ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು : ಎಸ್ಪಿ ಅಣ್ಣಾಮಲೈ ವರ್ಗಾವಣೆ ಮಾಡಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಚಿಕ್ಕಮಗಳೂರಿನ ತರೀಕೆರೆಯಲ್ಲಿ ರೈತರು ಹಾಗು ಶಾಸಕನಿಗೆ ಬೈದ ಎಸ್ ಪಿ ಅಣ್ಣಾಮಲೈ | Oneindia Kannada

ಚಿಕ್ಕಮಗಳೂರು, ಮಾರ್ಚ್ 07 : ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ವಿರುದ್ಧ ರೈತರು ಪ್ರತಿಭಟನೆ ಮಾಡಿದರು. ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಬಿಜೆಪಿ ನಾಯಕ, ಮಾಜಿ ಶಾಸಕ ಡಿ.ಎಸ್.ಸುರೇಶ್ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ತರೀಕೆರೆ ಬಂದ್ ನಡೆಸಲಾಗುತ್ತದೆ' ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪಾಠದ ಧಾಟಿಯಲ್ಲಿ ವಾರ್ನಿಂಗ್

'ಅಣ್ಣಾಮಲೈ ಓರ್ವ ಪುಕ್ಕಲ, ಅವರು ಚಿಕ್ಕಮಗಳೂರು ಜಿಲ್ಲೆಗೆ ಬೇಡ, ಅವರನ್ನ ಕೂಡಲೇ ಜಿಲ್ಲೆಯಿಂದ ಕಿತ್ತೊಗೆಯಬೇಕು' ಎಂದು ಡಿ.ಎಸ್.ಸುರೇಶ್ ಆರೋಪಿಸಿದ್ದಾರೆ.

Farmers protest against SP Annamalai

'ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಸ್ಪಿ ಅಣ್ಣಾಮಲೈ ಅವರು ಆಗಮಿಸಿ ರೈತರನ್ನು ನಿಂದಿಸಿದ್ದಾರೆ. ರೈತರು ಎಸ್ಪಿ ವಿರುದ್ಧ ಪ್ರತಿಭಟನೆ ನಡೆಸಿದಾಗ ಕಾರು ಹತ್ತಿಕೊಂಡು ಓಡಿ ಹೋದರು' ಎಂದು ಸುರೇಶ್ ಹೇಳಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳುಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು

ಪ್ರತಿಭಟನೆ ಏಕೆ : ಭದ್ರಾ ಜಲಾಶಯ ಬಲದಂಡೆ ನಾಲೆಯಿಂದ ಟ್ಯಾಂಕರ್‌ಗೆ ನೀರು ತುಂಬಿಸಿಕೊಳ್ಳಲು ತಾಲೂಕು ಆಡಳಿತ ನಿಷೇಧ ಹೇರಿದೆ. ಇದನ್ನು ಖಂಡಿಸಿ ಇಂದು ದೋರನಾಶ್ ಗ್ರಾಮದಿಂದ ತರೀಕೆರೆ ಪಟ್ಟಣದ ವರೆಗೆ ರೈತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅಣ್ಣಾಮಲೈ ರೈತರನ್ನು ನಿಂದಿಸಿದ್ದಾರೆ ಎಂಬುದು ಆರೋಪವಾಗಿದೆ.

English summary
Farmers staged a protest against Tarikere taluk administration and Superintendent of Police Annamalai on March 7, 2018. Tarikere taluk administration banned tankers to use Bhadra river water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X