ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ವರ್ಷಗಳ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಹಲವು ವರ್ಷಗಳ ನಂತರ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಕೊರೊನಾ ಸೋಂಕು ಹಾಗೂ ವಿಪರೀತ ಮಳೆ ನಡುವೆ ಈ ಸುದ್ದಿ ಕೊಂಚ ನೆಮ್ಮದರಿ ತರಿಸಿದೆ.

ಕಳೆದ ಒಂದೂವರೆ ವರ್ಷಗಳಲ್ಲಿ ರೈತರ ಆತ್ಮಹತ್ಯೆಯ 746 ಪ್ರಕರಣಗಳು ವರದಿಯಾಗಿದ್ದವು, 2019-20ರಲ್ಲಿ 1076 ಪ್ರಕರಣಗಳು ಪತ್ತೆಯಾಗಿತ್ತು. ರಾಜ್ಯದ ಕೃಷಿ ಇಲಾಖೆಯಲ್ಲಿರುವ ಮಾಹಿತಿ ಪ್ರಕಾರ ಏಪ್ರಿಲ್ 2020 ಹಾಗೂ ಸೆಪ್ಟೆಂಬರ್ 2021ರ ನಡುವೆ 746 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರವು ದೇಶವನ್ನು ಕಾಪಾಡಿದೆ: ಮೋದಿಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರವು ದೇಶವನ್ನು ಕಾಪಾಡಿದೆ: ಮೋದಿ

ಉತ್ತರ ಕರ್ನಾಟಕ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕಟಣಗಳು ಹೆಚ್ಚಿವೆ. ಹೆಚ್ಚಾಗಿ ಮಳೆಯಾಗುತ್ತಿರುವ ಕಾರಣ ಇಳುವರಿಯೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

Farmer Suicide Rate Decreases in Karnataka After Many Years

ರಾಜ್ಯ ನೈಸರ್ಗಿಕ ವಿಪತ್ತು ಮತ್ತು ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸರೆಡ್ಡಿ ಮಾತನಾಡಿ, ''ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಅಂತರ್ಜಲದ ಮಟ್ಟವನ್ನು ಗಣನೀಯವಾಗಿ ಏರಿಕೆ ಕಂಡಿದೆ'' ಎಂದರು.

ಮಳೆ ಬಾರದಿದ್ದರೆ ರೈತರಿಗೆ ತಮ್ಮ ಬಂಡವಾಳದ ಶೇ.50ರಷ್ಟು ಕೂಡ ದೊರೆಯುವುದಿಲ್ಲ, ಉತ್ತಮ ಮಳೆಯು ರೈತರಲ್ಲಿ ಸಂಕಷ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ಅವರಿಗೆ ಭರವಸೆಯನ್ನು ನೀಡುತ್ತದೆ, ಕಡಿಮೆ ಸಂಖ್ಯೆಯ ಆತ್ಮಹತ್ಯೆಗೆ ಇದೂ ಒಂದು ಕಾರಣವಾಗಬಹುದು ಎಂದು ಹೇಳಿದರು.

ಆದಾಗ್ಯೂ, ಸಾಮಾಜಿಕ, ಆರ್ಥಿಕ ಸೇರಿದಂತೆ ಹಲವು ಇತರೆ ಅಂಶಗಳು ಕೂಡ ಇರುತ್ತವೆ, ಉತ್ತಮ ಮಳೆಯಿಂದಾಗಿ ರಾಜ್ಯವು 150 ಲಕ್ಷ ಟನ್‌ಗಳಿಗಿಂತ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ ಇದು ಅತ್ಯಧಿಕವಾದದ್ದು ಎಂದರು.

