ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜಗುಣಾನಂದ ಸ್ವಾಮೀಜಿ ಹೇಳಿಕೆಗೆ ರೈತನ ಖಡಕ್ ಎದಿರೇಟು

By Manjunatha
|
Google Oneindia Kannada News

Recommended Video

ನಿಜಗುಣಾನಂದ ಸ್ವಾಮೀಜಿ ಹೇಳಿಕೆ ಬಗ್ಗೆ ನಾಡಿನ ರೈತರೊಬ್ಬರು ಏನ್ ಹೇಳ್ತಾರೆ ಕೇಳಿ | Oneindia Kannada

ಬೆಂಗಳೂರು, ಜೂನ್ 26: ನಿಜಗುಣಾನಂದ ಸ್ವಾಮೀಜಿ ಅವರು ರೈತ ಸಾಲಮನ್ನಾಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ರೈತನೊಬ್ಬ ನಿಜಗುಣಾನಂದ ಸ್ವಾಮೀಜಿಯವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾತನಾಡುತ್ತಿರುವ ರೈತ ಹೊಲದಲ್ಲಿ ನಿಂತು ಸ್ವಾಮೀಜಿ ಅವರ ಮೇಲೆ ಸಿಟ್ಟು ವ್ಯಕ್ತಪಡಿಸಿದ್ದಾನೆ. ಕಠು ಮಾತುಗಳನ್ನೇ ಬಳಸಿ ಸ್ವಾಮೀಜಿಯವರನ್ನು ನಿಂದಿಸಿರುವ ರೈತ ಸಾಲಮನ್ನಾ ತನಗೆ ಏಕೆ ಬೆಂಕು ಎಂದು ಸೂಚ್ಯಗೊಳಿಸಿದ್ದಾನೆ.

ರೈತರ ಸಾಲ ಕುರಿತ ಹೇಳಿಕೆ ಬಗ್ಗೆ ನಿಜಗುಣಾನಂದ ಸ್ವಾಮೀಜಿ ಸ್ಪಷ್ಟನೆರೈತರ ಸಾಲ ಕುರಿತ ಹೇಳಿಕೆ ಬಗ್ಗೆ ನಿಜಗುಣಾನಂದ ಸ್ವಾಮೀಜಿ ಸ್ಪಷ್ಟನೆ

ದುಷ್ಚಟಗಳಿಂದ ಸಾಲ ಮಾಡುತ್ತಾರೆ ಎಂಬರ್ಥದ ಮಾತನ್ನು ನಿಜಗುಣಾನಂದ ಸ್ವಾಮೀಜಿ ಅವರು ಆಡಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಉತ್ತರಿಸಿರುವ ಈ ಜವಾರಿ ರೈತ ಕಷ್ಟಪಟ್ಟು ದುಡಿಯುವವರು ನಾವು ಮಠದಲ್ಲಿ ಕೂತು ಹಾಲು, ಅನ್ನ ತಿನ್ನುವ ನಿನಗೆ ನಮ್ಮ ಕಷ್ಟ ಗೊತ್ತಿಲ್ಲವೆಂದು ಏಕವಚನದಲ್ಲಿಯೇ ಆಕ್ರೋಶ ಹೊರಹಾಕಿದ್ದಾನೆ.

ರೈತರು ಇಸ್ಪಿಟ್, ಮಟ್ಕಾ ಆಡಿ ಸಾಲ ಮಾಡಿಕೊಂಡಿಲ್ಲ, ಮಳೆ ಕೈಕೊಟ್ಟು ಬೆಳೆ ಬಾರದೆ ಇದ್ದಾಗ ಮನೆ ನಿಭಾಯಿಸಲು, ಮತ್ತೊಂದು ಬೆಳೆ ಬೆಳೆಯಲೆಂದು ಸಾಲ ಮಾಡುತ್ತೇವೆ, 'ಮಳೆ ಏನು ನಿಮ್ಮಪ್ಪನದಾ, ಬೇಕೆಂದಾಗ ಬರುವುದಕ್ಕೆ' ಎಂದು ಹರಿಹಾಯ್ದಿದ್ದಾನೆ. 45 ಸೆಕೆಂಡ್‌ನ ಈ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದೆ.

Farmer video went viral in which he explains why they take loans

ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿರುವ ನಿಜಗುಣಾನಂದ ಸ್ವಾಮೀಜಿ ಅವರು, 'ನಾನು ಹೇಳಿರುವ ಮಾತುಗಳನ್ನು ತಿರುಚಲಾಗಿದೆ. ನಾನು ಸಾಲಮನ್ನಾ ನಿರ್ಣಯವನ್ನು ಸ್ವಾಗತಿಸುತ್ತೇನೆ' ಎಂದಿದ್ದಾರೆ.

English summary
Farmer video went viral in social media which he explains why they take lons. He is a north Karnataka farmer and he said farmers took loan when rain does not come when we have to face drought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X