ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಇಲಾಖೆಯ 16, 838 ಹುದ್ದೆ ಭರ್ತಿ ಮಾಡಿ: ಹೈಕೋರ್ಟ್

|
Google Oneindia Kannada News

ಬೆಂಗಳೂರು, ಜುಲೈ 21 : ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 16, 838 ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಪೊಲೀಸರ ಅವಶ್ಯಕತೆ ಇದೆ ಎಂದು ವರದಿ ನೀಡುವಂತೆಯೂ ಸೂಚನೆ ನೀಡಿದೆ.

ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎಚ್. ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಆದೇಶ ನೀಡಿದೆ.

ಕರ್ನಾಟಕ ಸಶಸ್ತ್ರ ಮೀಸಲು ಪಡೆ ಎಸ್ಐ, 40 ಹುದ್ದೆಗಳಿಗೆ ಅರ್ಜಿ ಹಾಕಿಕರ್ನಾಟಕ ಸಶಸ್ತ್ರ ಮೀಸಲು ಪಡೆ ಎಸ್ಐ, 40 ಹುದ್ದೆಗಳಿಗೆ ಅರ್ಜಿ ಹಾಕಿ

Fill 16, 838 post in police department orders High Court

ಸರ್ಕಾರಿ ವಕೀಲ ಡಿ. ನಾಗರಾಜ್ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ನ್ಯಾಯಾಲಯಕ್ಕೆ ವಿವರ ನೀಡಿದರು. ಖಾಲಿ ಇರುವ 16, 838 ಹುದ್ದೆಗಳನ್ನು ಈ ವರ್ಷದ ಅಂತ್ಯದೊಳಗೆ ಭರ್ತಿ ಮಾಡಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತು.

ಔರಾದ್ಕರ್ ವರದಿ ಜಾರಿ : ಪೊಲೀಸರ ವೇತನ ಎಷ್ಟು ಹೆಚ್ಚಾಗಲಿದೆ?ಔರಾದ್ಕರ್ ವರದಿ ಜಾರಿ : ಪೊಲೀಸರ ವೇತನ ಎಷ್ಟು ಹೆಚ್ಚಾಗಲಿದೆ?

ಸರ್ಕಾರಿ ವಕೀಲ ಡಿ. ನಾಗರಾಜ್ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ನ್ಯಾಯಾಲಯಕ್ಕೆ ವಿವರ ನೀಡಿದರು. ಖಾಲಿ ಇರುವ 16, 838 ಹುದ್ದೆಗಳನ್ನು ಈ ವರ್ಷದ ಅಂತ್ಯದೊಳಗೆ ಭರ್ತಿ ಮಾಡಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತು.

ಪೊಲೀಸರನ್ನು ಮಾಧ್ಯಮಗಳಿಂದ ದೂರ ಮಾಡಿದ ಹೊಸ ಆದೇಶಪೊಲೀಸರನ್ನು ಮಾಧ್ಯಮಗಳಿಂದ ದೂರ ಮಾಡಿದ ಹೊಸ ಆದೇಶ

1,223 ಸಬ್ ಇನ್‌ಸ್ಟೆಕ್ಟರ್ ಮತ್ತು 13, 185 ಕಾನ್ಸ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ ಎಂದು ವಕೀಲ ಡಿ. ನಾಗರಾಜ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಇಲಾಖೆಯಲ್ಲಿ ಮಂಜೂರಾದ ಒಟ್ಟು ಹುದ್ದೆಗಳ ಸಂಖ್ಯೆ 65, 214 ಇವುಗಳ ಪೈಕಿ 48, 376 ಹುದ್ದೆ ಭರ್ತಿಯಾಗಿವೆ. 16, 838 ಹುದ್ದೆ ಖಾಲಿ ಇವೆ. ಕಾನ್ಸಸ್ಟೇಬಲ್ ಶ್ರೇಣಿಯ 9146 ಹುದ್ದೆಗಳು ಖಾಲಿ ಇವೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಲಾಗಿದೆ.

English summary
Karnataka high court ordered the Karnataka government to fill 16, 838 post in police department. Court-ordered in the time of proceedings of public interest litigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X