ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರು, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಕೊಡಲಿದೆ ಕುಮಾರಸ್ವಾಮಿ ಬಜೆಟ್

|
Google Oneindia Kannada News

Recommended Video

ರೈತರು, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಕೊಡಲಿದೆ ಕುಮಾರಸ್ವಾಮಿ ಬಜೆಟ್..! | Oneindia Kannada

ಬೆಂಗಳೂರು, ಫೆಬ್ರವರಿ 05: ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅನ್ನು ಮಂಡಿಸಲು ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಕುಮಾರಸ್ವಾಮಿ ಅವರು ತಯಾರಾಗಿದ್ದಾರೆ. ಫೆಬ್ರವರಿ 8 ರಂದು ರಾಜ್ಯದ 2019-20 ನೇ ಸಾಲಿನ ಬಜೆಟ್‌ ಮಂಡನೆ ಆಗಲಿದೆ.

ಈ ಬಜೆಟ್‌ ಬಗ್ಗೆ ಹಲವು ನಿರೀಕ್ಷೆಗಳು ರಾಜ್ಯದ ಜನರಲ್ಲಿ ಮನೆ ಮಾಡಿವೆ. ರಾಜಕಾರಣದ ಕಾರಣಕ್ಕೂ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲೂ ಈ ಬಜೆಟ್‌ ಗಮನ ಸೆಳೆಯುತ್ತಿದೆ.

ಫೆಬ್ರವರಿ 8ಕ್ಕೆ ರಾಜ್ಯ ಬಜೆಟ್‌: ನಿರೀಕ್ಷೆಗಳೇನೇನು? ಫೆಬ್ರವರಿ 8ಕ್ಕೆ ರಾಜ್ಯ ಬಜೆಟ್‌: ನಿರೀಕ್ಷೆಗಳೇನೇನು?

ಕೆಲ ದಿನಗಳ ಮುಂಚೆಯಷ್ಟೆ ಕೇಂದ್ರ ಸರ್ಕಾರ ನೀಡಿರುವ ಜನಪ್ರಿಯ ಬಜೆಟ್ ಅನ್ನು ನೋಡಿರುವ ರಾಜ್ಯದ ಜನತೆ ಕುಮಾರಸ್ವಾಮಿ ಮಂಡಿಸುವ ಬಜೆಟ್ ಅನ್ನು ಕೇಂದ್ರದ ಬಜೆಟ್ ಜೊತೆ ಹೋಲಿಸಿ ನೋಡಲಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಅವರು ಜನಪ್ರಿಯ ಬಜೆಟ್ ನೀಡಲೇಬೇಕಾದ ಒತ್ತಡದಲ್ಲಿದ್ದಾರೆ. ಲೋಕಸಭೆ ಚುನಾವಣೆ ಸಹ ಸನಿಹದಲ್ಲಿರುವ ಕಾರಣ ಅದು ರಾಜಕೀಯ ಅವಶ್ಯಕತೆಯೂ ಆಗಿದೆ.

ರೈತರರಿಗೆ ಶುಭ ಸುದ್ದಿ ಖಾಯಂ

ರೈತರರಿಗೆ ಶುಭ ಸುದ್ದಿ ಖಾಯಂ

ಈ ಬಾರಿಯ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರ ಮೆಚ್ಚಿನ ವರ್ಗ ರೈತರಿಗೆ ಸಹಜವಾಗಿಯೇ ಶುಭ ಸುದ್ದಿ ಇಡಲಿದೆ. ಸಾಲಮನ್ನಾಕ್ಕೆ ಹಣ ಬಿಡುಗಡೆ ಮಾಡುವುದಾಗಿ ಈಗಾಗಲೇ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಎಷ್ಟು ಸಾವಿರ ಕೋಟಿ ಹಣ ಬಿಡುಗಡೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆರೈತ ಪರ ಬಜೆಟ್ ಮಂಡಿಸದಿದ್ದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ

ಸರ್ಕಾರಿ ನೌಕರರಿಗೆ ಶುಭ ಸುದ್ದಿ

ಸರ್ಕಾರಿ ನೌಕರರಿಗೆ ಶುಭ ಸುದ್ದಿ

ರೈತರ ಜೊತೆಗೆ ಸರ್ಕಾರಿ ನೌಕರರಿಗೂ ಭರ್ಜರಿ ಶುಭ ಸುದ್ದಿಕೊಡಲು ಕುಮಾರಸ್ವಾಮಿ ತಯಾರಿದ್ದಾರೆ ಎನ್ನಲಾಗಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸಿ 62 ಮಾಡಲಿದ್ದಾರೆ ಎನ್ನಲಾಗುತ್ತಿದೆ. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಮಧ್ಯಂತರ ಬಜೆಟ್ 2019: ವಿಶ್ಲೇಷಕರು/ಅರ್ಥಶಾಸ್ತ್ರಜ್ಞರಿಂದ ಟೀಕೆಗೆ ಒಳಪಟ್ಟ 10 ಪ್ರಮುಖ ಯೋಜನೆಗಳು

ಮಧ್ಯಮವರ್ಗ ಸೆಳೆಯಲು ನಿರ್ಧಾರ

ಮಧ್ಯಮವರ್ಗ ಸೆಳೆಯಲು ನಿರ್ಧಾರ

ಕುಮಾರಸ್ವಾಮಿ ಅವರು ರೈತರಲ್ಲದ ದುಡಿಯುವ ವರ್ಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ದೂರು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ ಹಾಗಾಗಿ ಅದರಿಂದ ನುಣುಚಿಕೊಳ್ಳಲು ಈ ಯೋಜನೆ ಘೋಷಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಉದ್ಯೋಗ ಸೃಷ್ಟಿಗೆ ಹೊಡೆತ?

ಉದ್ಯೋಗ ಸೃಷ್ಟಿಗೆ ಹೊಡೆತ?

ನಿವೃತ್ತಿ ವಯಸ್ಸು ಹೆಚ್ಚಿಸಿದರೆ ಹೊಸ ಉದ್ಯೋಗ ಸೃಷ್ಟಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಈ ಹಿಂದೆ ನಿವೃತ್ತಿ ವಯಸ್ಸು ಏರಿಸಿದ್ದಾಗಲೂ ಈ ರೀತಿಯ ಚರ್ಚೆ ಏರ್ಪಟ್ಟಿತ್ತು. ಕುಮಾರಸ್ವಾಮಿ ಅವರ ಘೋಷಣೆ ಹೊರಬಿದ್ದ ಬಳಿಕವೂ ಈ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ನಗರವಾಸಿಗಳೂ ಸಿಹಿ ಸುದ್ದಿ

ನಗರವಾಸಿಗಳೂ ಸಿಹಿ ಸುದ್ದಿ

ನಗರ ಪ್ರದೇಶಗಳಲ್ಲಿ ಕುಮಾರಸ್ವಾಮಿ ಅವರ ಜನಪ್ರಿಯತೆ ಕಡಿಮೆ, ಜೆಡಿಎಸ್‌ಗೆ ಸಹ ನಗರ ಪ್ರದೇಶಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಹಾಗಾಗಿ ನಗರವಾಸಿಗಳನ್ನು ಸೆಳೆಯಲು ಬಜೆಟ್‌ನಲ್ಲಿ ಒತ್ತು ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

English summary
State Government employees retirement age may hike by two years in Kumaraswamy budget. Farmers also will get sweet news from the budget. Kumaraswamy will present budget on February 08.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X