ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಷ್ಕರ್ಮಿಗಳ ಗುಂಡಿಗೆ ಗುಲ್ಬರ್ಗದಲ್ಲಿ ವ್ಯಾಪಾರಿ ಬಲಿ

|
Google Oneindia Kannada News

ಗುಲ್ಬರ್ಗ, ಅ.10 : ಗುಲ್ಬರ್ಗದಲ್ಲಿ ದುಷ್ಕರ್ಮಿಗಳು ರಸಗೊಬ್ಬರ ಅಂಗಡಿ ವ್ಯಾಪಾರಿಯನ್ನು ಗುಂಡು ಹಾರಿಸಿ ಕೊಲೆ ಮಾಡಿ, ಹಣದ ಚೀಲದೊಂದಿಗೆ ಪರಾರಿಯಾಗಿದ್ದಾರೆ. ರಸಗೊಬ್ಬರ ಅಂಗಡಿಗಳ ವರ್ತಕರು ಕೊಲೆ ಖಂಡಿಸಿ ಶುಕ್ರವಾರ ಗುಲ್ಬರ್ಗ ಬಂದ್‌ಗೆ ಕರೆ ನೀಡಿದ್ದಾರೆ.

ಮೃತಪಟ್ಟ ರಸಗೊಬ್ಬರ ಅಂಗಡಿ ಮಾಲೀಕನನ್ನು ಶಿವಶರಣಪ್ಪ ಹೊಸ್ಮನಿ (42) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಅಂಗಡಿ ಮುಚ್ಚಿಕೊಂಡು ಮನೆಗೆ ದ್ವಿಚಕ್ರ ವಾಹನದಲ್ಲಿ ಶಿವಶರಣಪ್ಪ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ನಾಡ ಬಂದೂಕಿನಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

Gulbarga

ಎದೆಗೆ ನೇರವಾಗಿ ಗುಂಡು ಬಿದ್ದ ಕಾರಣ ಸ್ಥಳದಲ್ಲಿಯೇ ಶಿವಶರಣಪ್ಪ ಮೃತಪಟ್ಟಿದ್ದು, ಅವರ ಕೈಯಲಿದ್ದ ಹಣದ ಚೀಲದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಅಮಿತ್ ಸಿಂಗ್ ಆಗಮಿಸಿ ಪರಿಶೀಲನೆ ನಡೆಸಿದರು. ಜೇವರ್ಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರವೆದಿದೆ.

ಬಂದ್‌ಗೆ ಕರೆ : ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಮತ್ತು ಶಿವಶರಣಪ್ಪ ಕೊಲೆಯನ್ನು ಖಂಡಿಸಿ ರಸಗೊಬ್ಬರ ವ್ಯಾಪಾರಿಗಳು ಶುಕ್ರವಾರ ಗುಲ್ಬರ್ಗ ಬಂದ್‌ಗೆ ಕರೆ ನೀಡಿದ್ದಾರೆ. ನಗರದ ಎಲ್ಲಾ ರಸಗೊಬ್ಬರ ಅಂಗಡಿಗಳನ್ನು ಮುಚ್ಚಲಾಗಿದೆ.

ಪ್ರತ್ಯೇಕ ರಾಜ್ಯದ ಧ್ವಜಾರೋಹಣ : ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಜಾರಿಗೊಳಿಸಲಾದ ವಿಶೇಷ ಸ್ಥಾನಮಾನದಿಂದ ಉಪಯೋಗವಾಗುತ್ತಿಲ್ಲ ಎಂಬುದು ಸಾಬೀತಾಗಿರುವುದರಿಂದ ಹೈ-ಕ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವೇ ಅಗತ್ಯವಾಗಿದ್ದು, ನವೆಂಬರ್ 1ರಂದು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲಾಗುವುದು ಎಂದು ಹೈ-ಕ ಯುವ ಹೋರಾಟ ಸಮಿತಿ ಅಧ್ಯಕ್ಷ ಡಾ.ರಾಜು ಕುಳಗೇರಿ ತಿಳಿಸಿದ್ದಾರೆ.

English summary
Fertilizer shop owner Shivasharanappa (42) murdered in Gulbarga city, Karnataka on Thursday night. Fertilizer shop owners of city called for Gulbarga bandh on Friday, October 10. Jevargi police registered the case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X