ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮರುಪಾತಿ ನೋಟೀಸ್‌ಗೆ ಭಯ ಪಡಬೇಡಿ: ರೈತರಿಗೆ ಸಿಎಂ ಅಭಯ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್‌ 06: ಸಾಲ ಮರುಪಾವತಿ ಬಗ್ಗೆ ಬ್ಯಾಂಕ್‌ಗಳು ನೀಡುವ ನೊಟೀಸ್‌ ಬಗ್ಗೆ ರೈತರು ಭಯ ಪಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಲ ಮನ್ನಾ ಮಾಡಿದೆ, ಋಣಮುಕ್ತ ಪತ್ರಗಳನ್ನು ನೀಡುವ ಕಾರ್ಯ ನಡೆಯುತ್ತಿದೆ, ಸರ್ಕಾರ ರೈತರ ಪರ ಇದೆ ಎಂದು ಅವರು ಮಾಹಿತಿ ನೀಡಿದರು.

ಕೃಷಿ ಸಾಲ ಮನ್ನಾ ಯೋಜನೆ ಗೊಂದಲಮಯವಾಗಿದೆ: ಯಡಿಯೂರಪ್ಪ ಕೃಷಿ ಸಾಲ ಮನ್ನಾ ಯೋಜನೆ ಗೊಂದಲಮಯವಾಗಿದೆ: ಯಡಿಯೂರಪ್ಪ

ಸಾಲಮನ್ನಾದ ಘೋಷಣೆ ಆಗಿದ್ದರೂ ಸಹಿತ ಕೆಲವು ಬ್ಯಾಂಕ್‌ಗಳು ರೈತರಿಗೆ ನೊಟೀಸ್ ನೀಡಿದ್ದರ ಬಗ್ಗೆ ಹಲವು ಕಡೆ ವರದಿಯಾಗಿತ್ತು. ಅಲ್ಲದೆ ಕೆಲವು ಬ್ಯಾಂಕ್‌ಗಳು ಗ್ಯಾಸ್ ಸಬ್ಸಿಡಿ ಸೇರಿ ರೈತರ ಖಾತೆಗೆ ಜಮಾ ಆಗುವ ಹಣವನ್ನು ಸಾಲಕ್ಕೆ ಚುಕ್ತಾ ಮಾಡಿಕೊಂಡ ಬಗ್ಗೆಯೂ ವರದಿಯಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ದೂರು ಸಹ ನೀಡಲಾಗಿತ್ತು.

farmers should not worry about bank notice: Kumaraswamy

ಹಾಗಾಗಿ ಈ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಸರ್ಕಾರವು ಬ್ಯಾಂಕುಗಳೊಂದಿಗೆ ಈಗಾಗಲೇ ಮಾತನಾಡಿದ್ದು, ರೈತರಿಗೆ ಯಾವುದೇ ನೊಟೀಸ್‌ದಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರೈತ ಹೇಗೆ ಸತ್ತರೂ ಆತ್ಮಹತ್ಯೆ ಎನ್ನಲಾಗುತ್ತಿದೆ: ಡಿಕೆ ಶಿವಕುಮಾರ್‌ರೈತ ಹೇಗೆ ಸತ್ತರೂ ಆತ್ಮಹತ್ಯೆ ಎನ್ನಲಾಗುತ್ತಿದೆ: ಡಿಕೆ ಶಿವಕುಮಾರ್‌

ರೈತರ ಸಾಲಮನ್ನಾದ ಹಣವನ್ನು ಸರ್ಕಾರವು ಬ್ಯಾಂಕುಗಳಿಗೆ ಕಂತುಗಳಲ್ಲಿ ಪಾವತಿಸುವ ಸರ್ಕಾರದ ನಿರ್ಣಯಕ್ಕೆ ಕೆಲವು ಬ್ಯಾಂಕುಗಳು ಒಪ್ಪಿಲ್ಲ ಹಾಗಾಗಿ ಹೀಗೆ ನೊಟೀಸ್‌ಗಳನ್ನು ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇದೆ.

English summary
Cm Kumaraswamy today told that, farmers sould not worry about bank notice about the crop loans. He said government already waive off the loan, Debt relief documents will be issued soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X