ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ ಒಂದು ಕಡೆ ಕುಮಾರಸ್ವಾಮಿ ಸಮಾವೇಶ, ಇನ್ನೊಂದೆಡೆ ಡಿಕೆಶಿ ಮಗಳ ಮದುವೆ

|
Google Oneindia Kannada News

ರಾಜ್ಯ ರಾಜಕೀಯದಲ್ಲಿ ಬದ್ದ ವೈರಿಗಳಂತೆ ಇದ್ದ ಎಚ್.ಡಿ.ದೇವೇಗೌಡರ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬ ಬದಲಾದ ರಾಜಕೀಯದಲ್ಲಿ ಒಂದಾದರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಡಿಕೆಶಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದಾದ ನಂತರ ಹಲವು ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಕುಮಾರಸ್ವಾಮಿ ಸರಕಾರವನ್ನು ಉಳಿಸಿಕೊಳ್ಳಲು ಡಿಕೆಶಿ ಹರಸಾಹಸ ಪಟ್ಟಿದ್ದು ಗೊತ್ತೇ ಇದೆ.

ಕ್ಷೇತ್ರದ ಜನರಿಗೆ ಉಡುಗೊರೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕ್ಷೇತ್ರದ ಜನರಿಗೆ ಉಡುಗೊರೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್

ಆದರೆ, ಇದ್ಯಾವುದೂ ವರ್ಕೌಟ್ ಆಗದೇ ಸರಕಾರ ಉರುಳಿ, ಯಡಿಯೂರಪ್ಪ ಸಿಎಂ ಆದ ನಂತರದ ಬೆಳವಣಿಗೆಯಲ್ಲಿ ಮತ್ತೆ ಗೌಡ್ರ ಮತ್ತು ಡಿಕೆಶಿ ಕುಟುಂಬದ ಬಾಂಧವ್ಯ ಹಳಸುತ್ತಾ ಬರುತ್ತಿದೆ.

ಇವೆಲ್ಲದರ ನಡುವೆ, ಕಾಕತಾಳೀಯ ಎನ್ನುವಂತೆ ಜೆಡಿಎಸ್ ಸಮಾವೇಶ ಮತ್ತು ಡಿಕೆಶಿ ಮಗಳ ಮದುವೆ ಒಂದೇ ದಿನ ನಡೆದದ್ದು. ಇದರಲ್ಲಿ ಜೆಡಿಎಸ್ ಅದೇ ದಿನ ಯಾಕೆ ಸಮಾವೇಶ ಇಟ್ಟುಕೊಂಡಿತು ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.

ಕಾರ್ಯಕರ್ತರ ಎದುರು ಭಾವುಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ!ಕಾರ್ಯಕರ್ತರ ಎದುರು ಭಾವುಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ!

ಫೆಬ್ರವರಿ ಹದಿನಾಲ್ಕು, ಪ್ರೇಮಿಗಳ ದಿನ

ಫೆಬ್ರವರಿ ಹದಿನಾಲ್ಕು, ಪ್ರೇಮಿಗಳ ದಿನ

ಫೆಬ್ರವರಿ ಹದಿನಾಲ್ಕು, ಪ್ರೇಮಿಗಳ ದಿನ, ಹಾಗಾಗಿ ಈ ದಿನದಂದು ಮದುವೆ ಸಮಾರಂಭ ಹೆಚ್ಚಾಗಿಯೇ ನಡೆಯುತ್ತದೆ. ಇದಲ್ಲದೆ, ಕೆಲವು ತಿಂಗಳ ಹಿಂದೆಯೇ ಫೆಬ್ರವರಿ 14ರಂದು ಮದುವೆ ನಡೆಯುವುದು ನಿಗದಿಯಾಗಿತ್ತು. ಆದರೆ, ಜೆಡಿಎಸ್ ಸಮಾವೇಶ ಮಾತ್ರ ಹಾಗಲ್ಲ. ಜೆಡಿಎಸ್ ಸಮಾವೇಶ ಅರಮನೆ ಮೈದಾನದಲ್ಲಿ ಮತ್ತು ಡಿಕೆಶಿ ಮಗಳ ಮದುವೆ ಶೆರಟನ್ ಹೋಟೆಲ್ ನಲ್ಲಿ ನಡೆದಿದೆ.

