ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ಚುನಾವಣಾ ಭತ್ಯೆ ಹೆಚ್ಚಳ: ಹಣಕಾಸು ಇಲಾಖೆ ಗ್ರೀನ್ ಸಿಗ್ನಲ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಚುನಾವಣೆ ಸಂದರ್ಭದಲ್ಲಿ ಪೊಲೀಸರಿಗೆ ನೀಡುವ ಭತ್ಯೆಯನ್ನು ಹೆಚ್ಚಳ ಮಾಡಲು ಹಣಕಾಸು ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಸಬ್‌ಇನ್‌ಸ್ಪೆಕ್ಟರ್, ಎಎಸ್‌ಐ ಹಾಗೂ ಪೇದೆಗಳ ದಿನದ ಗೌರವ ಸಂಭಾವನೆಯನ್ನು 250ರೂನಿಂದ 350ರೂ.ಗೆ ಏರಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ. 2018 ವಿಧಾನಸಭಾ ಚುನಾವಣೆ ವೇಳೆ ಕರ್ತವ್ಯ ನಿರ್ವಹಿಸಿದ್ದ ಯವುದೇ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಚುನಾವಣಾ ಭತ್ಯೆ ಬಿಡುಗಡೆ ಮಾಡಿರಲಿಲ್ಲ. ಈಗ ದರ ಏರಿಸಿ ಪರಿಷ್ಕರಿಸಿ ಆದೇಶ ಹೊರಡಿಸಿದ್ದಾರೆ. ಶೀಘ್ರದಲ್ಲಿ ಹಣ ಅಧಿಕಾರಿ ಮತ್ತು ಸಿಬ್ಬಂದಿ ಕೈ ಸೇರಲಿದೆ.

ಹುಡುಗನ ಮಾರು ವೇಷದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಹುಡುಗಿ ಸಿಕ್ಕಿಬಿದ್ದಳು ಹುಡುಗನ ಮಾರು ವೇಷದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಹುಡುಗಿ ಸಿಕ್ಕಿಬಿದ್ದಳು

ಚುನಾವಣೆಯೂ ಯಾವುದೇ ಗೊಂದಲ, ಗಲಬೆಗಳಿಲ್ಲದೆ ಸುಸೂತ್ರವಾಗಿ ನಡೆಯಬೇಕಾದರೆ ಪೊಲೀಸರ ಪಾತ್ರ ಬಹಳ ಮುಖ್ಯವಾಗುತ್ತದೆ. ಎಲೆಕ್ಷನ್ ಡ್ಯೂಟಿ ನಿರ್ವಹಿಸುವ ಬೇರೆ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಗೌರವ ಧನ ಪರಿಷ್ಕರಿಸಲಾಗಿದೆ. ಅದೇ ರೀತಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೂ ಸಂಭಾವನೆ ದರ ಪರಿಷ್ಕರಿಸುವಂತೆ ಡಿಜಿಪಿ ನೀಲಮಣಿ ರಾಜು ಸಲ್ಲಿಸಿದ್ದ ಪ್ರಸ್ತಾವನೆ ಮೇರೆಗೆ ಆರ್ಥಿಕ ಇಲಾಖೆ ದರ ಏರಿಸಲು ನಿರ್ಧರಿಸಿದೆ.

FD green signal to election duty remuneration hike for police personnel

ಶಂಕರ್ ಐಎಎಸ್ ಅಕಾಡೆಮಿ ಸ್ಥಾಪಕ ಆತ್ಮಹತ್ಯೆಗೆ ಶರಣುಶಂಕರ್ ಐಎಎಸ್ ಅಕಾಡೆಮಿ ಸ್ಥಾಪಕ ಆತ್ಮಹತ್ಯೆಗೆ ಶರಣು

ಡಿಐಎಸ್‌ಪಿ, ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗೆ 1500ರೂ.ನಿಂದ 5 ಸಾವಿರ ರೂ.ಗೆ ಏರಿಕೆ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಒಂದು ದಿನಕ್ಕೆ 350ರಿಂದ 500ರೂಗೆ ಹೆಚ್ಚಳ, ಸಬ್‌ಇನ್‌ಸ್ಪೆಕ್ಟರ್ ಹಾಗೂ ಎಎಸ್‌ಐಗಳಿಗೆ ಒಂದು ದಿನಕ್ಕೆ 250ರೂ.ನಿಂದ 350ರೂ.ಗೆ ಏರಿಕೆ, ಮುಖ್ಯಪೇದೆ ಹಾಗೂ ಪೇದೆಗಳಿಗೆ ಒಂದು ದಿನಕ್ಕೆ 250ರೂ.ನಿಂದ 350ರೂಗೆ ಏರಿಕೆ ಮಾಡಲಾಗಿದೆ.

English summary
Finance department has given green signal for hiking remuneration of police personnel during election duties in the state. The proposal sent by the DGP recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X