಮಾತುಗಳನ್ನಾಡುತ್ತಿದ್ದಾರೆ. [ಡಬ್ಬಿಂಗ್ ಬೇಕೋ ಬೇಡವೋ : ಚರ್ಚೆ ಮುಂದುವರಿಯಲಿ]

ಇಂತಹ ಹೇಳಿಕೆಗಳ ಮೂಲಕ ಕಾನೂನು ಬದ್ಧವಾಗಿ ಡಬ್ಬಿಂಗ್ ಮಾಡಬೇಕೆಂದಿರುವ ಜನರನ್ನು ಮತ್ತು ಡಬ್ ಆದ ಕಾರ್ಯಕ್ರಮಗಳನ್ನು ನೋಡಬೇಕು ಅನ್ನುವ ಕನ್ನಡಿಗರ ನ್ಯಾಯಯುತವಾದ ಆಯ್ಕೆಯ ಹಕ್ಕನ್ನು ಬಲವಂತವಾಗಿ ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆ ಸ್ಪಷ್ಟವಾಗಿ ಕರ್ನಾಟಕದ ಕಾನೂನು-ಸುವ್ಯವಸ್ಥೆಗೆ ಮತ್ತು ಕರ್ನಾಟಕದ ಸರ್ಕಾರದ ಸಾರ್ವಭೌಮತ್ವಕ್ಕೆ ಸವಾಲು ಎಸೆಯುವಂತಿದೆ.

ಕನ್ನಡಿಗರ ಪ್ರತಿನಿಧಿಯಾದ ನೀವು ಇದನ್ನು ಗಂಭೀರವಾಗಿ ಪರಿಗಣಿಸಿ, ಸಂವಿಧಾನವು ಮಾನ್ಯ ಮಾಡಿರುವ ಆಯ್ಕೆ ಸ್ವಾತಂತ್ರ್ಯವನ್ನು ಕನ್ನಡಿಗರೆಲ್ಲರಿಗೆ ಕಲ್ಪಿಸುವತ್ತ ಡಬ್ಬಿಂಗ್ ವಿಷಯದಲ್ಲಿ ಇರುವ ತೊಡಕುಗಳನ್ನು ನಿವಾರಿಸಬೇಕೆಂದು ಈ ಸಹಿ ಸಂಗ್ರಹ ಅಭಿಯಾನದ ಮೂಲಕ ಕೇಳಿಕೊಳ್ಳುತ್ತೇವೆ.

ಎಂದು ಅರ್ಜಿದಾರರಾದ ಪ್ರಿಯಾಂಕ್ ಕತ್ತಲಗಿರಿ,ಆನಂದ್. ಜಿ.,ವಸಂತ್ ಶೆಟ್ಟಿ,ವಲ್ಲೀಶ್ ಕುಮಾರ್,,ಬಾಬು ಅಜಯ್,ಮಲ್ಲೇಶ್ ಬಿ. ಜಿ.,ಜಯಂತ್ ಸಿದ್ಮಲ್ಲಪ್ಪ ಅವರು ಕೋರಿದ್ದಾರೆ. ಆಸಕ್ತರು ಈ ಲಿಂಕ್ ಕ್ಲಿಕ್ ಮಾಡಿ ಆನ್ ಲೈನ್ ಅರ್ಜಿಗೆ ನಿಮ್ಮ ಸಹಿ ಹಾಕಿ ಬೆಂಬಲ ಸೂಚಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An online petition has been put forward to CM of Karnataka Siddaramaiah to implement the CCI order which allows Dubbing in Kannada cinema and TV shows. Karnataka government should act and allow Kannadigas to enjoy World Cinema in their languages said Petitioners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more