ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮಾಡಿ ಜೀವ ತಕ್ಕಂಡ್ರೆ ನಾವೇನ್ ಮಾಡದು!

|
Google Oneindia Kannada News

ಹುಬ್ಬಳ್ಳಿ ಜು. 08: 'ಯ್ಯಾರ್ಯಾರದ್ದೋ ಬಳಿ ಸಾಲ ಮಾಡಿಕೊಂಡು ರೈತರು ಆತ್ಮಹತ್ಯೆ ಮಾಡಿಕೊಂಡ್ರೆ ಸರ್ಕಾರ ಏನು ಮಾಡಲಿಕ್ಕೆ ಆಗುತ್ತೆ? ಇದಕ್ಕೆಲ್ಲ ನಾವು ಹೊಣೆಗಾರರಾಗುವುದಿಲ್ಲ' ಇಂಥ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದು ತೋಟಗಾರಿಕಾ ಸಚಿವ ಶ್ಯಾಮನೂರು ಶಿವಶಂಕರಪ್ಪ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆಗೂ ತೋಟಗಾರಿಕಾ ಇಲಾಖೆಗೂ ಯಾವುದೇ ಸಂಬಂಧವಿಲ್ಲ . ರೈತರು ಮಾರ್ವಾಡಿಗಳ ಬಳಿ ದುಪ್ಪಟ್ಟು ಬಡ್ಡಿಗೆ ಸಾಲ ಪಡೆದು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಮರುಪ್ರಶ್ನೆ ಹಾಕಿದರು.[ಬೆಳಗಾವಿ ರೈತನ ಶ್ವಾನದ ಗೋಳು ಸುವರ್ಣಸೌಧ ತಲುಪೀತೆ?]

congress

ಸಿಎಂ ಸಿದ್ದರಾಮಯ್ಯ, ರೈತರ ಆತ್ಮಹತ್ಯೆಗೆ ಹೆಚ್ಚಿನ ಪರಿಹಾರ ನೀಡಿದರೆ, ಮತ್ತೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡಿದಂತೆ ಆಗುತ್ತಿದೆ ಎಂದು ವಿವಾದಾದ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.[ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಂಡ ಶಾಸಕ!]

5 ವರ್ಷ ಸಾಲ ಮರುಪಾವತಿ ಇಲ್ಲ
ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸಭೆ ಸೇರಿ ಮುಂದಿನ ಐದು ವರ್ಷಗಳ ಕಾಲ ರೈತರಿಂದ ಯಾವುದೇ ಬಗೆಯ ಸಾಲ ವಸೂಲಿ ಮಾಡಬಾರದು ಎಂದು ನಿರ್ಣಯ ತೆಗೆದುಕೊಂಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಭೆ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಮುಂದಾಗಿದ್ದ ರೈತ ಮಹಿಳೆಯರು
ಬುಧವಾರ ಮಂಡ್ಯ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಮಂದಾಗಿದ್ದರು. ಆದರೆ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ.

English summary
Hubballi: The State Government is not responsible for Farmers suicide, said horticulture minister shamanur shivashankarappa, at Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X