ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳೆಗಳ ಕೀಟ ನಿಯಂತ್ರಣ ಮಾಹಿತಿ ಪಾಂಟಿಕ್ಸ್ ಆ್ಯಪ್ ನಲ್ಲಿ ಲಭ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ರೈತರ ಬೆಳೆಗಳಿಗೆ ಆಗುವ ಸಮಸ್ಯೆಯನ್ನು ಪ್ಲಾಂಟಿಕ್ಸ್ ಎನ್ನುವ ಅಪ್ಲಿಕೇಷನ್‌ಗೆ ಅಪ್‌ಲೋಡ್ ಮಾಡಿದರೆ ನಿಜವಾದ ಸಮಸ್ಯೆ ಹಾಗೂ ಪರಿಹಾರವನ್ನು ಶೀಘ್ರವೇ ಪಡೆಯಬಹುದಾಗಿದೆ.

ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾಲಿಟಿಕ್ಸ್; ಎಚ್ಡಿಕೆ ಬಾಂಬ್ ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾಲಿಟಿಕ್ಸ್; ಎಚ್ಡಿಕೆ ಬಾಂಬ್

ರೈತರು ಬೆಳೆಗಳಲ್ಲಿರುವ ರೋಗ, ಕೀಟಬಾಧೆ ಅಥವಾ ಪೋಷಕಾಂಶಗಳ ಕೊರತೆ ಲಕ್ಷಣವಿರುವ ಸಸ್ಯಗಳ ಫೋಟೊಗಳನ್ನು ಅಪ್‌ಲೋಡ್ ಮಾಡಿದರೆ ಮಾಹಿತಿ ಪಡೆಯಬಹುದು ಈ ಪ್ಲಾಂಟಿಕ್ಸ್ ಅಪ್ಲಿಕೇಷನ್‌ನ್ನು ಸಚಿವ ಶಿವಶಂಕರರೆಡ್ಡಿ ಚಾಲನೆ ನೀಡಿದರು.

ಎಥನಾಲ್ ಬೆಲೆ ಶೇ.25ರಷ್ಟು ಹೆಚ್ಚಳಕ್ಕೆ ನಿರ್ಧಾರ: ರೈತರ ಮೊಗದಲ್ಲಿ ಹರ್ಷ ಎಥನಾಲ್ ಬೆಲೆ ಶೇ.25ರಷ್ಟು ಹೆಚ್ಚಳಕ್ಕೆ ನಿರ್ಧಾರ: ರೈತರ ಮೊಗದಲ್ಲಿ ಹರ್ಷ

ವಿಕಾಸಸೌಧದ ಸಚಿವರ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಜರ್ಮಿನಿ ಮೂಲದ ಪೀಟ್ ಎನ್ನುವ ಸ್ಮಾರ್ಟ್ ಫೋನ್ ಆ್ಯಂಡ್ರ್ಯಾಯ್ಡ್ ಅಪ್ಲಿಕೇಶನ್ ಕಂಪೆನಿಯು ಪ್ಲಾಂಟಿಕ್ಸ್ ಎನ್ನುವ ನೂತನ ರೈತಸ್ನೇಹಿ ಆ್ಯಪ್‍ನ್ನು ಅಭಿವೃದ್ಧಿಪಡಿಸಿದ್ದು ರೈತರಿಗೆ ಅತ್ಯಂತ ಸಹಕಾರಿಯಾದ ಆ್ಯಪ್ ಆಗಿದೆ ಎಂದು ಸಚಿವರು ತಿಳಿಸಿದರು.

Farmers can get tips on farming through Pontics App

ಈ ಆ್ಯಪ್‍ನ್ನು ರೈತರು ಗೂಗಲ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಇಲ್ಲಿಯವರೆಗೆ ಪ್ರತಿ ತಿಂಗಳಿಗೆ 6 ಲಕ್ಷಕ್ಕಿಂತ ಹೆಚ್ಚಿನ ರೈತರು ವಿವಿಧ ಭಾಷೆಗಳಲ್ಲಿ ಡೌನ್‍ಲೋಡ್ ಮಾಡಿಕೊಂಡಿರುತ್ತಾರೆ. ರೈತರು ಅಪ್ಲೋಡ್ ಮಾಡುವ ಚಿತ್ರಗಳನ್ನು ಯಾವ ಪ್ರದೇಶದಿಂದ ಹಾಗೂ ಯಾವಾಗ ಅಪ್‍ಲೋಡ್ ಮಾಡಲಾಗಿದೆ ಎಂಬುದನ್ನು ಆಧರಿಸಿ ಅದರ ಮರುಕ್ಷಣವೇ ರೈತರಿಗೆ ಸೂಕ್ತಕ್ರಮಗಳನ್ನು ಈ ಆ್ಯಪ್ ಸೂಚಿಸುತ್ತದೆ.

ನರಗುಂದ ರೈತ ಬಂಡಾಯ ಸ್ಮರಿಸಿದ ರೈತರು ನರಗುಂದ ರೈತ ಬಂಡಾಯ ಸ್ಮರಿಸಿದ ರೈತರು

ಸಸ್ಯಗಳ ಆರೋಗ್ಯ ತಪಾಸಣೆ, ರೈತರ, ವಿಜ್ಞಾನಿಗಳ ಹಾಗೂ ಆಸಕ್ತರ ಒಂದೇ ವೇದಿಕೆಯಾಗಿ ಈ ಆ್ಯಪ್ ಕಾರ್ಯನಿರ್ವಹಿಸುವುದು ಮತ್ತು ಇದೊಂದು ಸಸ್ಯ ಪೀಡೆಗಳ ಲೈಬ್ರರಿಯಂತೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಪ್ರದೇಶದಲ್ಲಿ ಈ ಆ್ಯಪ್ ಮೂಲಕ ಅಲ್ಲಿನ ಹವಾಮಾನ, ತಪಾಮಾನ, ಮಳೆ ಕುರಿತಂತೆ ಮುನ್ಸೂಚನೆಗಳನ್ನು ಸಹ ಪಡೆಯಬಹುದಾಗಿದೆ.

English summary
Department of agriculture has introduced an application through android phones that could help farmers to take advise of pest and insects in crops from department designated experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X