ಚಿಕ್ಕಮಗಳೂರು: ಕಾಲೇಜು ಹುಡುಗರ ಮಧ್ಯೆ ಗಲಾಟೆ, ಮೇಷ್ಟ್ರಿಗೂ ಗೂಸಾ

Posted By: ಚಿಕ್ಕಮಗಳೂರು ಪ್ರತಿನಿಧಿ
Subscribe to Oneindia Kannada

ಚಿಕ್ಕಮಗಳೂರು, ಮಾರ್ಚ್‌ 20: ಇಲ್ಲಿನ ಕೊಪ್ಪಾ ಪದವಿ ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರ ಎದುರೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಕೊಪ್ಪಾದಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು, ಇಂದು ಅದರ ಸಮಾರೋಪ ಸಮಾರಂಭ ಇತ್ತು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಮೈ-ಕೈ ತಾಗಿಸಿದರೆಂದು ಒಂದು ಗುಂಪು ಜಗಳ ತೆಗೆಯಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೊದಲಿಗೆ ಮಾತಿನ ಹಂತದಲ್ಲಿದ್ದ ಜಗಳ ಗುಂಪು ಸೇರುತ್ತಾ ಸೇರುತ್ತಾ ದೊಡ್ಡದಾಗಿ ಕೈ-ಕೈ ಮಿಸಾಯಿಸುವ ಹಂತಕ್ಕೆ ಹೋಯಿತು. ವಿದ್ಯಾರ್ಥಿಗಳ ಜಗಳ ಬಿಡಿಸಲು ಬಂದ ಉಪನ್ಯಾಸಕರಿಗೂ ವಿದ್ಯಾರ್ಥಿಗಳು ಧರ್ಮದೇಟು ನೀಡಿದರು.

fight between students in Koppa degree college

ಸಂತೋಶವಾಗಿ ಮುಗಿಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮ ತೀರಾ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾ-ಮಾರಿ ಆಗಿ ದ್ವೇಷಕ್ಕೆ ತಿರುಗಿತು. ವಿದ್ಯಾರ್ಥಿಗಳು ಪರಸ್ಪರ ಬಡಿದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿಗಳ ಮೇಲೆ ಕಾಲೇಜು ಆಡಳಿತ ಮಂಡಳಿ ಶಿಸ್ತುಕ್ರಮ ಜರುಗಿಸಲು ಚಿಂತಿಸಿದ್ದು, ಯಾವ ಶಿಕ್ಷೆ ನೀಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chikkamagalur's Koppa degree college students had fight for simple reason. Students fight for just touching hand while dancing. lecturers were also beaten up by students who came to stop fight.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