ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಮನ್ನಾಕ್ಕೆ 15 ದಿನದ ಕಾಲಾವಕಾಶ ಕೋರಿದ ಕುಮಾರಸ್ವಾಮಿ

By Gururaj
|
Google Oneindia Kannada News

ಬೆಂಗಳೂರು, ಮೇ 30 : ರೈತರ ಸಾಲ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಸಭೆ ನಡೆಸುತ್ತಿದ್ದಾರೆ. ಸಾಲ ಮನ್ನಾ ಕುರಿತು ಇಂದು ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ.

ರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿ

ವಿಧಾನಸೌಧದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ನೂರಾರು ರೈತರು ಪಾಲ್ಗೊಂಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಸಭೆಗೆ ಆಗಮಿಸಿದ್ದಾರೆ.

'ಸಾಲ ಮನ್ನಾ ಸಾಧ್ಯವಿಲ್ಲ' ಎಂದು ಎಲ್ಲೂ ಹೇಳಿಲ್ಲ : ಕುಮಾರಸ್ವಾಮಿ'ಸಾಲ ಮನ್ನಾ ಸಾಧ್ಯವಿಲ್ಲ' ಎಂದು ಎಲ್ಲೂ ಹೇಳಿಲ್ಲ : ಕುಮಾರಸ್ವಾಮಿ

'ಪಾಕೃತಿಕ ವಿಕೋಪದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ, ಸಾಲವನ್ನು ಸಂಪೂರ್ಣವಾಗಿ ಮನ್ನಾಮಾಡಬೇಕು' ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು.

HD Kumaraswamy

'ವಿಧಾನಸೌಧದಲ್ಲಿ ಇಂದು ಮೂರು ಸಭೆಗಳಿವೆ. ಕುಮಾರಸ್ವಾಮಿ ಅವರು ಕರೆದಿರುವ ಸಭೆಗೆ ರೈತರು ಆಗಮಿಸಿದ್ದಾರೆ. ರೈತರಿಂದ ಸಲಹೆ ಸ್ವೀಕರಿಸಿ, ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಡಾ.ಜಿ.ಪರಮೇಶ್ವರ ಹೇಳಿದರು.

ರೈತರ ಸಾಲ ಮನ್ನಾ: ಜೆಡಿಎಸ್ ನಲ್ಲಿ ಏನು ಲೆಕ್ಕಾಚಾರ ನಡೀತಿದೆ?ರೈತರ ಸಾಲ ಮನ್ನಾ: ಜೆಡಿಎಸ್ ನಲ್ಲಿ ಏನು ಲೆಕ್ಕಾಚಾರ ನಡೀತಿದೆ?

Newest FirstOldest First
1:55 PM, 30 May

15 ದಿನದಲ್ಲಿ ಸಾಲಮನ್ನಾ ಬಗ್ಗೆ ಅಧಿಕೃತವಾದ ಆದೇಶ ಪ್ರಕಟ ಎಚ್.ಡಿ.ಕುಮಾರಸ್ವಾಮಿ ಹೇಳಿದರು
1:54 PM, 30 May

ಸೂತ್ರದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
1:53 PM, 30 May

ಸಾಮಲನ್ನಾಕ್ಕೆ ಎರಡು ಸೂತ್ರ ಮುಂದಿಟ್ಟ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.
1:40 PM, 30 May

ಸಾಲಮನ್ನಾ ಆಗುತ್ತೇ ಯಾವುದೇ ಅನುಮಾನ ಬೇಡ. ಆದರೆ, ಇಂದೇ ಸಾಲಮನ್ನಾ ಮಾಡಿ ಎಂದರೆ ಹೇಗೆ?. ಬೆಳೆಸಾಲವನ್ನು ಮನ್ನಾ ಮಾಡೋಣ, ಆದರೆ, ಮದುವೆಗೆ, ಮನೆ ಕಟ್ಟಲು ಮಾಡಿದ ಸಾಲ ಮನ್ನಾ ಮಾಡುವುದು ಎಷ್ಟು ಸರಿ. 500 ಎಕರೆ ಭೂಮಿ ಹೊಂದಿರುವ ರೈತನ ಸಾಲವನ್ನು ಮನ್ನಾ ಮಾಡಬೇಕೆ?’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.
1:37 PM, 30 May

