ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.1ರಿಂದ ರಾಜ್ಯದ 32 ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಜಾರಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಕರ್ನಾಟಕ 32 ರಾಜ್ಯ ಹೆದ್ದಾರಿಗಳಲ್ಲಿ ಫಾಸ್ಟ್‌ ಟ್ಯಾಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ . ಮುಂದಿನ ವರ್ಷ ಏ.1ರೊಳಗೆ ರಾಜ್ಯದ ರಸ್ತೆಗಳಲ್ಲಿ ಫಾಸ್ಟ್‌ಟ್ಯಾಗ್ ಜಾರಿಗೆ ಬರಲಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಒನ್ ನೇಷನ್, ಒನ್ ಟ್ಯಾಗ್ ಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳ ಹೆದ್ದಾರಿಗಳಲ್ಲೂ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಟೋಲ್​ಗಳಲ್ಲಿ ಕಾಯುವಿಕೆಯಿಂದ ಸಮಯ ವ್ಯರ್ಥವಾಗುವ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಫಾಸ್ಟ್ ಟ್ಯಾಗ್ ಅಳವಡಿಕೆಗೆ ಕೇಂದ್ರವು ಶೇ.50 ಬಂಡವಾಳ, ನಿರ್ವಹಣೆಗೆ ಶೇ.80 ವೆಚ್ಚ ಭರಿಸಲಿದೆ.

17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ17 ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸರ್ಕಾರದ ಒಪ್ಪಿಗೆ

2020ರ ಏಪ್ರಿಲ್ 1ರಿಂದ ದೇಶದ ಎಲ್ಲ ವಾಣಿಜ್ಯ ವಾಹನಗಳಿಗೆ ಜಿಎಸ್ಟಿನ್ ಇ-ವೇ ಬಿಲ್ ಗಳ ವ್ಯವಸ್ಥೆಯನ್ನು ಫಾಸ್ಟ್ ಟ್ಯಾಗ್​ನೊಂದಿಗೆ ಸೇರಿಸಲಾಗುತ್ತಿದೆ ಎಂದು ತಿಳಿಸಿದರು.

Fast Tag For 32 State Tolls From April 2020

ರಾಜ್ಯದ ಎಲ್ಲಾ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆ ಗುರಿ ಹೊಂದಲಾಗಿದ್ದು, ಈ ವ್ಯವಸ್ಥೆ ಜಾರಿಯಾದರೆ ವಾಹನ ಸವಾರರಿಗೆ ಕಾಯುವಿಕೆ ಕಡಿಮೆಯಾಗಲಿದೆ. ರಾಜ್ಯದಲ್ಲಿ ವಾಣಿಜ್ಯೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಥಿಕವಾಗಿ ಮಹತ್ವವಿರುವ ರಸ್ತೆಗಳ ನಿರ್ವಣಕ್ಕೆ 285 ಕೋಟಿ ರೂ. ಮಂಜೂರು ಮಾಡುವಂತೆ ಕೇಂದ್ರ ಭೂ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದೂ ಹೇಳಿದರು.

ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ವಿಷಯದಲ್ಲಿ ನಮ್ಮ ನಿಲುವು ಬದಲಿಲ್ಲ. ರಾಹುಲ್ ಗಾಂಧಿ ಕೇರಳ ಸರ್ಕಾರದ ಪರ ಧೋರಣೆ ತಾಳಿರುವುದು ನೋಡಿದರೆ ನಗು ಬರುತ್ತಿದೆ ಎಂದು ಹೇಳಿದರು.

100 ಹಾಸ್ಟೆಲ್ ಸ್ಥಾಪನೆಗೆ ಒಪ್ಪಿಗೆ: ಕರ್ನಾಟಕದಲ್ಲಿ ಬಾಲಕಿಯರು ಮತ್ತು ಬಾಲಕರ ತಲಾ 50 ಹಾಸ್ಟೆಲ್ ಗಳ ಸ್ಥಾಪನೆಗೆ ಕೇಂದ್ರ ಸಮಾಜ ಕಲ್ಯಾಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದಾರೆ.

ತಲಾ ಒಬ್ಬ ವಿದ್ಯಾರ್ಥಿಗೆ 3 ಲಕ್ಷ ರೂ. ಹೂಡಿಕೆ ಲೆಕ್ಕದಲ್ಲಿ ಅನುದಾನ ಲಭ್ಯವಾಗಲಿದ್ದು, ಹಾಸ್ಟೆಲ್ ಸ್ಥಾಪನೆಗೆ ಭೂಮಿ ಜಾಗ ಸೇರಿ ಇತರ ವ್ಯವಸ್ಥೆಯ ವರದಿಯನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

English summary
Minister Govind Karjol said that Fast tag for 32 state tolls from next year April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X