ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಗೆ ಪ್ರಶ್ನೆ ಕೇಳಿದ್ದಕ್ಕೆ ಮೈಕ್ ಕಸಿದುಕೊಂಡರು

By Manjunatha
|
Google Oneindia Kannada News

ಹುಮನಾಬಾದ್, ಫೆಬ್ರವರಿ 26: ಭಾನುವಾರ (ಫೆ.25) ಹುಮನಾಬಾದ್ನಲ್ಲಿ ಅಮಿತ್ ಶಾ ಅವರು ರೈತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ಮುಜುಗರವಾಗುವ ಪ್ರಶ್ನೆ ಕೇಳಿದ ರೈತನೊಬ್ಬನಿಂದ ಬಲವಂತವಾಗಿ ಮೈಕ್ ಕಸಿದುಕೊಂಡಿರುವ ಘಟನೆ ನಡೆದಿದೆ.

ಅಮಿತ್ ಶಾ ಅವರಿಗೆ ಕೇಂದ್ರ ಸರ್ಕಾರದ ವಿರುದ್ಧವಾಗಿ ರೈತನೋರ್ವ ಪ್ರಶ್ನೆ ಕೇಳಿದ್ದಾನೆ ಇದರಿಂದ ಅಮಿತ್ ಶಾ ಮುಜುಗರಕ್ಕೊಳಗಾಗಿದ್ದಾರೆ ಕೂಡಲೇ ಪ್ರಶ್ನೆ ಕೇಳಿದ ರೈತನ ಸುತ್ತ ಇದ್ದ ಕೆಲವರು ರೈತನಿಂದ ಮೈಕ್ ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮಿತ್ ಶಾ ಅವರಿಗೆ ರೈತನೋರ್ವ ನಿಮ್ಮ ಸರ್ಕಾರ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದೆ ಆದರೆ ರೈತರ ಸಾಲವನ್ನು ಮಾತ್ರ ಏಕೆ ಮನ್ನಾ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಮಿತ್ ಶಾ ಅವರು ನಾವು ಯಾವುದೇ ಶ್ರೀಮಂತರ ಸಾಲ ಮನ್ನಾ ಮಾಡಿಲ್ಲ ಎಂದಿದ್ದಾರೆ. ಇದಕ್ಕೆ ಸುಮ್ಮನಾಗದ ಆ ರೈತ ಇಲ್ಲ ನೀವು ಅವರ ಸಾಲ ಮನ್ನಾ ಮಾಡಿದ್ದೀರಂತೆ ರಾಹುಲ್ ಗಾಂಧಿ ಅವರು ಹೇಳಿದ್ದಾರೆ ಎಂದಿದ್ದಾರೆ.

Farmer manhandled for asking question to Amit Shah

ಅವರ ಬಳಿ ಸಾಕ್ಷಿ ಇದ್ದರೆ ಕೊಡಲು ಹೇಳಿ ಎಂದು ಅಮಿತ್ ಶಾ ಹೇಳಿದ್ದಾರೆ, ಇದಕ್ಕೆ ಸುಮ್ಮನಾಗದ ರೈತ, ವಿಜಯ್ ಮಲ್ಯ, ನೀರವ್ ಮೋದಿ ಅವರುಗಳ ಹೆಸರು ತೆಗೆದಿದ್ದಾರೆ, ಇಷ್ಟಕ್ಕೆ ಕಿರಿಕಿರಿ ಪಟ್ಟುಕೊಂಡ ಅಮಿತ್ ಶಾ ಅವರು 'ಸಂವಾದ ಹೀಗೆ ನಡೆಯಲು ಸಾಧ್ಯವಿಲ್ಲ' ಎಂದರು, ಕೂಡಲೇ ಅಲ್ಲಿದ್ದ ಇಬ್ಬರು ಎದ್ದು ರೈತನ ಕೈಯಿಂದ ಬಲವಂತವಾಗಿ ಮೈಕ್ ಕಸಿದುಕೊಂಡರು.

ಮೈಕ್ ಕಸಿದುಕೊಂಡ ವಿಡಿಯೋ ಈಗ ವೈರಲ್ ಆಗಿದ್ದು ಹಲವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ 'ಬಿಜೆಪಿಗೆ ಎದುರು ಮಾಡುವಂತಿಲ್ಲ, ಅವರನ್ನು ಪ್ರಶ್ನೆ ಮಾಡುವಂತಿಲ್ಲ ಅವರು ಹೇಳುವ ಸುಳ್ಳು ಕೇಳಿಸಿಕೊಂಡು ತೆಪ್ಪಗಿರಿ ಅಷ್ಟೆ' ಎಂದು ವ್ಯಂಗ್ಯೋಕ್ತಿಗಳನ್ನು ಹರಿಬಿಟ್ಟಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಕೂಡ ಈ ವಿಡಿಯೋವನ್ನು ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು 'ರೈತನ ಪ್ರಶ್ನೆಗೆ ಉತ್ತರಿಸಲಾಗದೆ ಆತನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ, ಆ ಸಂವಾದದಲ್ಲಿ ಅಮಿತ್ ಶಾ ಅವರು ಸಾಕಷ್ಟು ರೈತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ' ಎಂದು ಬರೆದಿದೆ.

English summary
A Farmer manhandled for asking question in interaction function with BJP president Amit Shah's In Humnabad. manhandling video went viral Karnataka congress is also posted video in its twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X