'ಪುಣ್ಯಾತ್ಮ ರಾಹುಲ್ ಗಾಂಧಿ' : ‘ಏನೋ ಪುಣ್ಯಾತ್ಮ ರಾಹುಲ್ ಗಾಂಧಿ ನಂಬಿಕೆ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಇದು ನಿಮಗೂ ಒಳ್ಳೆಯ ಅವಕಾಶ. ಅವರು ಸಾಲಮನ್ನಾಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ' ಎಂದು ಕುಮಾರಸ್ವಾಮಿ ಹೇಳಿದರು.
1:32 PM, 30 May

ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೆಲವು ರೈತರು ಕಿಡಿ ಕಾರಿದರು. 'ಸಾಲಮನ್ನಾ ಮಾಡುವುದಾಗಿ ಹೇಳಿ ನಮ್ಮಿಂದ ಚಂದಾವಸೂಲಿ ಮಾಡಿದ್ದಾರೆ ಎಂದು ಕೆಲವು ರೈತರು ಆರೋಪಿಸಿದರು. ‘50, 100, 1000 ರೂ.ವರೆಗೂ ವಸೂಲಿ ಮಾಡಿದ್ದಾರೆ. ಕೋಟಿಗಟ್ಟಲೇ ಹಣ ವಸೂಲಿ ಮಾಡಲಾಗಿದೆ. ನಮ್ಮ ಹಣವನ್ನು ವಾಪಸ್ ಕೊಡಿಸಿ' ಎಂದು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.
1:28 PM, 30 May

'ನಿಮಗೆ ಸಂಪೂರ್ಣ ಬಹುಮತ ಬಾರದೆ ಇರಬಹುದು. ಆದರೆ, ನೀವು ಮುಖ್ಯಮಂತ್ರಿಗಳಾಗಿದ್ದೀರಿ. ಕಾರಣವನ್ನು ಹೇಳದೆ ರೈತರ ಸಾಲವನ್ನು ಮನ್ನಾ ಮಾಡಿ ರೈತರ ನೆರವಿಗೆ ಬನ್ನಿ' ಎಂದು ರೈತ ಮುಖಂಡ ಕುರಬೂರು ಶಾಂತಕುಮಾರ್ ಒತ್ತಾಯಿಸಿದರು.
Advertisement
1:23 PM, 30 May

'ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲಿ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಈ ನಿಲುವನ್ನು ನಾನು ಸ್ವಾಗತಿಸಿದ್ದೆ. ಬಿ.ಎಸ್.ಯಡಿಯೂರಪ್ಪ ಅವರು ಮಂಗಳೂರಿಗೆ ಭೇಟಿ ನೀಡಿದ್ದರಿಂದ ನಾನು ಸಭೆಗೆ ಬಂದಿದ್ದೇನೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು' ಎಂದು ಗೋವಿಂದ ಕಾರಜೋಳ ಅವರು ಹೇಳಿದರು.
1:19 PM, 30 May

ಕೆಲವು ರೈತರು ನೀರಾವರಿ ಯೋಜನೆಗಳ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಅವರು ನೀರಾವರಿ ಯೋಜನೆ ಕುರಿತು ಚರ್ಚೆ ನಡೆಸಲು ಮತ್ತೊಂದು ಸಭೆ ನಡೆಸಲಾಗುತ್ತದೆ. ಸಾಲಮನ್ನಾ ಬಗ್ಗೆ ಮಾತನಾಡಿ ಎಂದರು
1:15 PM, 30 May

'ರೈತರು ತಮ್ಮ ಸಲಹೆ ನೀಡಲು ಅವಕಾಶ ನೀಡಲಾಗಿದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ. ಕಾಂಗ್ರೆಸ್ ಪಕ್ಷದವರು ವಿರೋಧ ವ್ಯಕ್ತಪಡಿಸುವುದಿಲ್ಲ. ಸಭೆಯಲ್ಲಿ ಏನೋನೋ ಮಾತನಾಡಲು ಹೋಗಬೇಡಿ. ದುಡುಕಿ ಮಾತನಾಡಬೇಡಿ. ಸಾಲಮನ್ನಾ ಹುಡುಗಾಟದ ವಿಷಯವಲ್ಲ. ನಮಗೆ ಸ್ವಲ್ಪ ಕಾಲಾವಕಾಶ ನೀಡಿ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
1:07 PM, 30 May

ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತಿವಿ ಅಂತಾರೆ. ಕಾಂಗ್ರೆಸ್ ಬೇಷರತ್ ಬೆಂಬಲ ನೀಡಲಿದೆ ಅಂತಾರೆ. ಒಂದು ವೇಳೆ ಅವರು ತಕರಾರು ತೆಗೆದ್ರೆ ಏನು ಮಾಡುವಿರಿ?. ರೈತ ಮುಖಂಡನಿಂದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಶ್ನೆ
1:04 PM, 30 May

ಹಂತ-ಹಂತವಾಗಿ ರೈತರ ಸಾಲ ಮನ್ನಾ ಮಾಡುವ ಯೋಜನೆ ಇದೆ. ಮೊದಲ ಕಂತಿನ ಸಾಲಮನ್ನಾದ ರೂಪುರೇಷೆ ಸಿದ್ದವಾಗಿದೆ. ಮೊದಲ ಕಂತಿನಲ್ಲಿ ಎಷ್ಟು ಸಾಲ ಮನ್ನಾ ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು
Advertisement
12:52 PM, 30 May

ಕೇಂದ್ರ ಸರ್ಕಾರದ ಪಾತ್ರದ ಕುರಿತು ಈ ಸಭೆಯಲ್ಲಿ ಚರ್ಚೆ ಮಾಡುವುದು ಬೇಡ. ಸಾಲ ಮನ್ನಾ ಬಗ್ಗೆ ಅವರು ಈಗಾಗಲೇ ತಮ್ಮ ನಿಲುವು ಹೇಳಿದ್ದಾರೆ. ರಾಜ್ಯ ಸರ್ಕಾರದ ಕೈಯಿಂದ ಆಗಬಹುದಾದದ ಕಾರ್ಯಕ್ರಮಕ್ಕೆ ನಿಮ್ಮ ಸಲಹೆ ಕೊಡಿ : ಎಚ್.ಡಿ.ಕುಮಾರಸ್ವಾಮಿ
12:49 PM, 30 May

ಸಾಲಮನ್ನಾ ಬಗ್ಗೆ ಚರ್ಚೆ ನಡೆಸುವಾಗ ಗದ್ದಲ ಉಂಟಾಯಿತು. ಇದರಿಂದ ಅಸಮಾಧಾನಗೊಂಡ ಎಚ್.ಡಿ.ಕುಮಾರಸ್ವಾಮಿ, ‘ಗದ್ದಲ ಮಾಡುವುದಾದದರೆ ಕಬ್ಬನ್ ಪಾರ್ಕ್‌ಗೆ ಹೋಗಿ. ಇಲ್ಲಿ ಶಾಂತಿಯುತವಾಗಿ ಚರ್ಚೆ ನಡೆಸಿ, ನಿಮ್ಮ ಸಲಹೆ ಕೊಡಿ' ಎಂದು ಹೇಳಿದರು.
12:38 PM, 30 May

ಸಲಹೆ 6 : ರೈತರ ಆತ್ಮಹತ್ಯೆಯನ್ನು ತಡೆಯಬೇಕು. ಬೆಳೆಗಳಿಗೆ ಬೆಲೆ ಕುಸಿದಾಗ ರೈತರ ನೆರವಿಗೆ ಸರ್ಕಾರ ಬರಬೇಕು ಅಂತಹ ನೀತಿ ಜಾರಿಗೆ ತರಬೇಕು
12:38 PM, 30 May

ಸಲಹೆ 5 : ರೈತರು ಬೆಳೆದ ಬೆಳೆಗಳನ್ನು ಸರ್ಕಾರ ಖರೀದಿ ಮಾಡಬೇಕು. ಸಾಲ ಆಗದಂತೆ ತಡೆಯಲು ಹೊಸ ನೀತಿಯನ್ನು ರೂಪಿಸಬೇಕು
12:37 PM, 30 May

ಸಲಹೆ 4 : ಸಂಪೂರ್ಣವಾಗಿ ರೈತರ ಸಾಲವನ್ನು ಒಂದು ಹಂತದಲ್ಲಿಯೇ ಮನ್ನಾ ಮಾಡಿ. ಹಂತ-ಹಂತವಾಗಿ ಸಾಲ ಮನ್ನಾ ಮಾಡುವ ಪ್ರಸ್ತಾವನೆ ಬೇಡ
12:37 PM, 30 May

