ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ರು ಬರೀತಾರೆ ಎಲೆಕ್ಷನ್ ಹಾಡು, ಚುನಾವಣಾ ರಾಯಭಾರಿ ರಾಹುಲ್ ದ್ರಾವಿಡ್

By Manjunatha
|
Google Oneindia Kannada News

ಬೆಂಗಳೂರು,ಮಾರ್ಚ್ 27: ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ ಹಾಗಾಗಿ ಇದನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ಹೊಸ ಕ್ರಮಗಳನ್ನು ಕೈಗೊಂಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯುವ ಮತದಾರರು ದಾಖಲೆ ಸಂಖ್ಯೆಯಲ್ಲಿ ಹೆಚ್ಚಿರುವ ಕಾರಣ ಮತಗಟ್ಟೆಯತ್ತ ಅವರನ್ನು ಸೆಳೆಯಲು, ಹಾಗೂ ಮತದಾನದ ಬಗ್ಗೆ ಜಾಗೃತಿಯನ್ನು ಅವರ ಧಾಟಿಯಲ್ಲೇ ಅವರಿಗೆ ತಲುಪಿಸಲು ಚುನಾವಣೆ ಥೀಮ್ ಸಾಂಗ್ ಬರೆಸುತ್ತಿದ್ದು, ಅದರ ಜವಾಬ್ದಾರಿಯನ್ನು ವಿಕಟ ಕವಿ ಯೋಗರಾಜ್ ಭಟ್ಟರಿಗೆ ನೀಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ನಿರ್ದೇಶಕ, ಗೀತ ರಚನೆಕಾರ ಯೋಗರಾಜ್ ಭಟ್ ಅವರು ಚುನಾವಣೆಗಾಗಿ ತಮ್ಮ ಎಂದಿನ 'ಭಟ್ರ ಶೈಲಿ'ಯಲ್ಲಿ ಹಾಡೊಂದು ಬರೆಯಲಿದ್ದು, ಆದಷ್ಟು ಶೀಘ್ರವಾಗಿ ಅದು ಬಿಡುಗಡೆ ಕಾಣಲಿದೆ.

Film Director Yograj Bhat writing Theme song for Karnataka assembly elections 2018

ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆ ನಡೆಸುವ ಧ್ಯೇಯ ಹೊಂದಿರುವ ರಾಜ್ಯ ಚುನಾವಣಾ ಆಯೋಗ 2018ರ ಕರ್ನಾಟಕ ವಿಧಾನಸಭಾ ಚುನಾವಣಾ ರಾಯಭಾರಿಯಾಗಿ ಸಜ್ಜನ ಕ್ರಿಕೆಟಿಗ, ಜವಾಬ್ದಾರಿಯುತ ನಾಗರೀಕ ರಾಹುಲ್ ದ್ರಾವಿಡ್ ಅವರನ್ನು ಆರಿಸಿಕೊಂಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳುಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

ಮತದಾರರ ಸಂಖ್ಯೆ ಹೆಚ್ಚಾಗಿರುವುದು, ಜೊತೆಗೆ ಈ ಬಾರಿ ರಾಜ್ಯದೆಲ್ಲೆಡೆ ಒಂದೇ ಹಂತದ ಚುನಾವಣೆ ಇರುವುದರಿಂದ ರಾಜ್ಯ ಚುನಾವಣೆ ಆಯೋಗದ ಮೇಲೆ ಜವಾಬ್ದಾರಿ ಹೆಚ್ಚಿದ್ದು, ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಹಲವು ಹೊಸ ಕ್ರಮಗಳನ್ನು ಚುನಾವಣಾ ಆಯೋಗ ಈ ಬಾರಿ ಹೊಸದಾಗಿ ಜಾರಿಗೆ ತಂದಿದೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

ಪ್ರಮುಖ ಕ್ರಮಗಳ ಪಟ್ಟಿ ಇಲ್ಲಿದೆ....

