ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಸಾಲಮನ್ನಾ: ಬಿಎಸ್‌ವೈ ಕೊಟ್ರು ಬಿಗ್ ಶಾಕ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ರೈತರ ಸಾಲಮನ್ನಾ ಕುರಿತು ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ ನೀಡಿರುವ ಹೇಳಿಕೆ ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಈಗಿನ ಹಣಕಾಸು ಪರಿಸ್ಥಿತಿ ನೋಡಿಕೊಂಡು ಉಳಿದೆಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ನೆರೆಹಾನಿಗೆ ಪರಿಹಾರ ಕೊಡುತ್ತಿದ್ದೇವೆ. ಹೀಗಾಗಿ ಸಂಪೂರ್ಣ ಸಾಲಮನ್ನಾ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ.

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಈಗಾಗಲೇ ಕೊಟ್ಟ ಭರವಸೆಯಂತೆ ಬೆಳೆನಾಶ, ಮನೆಕಟ್ಟಿಕೊಳ್ಳಲು ಪರಿಹಾರ ನೀಡುತ್ತಿದ್ದೇವೆ ಎಂದರು. ಮೈತ್ರಿ ಸರ್ಕಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಂಪೂರ್ಣ ಬೆಳೆ ಸಾಲಮನ್ನಾ ಘೋಷಿಸಿದ್ದರು.

ಪೂರ್ಣಸಾಲ ಮನ್ನಾ ಇಲ್ಲ

ಪೂರ್ಣಸಾಲ ಮನ್ನಾ ಇಲ್ಲ

ಸಂತ್ರಸ್ತರಿಗೆ ನಾವು ದೊಡ್ಡ ಮೊತ್ತದ ಪರಿಹಾರ ನೀಡುತ್ತಿದ್ದೇವೆ. ಬೆಳೆನಷ್ಟಕ್ಕೆ ಹೆಕ್ಟೇರ್‌ಗೆ ಹತ್ತು ಸಾವಿರ ಹಾಗೂ ಪ್ರತಿ ಮನೆಗೆ 5 ಲಕ್ಷ ಪರಿಹಾರ ನೀಡುತ್ತಿದ್ದೇವೆ. ಇದರ ಜೊತೆಗೆ ಎಲ್ಲಾ ನಿರಾಶ್ರಿತರಿಗೆ ಹತ್ತು ಸಾವಿರ ಹಾನಿಯಾದ ಗೂಡಂಗಡಿಗಳಿಗೆ 25 ಸಾವಿರ ಪರಿಹಾರ ಕೊಡುತ್ತಿದ್ದೇವೆ. ನೇಕಾರರ ಸಾಲ ಮನ್ನಾದಂಥ ಕ್ರಮ ಕೈಗೊಳ್ಳುತ್ತಿದ್ದೇವೆ.ದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪರಿಹಾರ ನೀಡುತ್ತಿರುವ ಉದಾಹರಣೆ ಇನ್ನೊಂದು ಇರಲಿಕ್ಕಿಲ್ಲ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಮಹದಾಯಿ ವಿಚಾರಣೆ ಚುನಾವಣೆ ಬಳಿಕ ಸಭೆ

ಮಹದಾಯಿ ವಿಚಾರಣೆ ಚುನಾವಣೆ ಬಳಿಕ ಸಭೆ

ಮಹದಾಯಿ ಯೋಜನೆಗೆ ಸಂಬಂಧಪಟ್ಟಂತೆ ಚುನಾವಣೆ ಮುಗಿದ ಕೂಡಲೇ ಮಾತುಕತೆ ನಡೆಸಲಾಗುವುದು. ಮಹಾರಾಷ್ಟ್ರ ಮತ್ತು ಗೋವಾ ಜತೆಗೆ ಮಾತಾಡಬೇಕು ಚುನಾವಣೆ ಮುಗಿದ ಬಳಿಕ ಕುಳಿತು ಮಾತುಕತೆ ನಡೆಸಲಾಗುವುದು ಇಲ್ಲಿಯವರೆಗೂ ಮಹದಾಯಿಗೆ ಸಂಬಂಧಪಟ್ಟಂತೆ ನಾವೇನೂ ಮಾಡಿಲ್ಲ. ಗೃಹ ಸಚಿವ ಅಮಿತ್ ಶಾ ಜತೆಗೆ ಮಾತಾಡಿ ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

'ಸಾಲ ಮನ್ನಾ ಬದಲು, ರೈತರಿಗೆ ನಗದು ವರ್ಗಾವಣೆಯೇ ಉತ್ತಮ''ಸಾಲ ಮನ್ನಾ ಬದಲು, ರೈತರಿಗೆ ನಗದು ವರ್ಗಾವಣೆಯೇ ಉತ್ತಮ'

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಉಪಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು. ಮಹಾರಾಷ್ಟ್ರದಲ್ಲಿ ಕನ್ನಡ ಭಾಷೆ ಪ್ರಭಾವ ಇರುವ ಪ್ರದೇಶಗಳಲ್ಲಿ ಪ್ರಚಾರ‌ಕ್ಕೆ ಹೋಗುತ್ತಿದ್ದೇನೆ.. ಅಲ್ಲಿನ ಮುಖಂಡರ ಅಪೇಕ್ಷೆ ಮೆರೆಗೆ ಹಿಂದೆಯೂ ಹೋಗಿದ್ದೆ ಮತ್ತೆ ಈಗ ಹೋಗುತ್ತಿದ್ದೇನೆ‌ ಎಂದು ತಿಳಿಸಿದರು.

ಹಣಕಾಸಿನ ಪರಿಸ್ಥಿತಿ ಸರಿ ಇಲ್ಲ

ಹಣಕಾಸಿನ ಪರಿಸ್ಥಿತಿ ಸರಿ ಇಲ್ಲ

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ. ಇವತ್ತಿನ ಹಣಕಾಸಿನ ಪರಿಸ್ಥಿತಿ, ನೆರೆ ಪ್ರವಾಹದಂತ ದೊಡ್ಡ ಅನಾಹುತ ಆಗಿದೆ ಹೀಗಾಗಿ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ನೆರೆ ಪರಿಹಾರಕ್ಕೆ ಬದಲಾವಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

English summary
Chief Minister BS Yediyurappa Says there is no full loan waive off to the farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X