ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗೇಪಲ್ಲಿಯಿಂದ ಧಾವಿಸಿ ಬಂದ ರೈತ ಪಡೆಗೆ ದೇವನಹಳ್ಳಿಯಲ್ಲಿ ತಡೆ

ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಪಡೆ ಬಾಗೇಪಲ್ಲಿಯಿಂದ ಬೆಂಗಳೂರಿಗೆ ಬರುತ್ತಿದೆ.

By Mahesh
|
Google Oneindia Kannada News

ಬಾಗೇಪಲ್ಲಿ, ಜೂನ್ 01: ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಮುಂದಾಗಿದ್ದನ್ನು ವ್ಯವಸ್ಥಿತವಾಗಿ ವಿಫಲಗೊಳಿಸಲಾಗಿದೆ.

ಸಂಜೆ ವೇಳೆಯ ಅಪ್ಡೇಟ್:
ರಾಜ್ಯದ ವಿವಿಧೆಡೆಯಿಂದ ಬರಲಿರುವ ರೈತ ಸಮೂಹ ಗುರುವಾರ(ಜೂನ್ 01) ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆಯಿತ್ತು. ಆದರೆ, ಪ್ರತಿಭಟನೆಗಾಗಿ ಬರುವ ರೈತರಿಗೆ ಪ್ರವೇಶ ನಿರಾಕರಿಸಿದ್ದರಿಂದ ರೈತಪಡೆಯನ್ನು ದೇವನಹಳ್ಳಿಯಲ್ಲೇ ತಡೆಹಿಡಿಯಲಾಯಿತು.

'ನಾವೇನು ಕಲ್ಲು ಹೊಡೆಯಲ್ಲ, ಬೆಂಕಿ ಹಚ್ಚಲ್ಲ, ನ್ಯಾಯ ಕೇಳಲು ವಿಧಾನಸೌಧದತ್ತ ಹೋಗುತ್ತಿದ್ದೇವೆ. ಅದಕ್ಕೂ ಆಸ್ಪದ ನೀಡುತ್ತಿಲ್ಲವೇಕೆ?' ಎಂದು ರೈತಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್ ಗರಂ ಆಗಿ ಪೊಲೀಸರನ್ನು ಪ್ರಶ್ನಿಸಿದರು.

ದೇವನಹಳ್ಳಿಯ ರಾಣಿವೃತ್ತಕ್ಕೆ ಆಗಮಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು, ರೈತರ ಸಮಸ್ಯೆ ಪರಿಹರಿಸುವ ಆಶ್ವಾಸನೆ ನೀಡಿದರು.

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಇದೇ ಸಮಸ್ಯೆ ಮುಂದಿಟ್ಟುಕೊಂಡು ರಾಜಧಾನಿ ಪ್ರವೇಶಿಸಿದ ರೈತರನ್ನು ಮೇಖ್ರಿ ವೃತ್ತದ ಬಳಿ ತಡೆದ ಪೊಲೀಸರು, ಲಾಠಿ ರುಚಿ ತೋರಿಸಿದ್ದರು.[ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು]

ಬೆಳಗ್ಗಿನ ಅಪ್ಡೇಟ್ಸ್:
* ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಪಡೆ ಬಾಗೇಪಲ್ಲಿಯಿಂದ ಬೆಂಗಳೂರಿಗೆ ಬರುತ್ತಿದೆ.

* ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಹಾಗೂ ಹಸಿರು ಸೇನೆ ವತಿಯಿಂದ ವಿಧಾನ ಸಭೆ ಮುತ್ತಿಗೆ ಕಾರ್ಯಕ್ರಮ.

Farmers march towards Vidhana Soudha demand Drinking water

* ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜೂನ್ 1ರ ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆ : ರೈತ ಸಂಘದ ಮುಖಂಡ ಶಿವಾನಂದಪ್ಪ.

* ಶಿವಮೊಗ್ಗದಿಂದ ಕೋಟೆಹಾಳ್ ಮಂಜುನಾಥ್, ಕುಂದೂರು ರೇವಣಸಿದ್ದಪ್ಪ ನೇತೃತ್ವದ ರೈತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ವಿವಿಧ ಬೇಡಿಕೆಗಳು: ಬೆಳೆಗಳಿಗೆ ನಿರ್ದಿಷ್ಟ ಬೆಲೆ, ಬರ ಪರಿಹಾರ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಸದ್ಯದ ಪರಿಸ್ಥಿತಿ ಎಲ್ಲದಕ್ಕೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜಿಲ್ಲೆ ಜನರಿಗೆ ಶಾಶ್ವತವಾಗಿ ನೀರು ನೀಡುವವರೆಗೂ ಹೋರಾಟ ನಿಲ್ಲಲ್ಲ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

English summary
Farmers led by Kodihalli Chandrashekar are marching towards Vidhana soudha and plan to siege it. Farmers demanding drinking water supply to drought hit districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X