• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

32 ಸಾವಿರ ರೂ ಗಡಿ ಕ್ರಮಿಸಿದ ಚಿನ್ನದ ದರ

By Srinath
|

ಬೆಂಗಳೂರು, ಅ.25: ಆಂತರಿಕ ಮಾರುಕಟ್ಟೆ ಮತ್ತೆ ಬೇಡಿಕೆ ಕುದುರಿಸಿಕೊಂಡಿರುವ ಚಿನ್ನ ಜಾಗತಿಕ ಮಟ್ಟದಲ್ಲೂ ದೃಢ ವಹಿವಾಟು ಕಂಡುಕೊಂಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 32,410 ರೂ. ಆಗಿದೆ.

ಸೆಪ್ಟೆಂಬರ್ 4ರಂದು ಈ ಗಡಿ ತಲುಪಿದ್ದ ಚಿನ್ನ ಇಂದು ದಿಢೀರನೆ ಸುಮಾರು 500 ರೂ ಏರಿಕೆ ಗಳಿಸಿತು. ಆದರೆ ಔದ್ಯಮಿಕ ವಲಯದಿಂದ ಬೇಡಿಕೆ ಕುದುರಿಸಿಕೊಳ್ಳದ ಬೆಳ್ಳಿ ಕೆಜಿಗೆ 50 ಸಾವಿರ ಗಡಿಯಲ್ಲೇ ನಿಂತಿದೆ.

ಹಬ್ಬದ ಸಾಲು ಮತ್ತು ಮದುವೆ ಹಂಗಾಮ ಶುರುವಾಗುತ್ತಿರುವುದರಿಂದ ಗ್ರಾಹಕರು ಚಿನ್ನದ ಖರೀದಿಗೆ ಮುಗಿಬೀಳುತ್ತಿದ್ದಾರೆ. ಹಾಗಾಗಿ ದಾಸ್ತಾನುಗಾರರು ಮತ್ತು ಆಭರಣ ಮಳಿಗೆಯವರು ಚಿನ್ನಕ್ಕೆ ಹೆಚ್ಚು ಬೇಡಿಕೆಯಿಟ್ಟಿರುವ ಪರಿಣಾಮ ಚಿನ್ನದ ದರ ಏರಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ದೀಪಾವಳಿ ಹಬ್ಬದ ಮುನ್ನೆಲೆಯಲ್ಲಿ ಮತ್ತು ಯೂರೋ ಸಮ್ಮುಖದಲ್ಲಿ ಡಾಲರ್ ನೆಲಕಚ್ಚಿರುವುದರಿಂದ ಪರ್ಯಾಯ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ಬಂದಿದೆ. ಭಾರತದಲ್ಲಿ ಚಿನ್ನದ ದರ ನಿಗದಿಗೆ ಕಾರಣೀಭೂತವಾಗುವ ಲಂಡನ್ ಮಾರುಕಟ್ಟೆಯಲ್ಲಿ ಶೇ. 0.6ರಷ್ಟು ಚಿನ್ನದ ದರ ಏರಿದೆ.

Bangalore - Rs 29,400

Chennai - Rs 29,700

Delhi - Rs 29,440

Hyderabad - Rs 29,450

Kolkata - 29,520

Mumbai - Rs 29,420

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Festival demand - Global cues Gold regains Rs 32000 level Oct 25. mid rising domestic demand and a firming global trend, gold prices today regained Rs 32,000 per ten gram level after seven weeks in the national capital. Gold prices spurted by Rs 480 to Rs 32,410 per ten gram, a level last seen on September 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more