ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ 31ರ ಬದಲಿಗೆ ಮಾರ್ಚ್ 31ರ ಒಳಗೆ ಮಾಡಿದ್ದ ಸಾಲಮನ್ನಾ?

By Manjunatha
|
Google Oneindia Kannada News

Recommended Video

ರೈತರ ಸಾಲ ಮನ್ನಾ ಬಗ್ಗೆ ಹೊಸ ಮಾಹಿತಿ ಕೊಟ್ಟ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು, ಜೂನ್ 25: ಡಿಸೆಂಬರ್ 31 , 2017ರ ವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎಂಬ ಪರಿಧಿಯನ್ನು ವಿಸ್ತರಿಸಿ ಮಾರ್ಚ್ 31ರ ಒಳಗಿನ ಸಾಲವನ್ನು ಮನ್ನಾ ಮಾಡಲು ಸರ್ಕಾರ ಚಿಂತಿಸಿದೆ.

ವಿಧಾನಸೌಧದಲ್ಲಿ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನಿರ್ದೇಶಕರ ಸಭೆಯಲ್ಲಿ ಈ ಸಲಹೆ ಬಂದಿದ್ದು ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಸಿದ್ದರಾಮಯ್ಯ ಮಾತಿಗೆ ನೇರವಾಗಿಯೇ ಎದಿರೇಟು ನೀಡಿದ ಕುಮಾರಸ್ವಾಮಿ ಸಿದ್ದರಾಮಯ್ಯ ಮಾತಿಗೆ ನೇರವಾಗಿಯೇ ಎದಿರೇಟು ನೀಡಿದ ಕುಮಾರಸ್ವಾಮಿ

ಗಡುವು ವಿಸ್ತರಣೆಯಿಂದ ಸರ್ಕಾರಕ್ಕೆ ತಗಲುವ ಹೆಚ್ಚುವರಿ ವೆಚ್ಚ ಕುರಿಂತೆ ಸರ್ಕಾರಕ್ಕೆ ಹಾಗೂ ಸಹಕಾರ ಸಂಸ್ಥೆಗಳ ಮೇಲೆ ಬೀಳುವ ಹೊರೆಯ ಪ್ರಮಾಣ ಕುರಿತಂತೆ ನಿಖರ ಅಂಕಿ ಅಂಶಗಳ ವಾಸ್ತವ ವರದಿ ನೀಡುವಂತೆ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಸಾಲ ನವೀಕರಣದಿಂದ ರೈತನಿಗೆ ಲಾಭವಾಗದು

ಸಾಲ ನವೀಕರಣದಿಂದ ರೈತನಿಗೆ ಲಾಭವಾಗದು

ಸಹಕಾರ ಸಂಘದಲ್ಲಿ ಹಳೆಯ ಸಾಲವನ್ನೇ ನವೀಕರಣ ಮಾಡಿದರೆ ರೈತರಿಗೆ ಪ್ರಯೋಜನವಾಗುವುದಿಲ್ಲ ಬದಲಿಗೆ ಅವಶ್ಯಕತೆ ಇದ್ದಾಗ ಅವರಿಗೆ ಸಾಲ ಸೌಲಭ್ಯ ದೊರಕುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?

ಪರಮೇಶ್ವರ್ ಸಹಿತ ಸಂಪುಟ ಸದಸ್ಯರ ಬೆಂಬಲ ಇದೆ

ಪರಮೇಶ್ವರ್ ಸಹಿತ ಸಂಪುಟ ಸದಸ್ಯರ ಬೆಂಬಲ ಇದೆ

ರೈತರನ್ನು ಉಳಿಸಬೇಕೆನ್ನುವ ತಮ್ಮ ಸದಾಶಯಕ್ಕೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಒಳಗೊಂಡಂತೆ ತಮ್ಮ ಸಂಪುಟದ ಸಹೋದ್ಯೋಗಿಗಳು ಹಾಗೂ ಶಾಸಕ ಮಿತ್ರರು ಕೈಜೋಡಿಸಿದ್ದಾರೆ. ಬೃಹತ್ ಮೊತ್ತದ ಸಾಲ ಮನ್ನಾ ಕುರಿತಂತೆ ಸನ್ನಿಹಿತದಲ್ಲಿಯೇ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳುವುದಾಗಿ ಕುಮಾರಸ್ವಾಮಿ ಅವರು ಸಭೆಗೆ ತಿಳಿಸಿದರು.

ಹಿಂದಿನ ಸರ್ಕಾರ 50000 ಮನ್ನಾ ಮಾಡಿತ್ತು

ಹಿಂದಿನ ಸರ್ಕಾರ 50000 ಮನ್ನಾ ಮಾಡಿತ್ತು

ಹಿಂದಿನ ಸರ್ಕಾರ ಸಹಕಾರಿ ಸಂಸ್ಥೆಗಳಲ್ಲಿನ ಐವತ್ತು ಸಾವಿರ ರೂ ವರೆಗಿನ ಬೆಳೆ ಸಾಲ ಮನ್ನಾ ಮಾಡಿದೆ. ಇದರ ಮೊತ್ತ ಎಂಟು ಸಾವಿರ ಕೋಟಿ ರೂ ಗಳಿಗೂ ಅಧಿಕವಾಗಿದೆ. ಪುನಃ ಸಾಲ ಮನ್ನಾ ಯೋಜನೆಯಿಂದ ರಾಜ್ಯ ಬೊಕ್ಕಸಕ್ಕೆ ಹತ್ತು ಸಾವಿರ ಕೋಟಿ ರೂ ಹೊರೆ ಬೀಳಲಿದೆ. ಇದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರಾಜ್ಯದ ರೈತರು ಪಡೆದಿರುವ ಬೆಳೆ ಸಾಲದ ವಿವರಗಳನ್ನು ಕಲೆ ಹಾಕಬೇಕಾಗಿದೆ

ಆರನೇ ವೇತನ ಆಯೋಗ ಶಿಫಾರಸ್ಸಿಗೆ 17 ಸಾವಿರ ಕೋಟಿ

ಆರನೇ ವೇತನ ಆಯೋಗ ಶಿಫಾರಸ್ಸಿಗೆ 17 ಸಾವಿರ ಕೋಟಿ

ರಾಜ್ಯ ಸರ್ಕಾರರ ಆರನೇ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನಕ್ಕೆ ಹದಿನೇಳು ಸಾವಿರ ಕೋಟಿ ರೂ ಗಳಿಗೆ ಹೆಚ್ಚು ಮೊತ್ತದ ಅವಶ್ಯಕತೆ ಇದೆ. ಅಲ್ಲದೆ, ಹಿಂದಿನ ಸರ್ಕಾರದ ಪ್ರಮುಖ ಯೋಜನೆಗಳನ್ನೂ ಮುಂದುವರೆಸಬೇಕಾದ ಅನಿವಾರ್ಯತೆ ಇದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಸನ್ನಿಹಿತದಲ್ಲೇ ತಾವು ಮಂಡಿಸಲಿರುವ ಬಜೆಟ್‌ನಲ್ಲಿ ಸರ್ಕಾರದ ತೀರ್ಮಾನವನ್ನು ಘೋಷಿಸಲು ಯೋಜಿಸಿರುವುದಾಗಿ ಕುಮಾರಸ್ವಾಮಿ ಅವರು ಸಭೆಗೆ ವಿವರಿಸಿದರು.

English summary
Government thinking to waive off loan which taken before March 31 this year. Before this said to be loans taken before December 31st 2017 only be waive off but kumaraswamy may change the date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X