ಕಳೆದೆರಡು ವರ್ಷಗಳಲ್ಲಿ ಕಡಿಮೆ ಗುಣಮಟ್ಟದ ಬೀಜಗಳನ್ನು ಬೀಜಗಳನ್ನು ವಶಪಡಿಸಿಕೊಂಡಿರುವ ಕಾರಣ ರೈತರಿಗೆ ನಷ್ಟದ ಪ್ರಮಾಣ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ನಾವು ಕಳೆದ ಎರಡು ವರ್ಷಗಳಲ್ಲಿ 10 ಲಕ್ಷ ಟನ್‌ಗಳಷ್ಟು ಪ್ರಮಾಣಿತ ಬೀಜಗಳನ್ನು ವಶಪಡಿಸಿಕೊಂಡಿದ್ದೇವೆ, ವ್ಯಕ್ತಿಗಳು ಹಾಗೂ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೀಜಗಳ ಗುಣಮಟ್ಟ ಕಳಪೆಯಾಗಿದ್ದರೆ ಇಳುವರಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ಉತ್ತಮ ಮಳೆಯಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ. ಕೃಷಿ ಕಾನೂನುಗಳು ರೈತರಿಗೆ ಉತ್ತಮ ಮಾರುಕಟ್ಟೆ ಪಡೆಯಲು ಸಹಕಾರಿಯಾಗಿವೆ ಎಂದರು.

ನಮ್ಮ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿದ್ದಾರೆ, ಕೃಷಿ ಉತ್ಪನ್ನಗಳ ಅಂತಾರಾಜ್ಯ ಚಲನೆಗೆ ಯಾವುದೇ ತೆರಿಗೆ ಇಲ್ಲ. ನಾವು ಆರಂಭಿಸಿರುವ ಆಹಾರ ಸಂಸ್ಕರಣಾ ಘಟಕಗಳತ್ತ ಗಮನಹರಿಸಬೇಕು, ಇದು ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತದೆ ಎಂದು ಹೇಳಿದರು.
2019-20-1071 ಮಂದಿ ರೈತರ ಸಾವು
2020-2021-656 ಮಂದಿ ಸಾವು
2021-22- ಇಲ್ಲಿಯವರೆಗೆ 96 ಮಂದಿ ರೈತರು ಮೃತಪಟ್ಟಿದ್ದಾರೆ.

2020ರಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ನಂಬರ್ 2: 2019ರಲ್ಲಿ ಕರ್ನಾಟಕದಲ್ಲಿ 1992 ಮಂದಿ ರೈತರು ಸಾವಿಗೆ ಶರಣಾಗಿದ್ದು, ಅನ್ನದಾತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂಬ ಸಂಗತಿ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ- ಅಂಶಗಳಿಂದ ತಿಳಿದುಬಂದಿದೆ.

2018ರಲ್ಲಿ 2,405 ರೈತರು ಸಾವಿಗೆ ಶರಣಾಗಿದ್ದರು. ಅದಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದೆ. 2017ರಲ್ಲಿ ಕರ್ನಾಟಕದಲ್ಲಿ 2079 ಮಂದಿ, 2016ರಲ್ಲಿ 2,160 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂರು ವರ್ಷಗಳ ಬಳಿಕ ಆತ್ಮಹತ್ಯೆಗಳ ಸಂಖ್ಯೆ 2000ಕ್ಕಿಂತ ಕೆಳಗಿಳಿದಿದೆ.

ಇನ್ನು ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 3,927 ರೈತರು ಸಾವಿಗೆ ಶರಣಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶದಲ್ಲಿ 1,029 ರೈತರು ಪ್ರಾಣ ಕಳೆದುಕೊಂಡಿದ್ದರು.

ಕಳೆದ ವರ್ಷ ದೇಶದಲ್ಲಿ ಒಟ್ಟಾರೆ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ಸಂಭವಿಸಿದ 10,349 ರೈತರ ಆತ್ಮಹತ್ಯೆಗೆ ಹೋಲಿಸಿದರೆ ದæೕಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕೊಂಚ ಇಳಿಕೆ ಕಂಡಿದೆ. 2017ರಲ್ಲಿ 10,665, 2016ರಲ್ಲಿ 11,379 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದರು.

Recommended Video

Narendra Modi ಅವರನ್ನು ಟೀಕಿಸಿ , ಪ್ರಶ್ನಿಸಿದ Siddaramaiah | Oneindia Kannada

English summary
Amid the gloom of Covid pandemic and rain misery, here is some positive news. After many years, farmer suicides in Karnataka have come down drastically.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X