ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಜೊತೆ ಯಡಿಯೂರಪ್ಪ ಸಭೆ ವಿಫಲವಾಗಿದ್ದೇಕೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಕರ್ನಾಟಕ ಬಂದ್ಗೆ ಕರೆ ನೀಡಿರುವ ರೈತ ಮುಖಂಡರ ಜೊತೆ ಮುಖ್ಯಮಂತ್ರಿಗಳು ನಡೆಸಿದ ಸಭೆ ವಿಫಲವಾಗಿದೆ. ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ ನಡೆಯುವುದು ಖಚಿವಾಗಿದೆ.

ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರೈತ ಮುಖಂಡರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಒಮ್ಮತ ಮೂಡದ ಕಾರಣ ಮಾತುಕತೆ ವಿಫಲವಾಯಿತು.

ರೈತರ ಜೊತೆಗಿನ ಸಿಎಂ ಸಭೆ ವಿಫಲ; ಸೋಮವಾರ ಕರ್ನಾಟಕ ಬಂದ್ ರೈತರ ಜೊತೆಗಿನ ಸಿಎಂ ಸಭೆ ವಿಫಲ; ಸೋಮವಾರ ಕರ್ನಾಟಕ ಬಂದ್

ಮುಖ್ಯಮಂತ್ರಿಗಳ ಆಹ್ವಾನದ‌ ಮೇರೆಗೆ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟವನ್ನು ಪ್ರತಿನಿಧಿಸುವ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಆಗಿತ್ತು. ಆದರೆ, ಸಭೆ ವಿಫಲವಾಯಿತು. ಕಂದಾಯ ಸಚಿವ ಆರ್. ಅಶೋಕ್, ಕೃಷಿ ಸಚಿವ ಬಿ. ಸಿ. ಪಾಟೀಲ್ ಮುಂತಾದವರು ಸಭೆಯಲ್ಲಿದ್ದರು.

ರೈತರ ಬೃಹತ್ ಪ್ರತಿಭಟನೆ; ಬಾರುಕೋಲು ಬೀಸಿ ಆಕ್ರೋಶ ರೈತರ ಬೃಹತ್ ಪ್ರತಿಭಟನೆ; ಬಾರುಕೋಲು ಬೀಸಿ ಆಕ್ರೋಶ

ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋದಲ್ಲಿ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಮಾರುತಿ ಮಾನ್ಪಡೆ, ಗುರುಪ್ರಸಾದ್ ಕೆರಗೋಡು, ವಿ.ಗಾಯತ್ರಿ, ಕವಿತ ಕುರುಗಂಟಿ, ಟಿ. ಯಶವಂತ, ಡಾ. ಪ್ರಕಾಶ್ ಕಮ್ಮರಡಿ ಇದ್ದರು.

ಕೃಷಿ ಮಸೂದೆ ವಿರೋಧಿಸಿ ಭಾರತ ಬಂದ್: ಯಾವ ರಾಜ್ಯದಲ್ಲಿ ಹೇಗಿದೆ ಚಿತ್ರಣ? ಕೃಷಿ ಮಸೂದೆ ವಿರೋಧಿಸಿ ಭಾರತ ಬಂದ್: ಯಾವ ರಾಜ್ಯದಲ್ಲಿ ಹೇಗಿದೆ ಚಿತ್ರಣ?

ಅಪಾಯಗಳ ಬಗ್ಗೆ ಸಿಎಂಗೆ ವಿವರಣೆ

ಅಪಾಯಗಳ ಬಗ್ಗೆ ಸಿಎಂಗೆ ವಿವರಣೆ

ಕರ್ನಾಟಕ ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸಿರುವ ಭೂ ಸುಧಾರಣೆ ಕಾಯ್ದೆ / ಎ.ಪಿ.ಎಂ.ಸಿ ಕಾಯ್ದೆ / ಕಾರ್ಮಿಕ‌ ಕಾನೂನುಗಳನ್ನು ತಿದ್ದುಪಡಿ ಮಾಡುವ ಮಸೂದೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು. ನಿಯೋಗ ಸಭೆಯಲ್ಲಿ ಈ ಮೂರು ಮಸೂದೆಗಳಿಂದ ರೈತ, ದಲಿತ, ಕಾರ್ಮಿಕರ ಸಮುದಾಯಗಳಿಗೆ ಆಗುವ ತೀವ್ರ ಅಪಾಯಗಳ ಬಗ್ಗೆ ವಿವರಿಸಿತು.