ಸಲಹೆ 3 : ಸಾಲಮನ್ನಾ ಕುರಿತು ಸಂಸತ್‌ನಲ್ಲಿ ಖಾಸಗಿ ಬಿಲ್ ಮಂಡನೆ ಮಾಡಲಿ. ಕೇಂದ್ರಕ್ಕೆ ರೈತರ ನಿಯೋಗ ತೆಗೆದುಕೊಂಡು ಹೋಗಿ ಈ ಬಗ್ಗೆ ಒತ್ತಡ ಹಾಕೋಣ
12:37 PM, 30 May

ಸಲಹೆ 2 : ಚಿನ್ನವನ್ನು ಅಡವಿಟ್ಟು ಸಾಲ ಮಾಡಿದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಿ. ಒಂದೇ ಬಾರಿಗೆ ರೈತರನ್ನು ಋಣ ಮುಕ್ತರನ್ನಾಗಿ ಮಾಡಿ
12:37 PM, 30 May

ರೈತರು ನೀಡಿದ ಸಲಹೆಗಳು ಸಲಹೆ 1 : ರಾಜ್ಯದ ಬಿಜೆಪಿ ನಾಯಕರು ಸಾಲಮನ್ನಾ ಮಾಡಲು ಸಹಕಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ
12:30 PM, 30 May

ಕೇಂದ್ರ ಸರ್ಕಾರ ಸಾಲ ಮನ್ನಾ ಬಗ್ಗೆ ತನ್ನ ನಿಲುವನ್ನು ಹೇಳಿದೆ. ಕೇಂದ್ರ ಸರ್ಕಾರದ ಮುಂದೆ ನಿಯೋಗ ತೆಗೆದುಕೊಂಡು ಹೋಗುವುದಿರಿಂದ ಯಾವುದೇ ಉಪಯೋಗವಿಲ್ಲ : ಎಚ್.ಡಿ.ಕುಮಾರಸ್ವಾಮಿ
12:28 PM, 30 May

ತಿಂಗಳಿನಲ್ಲಿ ಒಂದು ದಿನ ರೈತರ ಜೊತೆ ಸಭೆ ನಡೆಸುತ್ತೇನೆ ಎಂದು ರೈತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
11:44 AM, 30 May

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಸಭೆಯನ್ನು ಆರಂಭಿಸಲಾಗಿದೆ. ಪ್ರತಿ ಜಿಲ್ಲೆಯಿಂದ ರೈತರು ಸಭೆಗೆ ಆಗಮಿಸಿದ್ದಾರೆ
11:40 AM, 30 May

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 16 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ರೈತರ ಬಗ್ಗೆ ವರದಿ ತರಿಸಿಕೊಂಡಿದ್ದೇನೆ.
11:37 AM, 30 May

ಸಾಲಮನ್ನಾ ಬಗ್ಗೆ ನಾನು ಒಂದು ರೂಪುರೇಷೆ ತಯಾರಿಸಿದ್ದೇನೆ. ಇಂದು ನಿಮ್ಮಿಂದ ಬರುವ ಸಲಹೆ ಸ್ವೀಕರಿಸುತ್ತೇನೆ. ನಂತರ ಸರ್ಕಾರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.
11:36 AM, 30 May

ನಾವು ನೀಡಿದ ಭರವಸೆಯನ್ನು ನಾನು ಪೂರೈಸುತ್ತೇನೆ ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಕುಮಾರಸ್ವಾಮಿ ಹೇಳಿದರು
11:35 AM, 30 May

ಹಣಕಾಸು ಇಲಾಖೆ ಅಧಿಕಾರಿಗಳು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಜೊತೆ ಸಾಲಮನ್ನಾ ಕುರಿತು ಚರ್ಚೆ ನಡೆಸಿದ್ದೇನೆ
11:34 AM, 30 May

ಸಭೆಯನ್ನು ಉದ್ದೇಶಿಸಿ ಪ್ರಸ್ತಾವಿಕವಾಗಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ
11:33 AM, 30 May

ಇಂದಿನ ಸಭೆಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಸಭೆಗೆ ಗೈರು ಹಾಜರಾಗಿದ್ದೀರಿ ವಿಧಾನಸಭೆಯ ಉಪ ನಾಯಕ ಗೋವಿಂದ ಕಾರಜೋಳ ಅವರು ಸಭೆಗೆ ಆಗಮಿಸಿದ್ದಾರೆ.

English summary
Karnataka Chief Minister H.D.Kumaraswamy convened an all-party meeting on May 30, 2018 regarding farmer loan waiver. Farmers organization members also present at the meeting held in Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X