* 450 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಮೊದಲು.
* ಮೊದಲ ಬಾರಿಗೆ ಅಂಗವಿಕಲ ರಾಜ್ಯ ಸರ್ಕಾರಿ ನೌಕರರು ರಾಜ್ಯದ ಕೆಲವು ಮತಗಟ್ಟೆಗಳಲ್ಲಿ ಕೆಲವು ವಿಶೇಷ ಕರ್ತವ್ಯಗಳಿಗೆ ನೇಮಕವಾಗಲಿದ್ದಾರೆ.
* ಸಜ್ಜನ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ರಾಯಭಾರಿ.
* ನಿರ್ದೇಶಕ, ಗೀತರಚನೆಕಾರ ಯೋಗರಾಜ್ ಭಟ್ ಅವರು ಬರೆದಿರುವ ಹಾಡು ಈ ಬಾರಿಯ ಚುನಾವಣೆಯ ಥೀಮ್ ಸಾಂಗ್ ಆಗಲಿದೆ.
* ಬುಡಕಟ್ಟು ಮತದಾರರು ಹೆಚ್ಚಿಗಿರುವ ಮತಗಟ್ಟೆಗಳಲ್ಲಿ ವಿಶಿಷ್ಟ ರೀತಿಯ ಮತಗಟ್ಟೆ ರಚನೆ, ಸ್ಥಳೀಯ ಸಂಸ್ಕೃತಿಯನ್ನು ಆಚರಣೆಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮತಗಟ್ಟೆ ವಿನ್ಯಾಸ.
* ಮೊಬೈಲ್ ಚುನಾವಣಾ ವೀಕ್ಷಕರು ಈ ಬಾರಿ ಮೊದಲ ಬಾರಿಗೆ ಜಿಪಿಎಸ್ ಅಳವಡಿತ ವಾಹನಗಳನ್ನು ಬಳಸಲಿದ್ದಾರೆ.
* ಜಿಐಎಸ್ ತಂತ್ರಜ್ಞಾನದ ಮೂಲಕ ಮತಗಟ್ಟೆಯ ಕ್ಷಣ-ಕ್ಷಣದ ವಿವರ ಮತ್ತು ಡಿಜಿಟಲ್ ನಕ್ಷೆಯ ರಚಿಸಿ ನಿಗಾ.
* ಎಲ್ಲಾ ವಿಧಾನಸಭೆ ಕ್ಷೇತ್ರಗಳ ಡಿಜಿಟಲ್ ನಕ್ಷೆ ತಯಾರಿ.
* ಅಂಗವಿಕಲ ಮತದಾರರ ವಿಶೇಷ ಪಟ್ಟಿ ತಯಾರಿ, ಮತಗಟ್ಟೆ ಬಳಿ ಅಂಗವಿಕಲರ ಸ್ನೇಹಿ ವ್ಯವಸ್ಥೆ ರಚನೆ, ವೀಲ್‌ ಚೇರ್ ಸಹ ಲಭ್ಯ ಇರುವಂತೆ ನಿಗಾ, ಅಂಗವಿಕಲ ಮತದಾರರು ವೀಲ್‌ ಚೇರ್ ಅನ್ನು ಮುಂಗಡ ಕಾಯ್ದಿರಿಸಿಕೊಳ್ಳಲು ಅವಕಾಶ.
* ಎಸ್‌ಎಂಎಸ್ ಮೂಲಕ ಮತಗಟ್ಟೆ ಮಾಹಿತಿ, ಆಪ್ ಮೂಲಕ ಮತಗಟ್ಟೆ ಮಾಹಿತಿ ಮತ್ತು ನಕ್ಷೆ.
* ಹೆಚ್ಚು ಮತದಾರರಿರುವ ಕ್ಷೇತ್ರದಲ್ಲಿ ಸರತಿ ಸಾಲಿನ ಬಗ್ಗೆಯೂ ಎಸ್‌ಎಂಎಸ್ ಹಾಗೂ ಮೊಬೈಲ್ ಆಪ್‌ನಲ್ಲಿ ಮಾಹಿತಿ.
* ತಂತ್ರಜ್ಞಾನ ಬಳಕೆ ಮೂಲಕ ಎಲ್ಲಾ ಕ್ಷೇತ್ರದ ಚುನಾವಣಾ ಮಾಹಿತಿ ಒಂದೇ ಸೂರಿನಡಿ ಲಬ್ಯವಾಗುವಂತೆ ಸೌಲಭ್ಯ.
* ಚುನಾವಣೆ ಮತ್ತು ಮತದಾನ ನಡೆಯುವ ಸಂದರ್ಭ ಬರುವ ದೂರುಗಳನ್ನು ಜಿಐಎಸ್ ತಂತ್ರಜ್ಞಾನ ಬಳಸಿ ಶೀಘ್ರವೇ ಬಗೆ ಹರಿಸುವ ಪ್ರಯತ್ನ.
* ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಬಗ್ಗೆ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳಿಗೆ ರಾಜ್ಯದಾದ್ಯಂತ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳು.

English summary
State Election commission choose Gentleman cricketer Rahul Dravid as Icon of Karnataka assembly elections 2018. And Film Director Yograj Bhat writing Theme song for 2018 Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X