ಕಾನೂನುಗಳನ್ನು ವಿರೋಧಿಸಿ

ಕಾನೂನುಗಳನ್ನು ವಿರೋಧಿಸಿ

ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಸಹ‌ ರಾಜ್ಯ ಸರ್ಕಾರ ವಿರೋಧಿಸಬೇಕು ಎಂದು ಒತ್ತಾಯಿಸಲಾಯಿತು. ಕೇಂದ್ರ ಸರ್ಕಾರ‌‌, ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ, ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು.‌ ಕೃಷಿ ಪಂಪ್ ಸೆಟ್‌ಗೆ ನೀಡುವ‌ ಉಚಿತ ವಿದ್ಯುತ್ ‌ನಿಲ್ಲಿಸಲು ಹಾಗು ಮೀಟರ್ ಅಳವಡಿಸಲು ಇದು ಹುನ್ನಾರವಾಗಿದೆ ಎಂದು ತಿಳಿಸಲಾಯಿತು.

ರಾಜ್ಯ ಸರ್ಕಾರ ಒಪ್ಪಿಗೆ ನೀಡಲಿಲ್ಲ

ರಾಜ್ಯ ಸರ್ಕಾರ ಒಪ್ಪಿಗೆ ನೀಡಲಿಲ್ಲ

ನಿಯೋಗದ ಹಕ್ಕೊತ್ತಾಯಗಳನ್ನು ಸಮಗ್ರವಾಗಿ ನೋಡದ ಸರ್ಕಾರ ನೆಪಮಾತ್ರಕ್ಕೆ ಕೆಲವು ಅಲ್ಪ ಬದಲಾವಣೆಯನ್ನು ತರಲು ಯೋಚಿಸುವುದಾಗಿ ಹೇಳಿತು. ಇದನ್ನು ಒಪ್ಪುವುದಿಲ್ಲ ಎಂದು ನಿಯೋಗವು ತಿಳಿಸಿತು. ಅಲ್ಲದೆ‌ ಮುಖ್ಯ ಮಂತ್ರಿಗಳು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಗುಣಗಾನವನ್ನು ಮಾಡಿದರು. ಆದ್ದರಿಂದ, ನಿಯೋಗ ಹೋರಾಟ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದೆ.

ಕರ್ನಾಟಕ ಬಂದ್ ನಡೆಯಲಿದೆ

ಕರ್ನಾಟಕ ಬಂದ್ ನಡೆಯಲಿದೆ

ಸರ್ಕಾರ ಹಾಗೂ ನಿಯೋಗದ ನಡುವಿನ ಮಾತುಕತೆ ಮುರಿದು ಬಿದ್ದ ಕಾರಣ ಹೋರಾಟ ಅನಿವಾರ್ಯವಾಗಿದೆ. ಹಿಂದೆಯೇ ಘೋಷಣೆ ಮಾಡಿದಂತೆ ಐಕ್ಯ ಹೋರಾಟ ಸಮಿತಿ ಈಗಾಗಲೇ ಫೋಷಿಸಿರುವಂತೆ ಸೋಮವಾರ ಕರ್ನಾಟಕ ಬಂದ್ ನಡೆಯಲಿದೆ.

Recommended Video

ಸಿದ್ದು ಹೊಸ ತಂತ್ರಗಾರಿಕೆ | Siddaramaiah | Oneindia Kannada

English summary
Farmers delegation meeting with Karnataka Chief Minister B. S. Yediyurappa failed. Farmers called for Karnataka bandh on September 28, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X