ಅರಮನೆ ಮೈದಾನದಲ್ಲಿ ಜೆಡಿಎಸ್ ಸಮಾವೇಶ

ಅರಮನೆ ಮೈದಾನದಲ್ಲಿ ಜೆಡಿಎಸ್ ಸಮಾವೇಶ

ಒಂದು ಕಡೆ ರಾಜಕೀಯ ಸಮಾವೇಶ, ಇನ್ನೊಂದು ಕಡೆ ಮದುವೆ ಸಂಭ್ರಮ. ಜೆಡಿಎಸ್ ಆಯೋಜಿಸಿದ್ದ ಸಮಾವೇಶದಲ್ಲಿ ವೇದಿಕೆ ಭರ್ತಿಯಾಗಿತ್ತು. ಪಕ್ಷದ ಮುಂದಿನ ಹೋರಾಟದ ಬಗ್ಗೆ ಕಾರ್ಯತಂತ್ರ ರೂಪಿಸುವ ಕಾರ್ಯಕ್ರಮ ಇದಾಗಿತ್ತು. ಜೊತೆಗೆ, ನೂತನ ಪಂಚಾಯಿತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.

ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ಮದುವೆ

ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ಮದುವೆ

ಇನ್ನೊಂದು ಕಡೆ, ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯ ಮತ್ತು ದಿ.ಸಿದ್ದಾರ್ಥ್ ಹೆಗಡೆ ಪುತ್ರ ಅಮರ್ತ್ಯ ಹೆಗ್ಡೆ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ಶೆರಟನ್ ಹೋಟೆಲ್ ನಲ್ಲಿ ನಡೆಯಿತು. ಸಿಎಂ ಯಡಿಯೂರಪ್ಪ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ ಆದಿಯಾಗಿ ರಾಜಕೀಯ ಮುಖಂಡರ, ಸ್ವಾಮೀಜಿಗಳ, ಸೆಲೆಬ್ರಿಟಿಗಳ ದಂಡೇ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿತ್ತು.

ನೂತನ ದಂಪತಿಗಳಿಗೆ ಶುಭ ಕೋರಿದ ಎಚ್ಡಿಕೆ

ನೂತನ ದಂಪತಿಗಳಿಗೆ ಶುಭ ಕೋರಿದ ಎಚ್ಡಿಕೆ

ಎಚ್.ಡಿ.ಕುಮಾರಸ್ವಾಮಿ ಕೂಡಾ ಡಿಕೆಶಿ ಮಗಳ ಮದುವೆಗೆ ಆಗಮಿಸಿ, ನೂತನ ದಂಪತಿಗಳಿಗೆ ಶುಭ ಕೋರಿದ್ದರು. ಒಟ್ಟಿನಲ್ಲಿ, ರಾಜಕೀಯ ವಿರೋಧಿಗಳ ಬೇರೆ ಬೇರೆ ಕಾರ್ಯಕ್ರಮ ಒಂದೇ ದಿನ ನಡೆದ ವಿಚಾರದಲ್ಲಿ ಸದ್ಯ ಬೇರೆ ಏನೂ ರಾಜಕೀಯ ಘಾಟು ಹರಿದಾಡುತ್ತಿಲ್ಲ.

Recommended Video

ಟಿ.ವಿ,ಫ್ರಿಡ್ಜ್,ಕಾರು ಇದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಕೂಡಲೇ ಕಾರ್ಡ್‌ ಹಿಂತಿರುಗಿಸಿ | Oneindia Kannada

English summary
February 14: Same Day JDS Party Meeting And D K Shivakumar Daughter Marriage In Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X