• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ಸ್ನೇಹಿ : ಸೋಲಾರ್ ಕೀಟನಾಶಕ ಯಂತ್ರ

|

ಬೆಂಗಳೂರು, ಜನವರಿ 02 : ಇತ್ತೀಚಿನ ಕೆಲವು ವರ್ಷಗಳಿಂದ ಮಳೆಯು ನಿರಂತರವಾಗಿ ಕಡಿಮೆಯಾಗುತ್ತಿದ್ದು ಬರಗಾಲವು ಸೃಷ್ಟಿಯಾಗುತ್ತಿದೆ. ರೈತರೆಲ್ಲರು ಮಳೆ, ಅಂತರ್ಜಲ ಕುಸಿತ ಮತ್ತು ನೀರಿನ ಕೊರತೆಯಿಂದ ಬೆಳೆಯಲು ಪ್ರಯತ್ನಿಸಿದ ಬೆಳೆಗಳು ಸರಿಯಾಗಿ ಫಲ ಕೊಡುತ್ತಿಲ್ಲ.

ಭೂಮಿ ಹದ ಮಾಡಲು, ಗೊಬ್ಬರ, ಬೀಜ, ಕೀಟನಾಶಕ ಕೊಂಡುಕೊಳ್ಳುವ ಸಲುವಾಗಿ ಹಣ ಖರ್ಚು ಮಾಡಿ ನಿರಂತರವಾಗಿ ರೈತರೆಲ್ಲರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹೇಗೋ ಇದ್ದಷ್ಟು, ಸಿಕ್ಕಷ್ಟು ನೀರನ್ನು ಹನಿ ನೀರಾವರಿಯಂತಹ ವ್ಯವಸ್ಥೆಗಳ ಮೂಲಕ ಬಳಕೆ ಮಾಡಲಾಗುತ್ತಿದೆ.

ಹಲವಾರು ಸಮಸ್ಯೆಗಳ ನಡುವೆಯೇ ರೈತರು ಬೆಳೆ ಬೆಳೆಯಲು ಪ್ರಯತ್ನಿಸಿದರೆ ಬೆಳೆಗಳಿಗೆ ಅನೇಕ ಶತ್ರು ಕೀಟಗಳು ಹುಟ್ಟಿಕೊಂಡು ಬೆಳೆಗಳೆಲ್ಲವೂ ಹೆಚ್ಚಾಗಿ ರೋಗಭಾದೆಗೆ ತುತ್ತಾಗಿ ನಾಶವಾಗುತ್ತಿವೆ. ಇತ್ತೀಚೆಗಂತೂ ಬೆಳೆಗಳಿಗೆ ಹಾನಿಮಾಡಲೆಂದೇ ದಿನಕ್ಕೊಂದರಂತೆ ಕೀಟಗಳು ಹುಟ್ಟಿಕೊಳ್ಳುತ್ತಿರುವುದು ಕೃಷಿ ವಿಜ್ಞಾನಿಗಳಿಗೂ ಸವಾಲಾಗಿದೆ.

ಕೆಲವು ರೋಗಗಳ ಕೀಟಗಳುನ್ನು ನಾಶಪಡಿಸಲು ಸರಿಯಾಗಿ ಕೀಟನಾಶಕಗಳು ಸಿಗದೇ, ಒಂದುವೇಳೆ ಸಿಕ್ಕರೂ ತುಂಬಾ ಹೆಚ್ಚು ಬೆಲೆಗೆ ಸಿಗುವುದರಿಂದ ರೈತರೆಲ್ಲರು ಕೀಟನಾಶಕದ ಸಲುವಾಗಿ ತುಂಬಾ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.....

ವಿಷಪೂರಿತ ಆಹಾರ

ವಿಷಪೂರಿತ ಆಹಾರ

ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಕೃಷಿ ಭೂಮಿಯು ಸತ್ವವನ್ನು ಕಳೆದುಕೊಂಡು ಕೃಷಿ ಭೂಮಿಯ ಮಣ್ಣು ಮಾಲಿನವಾಗಿ ಕೃಷಿಮಾಡಲು ಯೋಗ್ಯವಲ್ಲದ ಭೂಮಿಯಾಗಿ ಮಾರ್ಪಾಡಾಗುತ್ತಿದೆ. ಮತ್ತು ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪರಣೆ ಮಾಡುವುದರಿಂದ ಆಹಾರವು ಸಹ ವಿಷವಾಗುತ್ತಿದ್ದು ನಾವೆಲ್ಲರೂ ವಿಷಪೂರಿತ ಆಹಾರವನ್ನು ಸೇವಿಸುವ ಸ್ಥಿತಿ ಎದುರಾಗಿದೆ.

ಪರಿಸರ ಸ್ನೇಹಿ ಪದ್ಧತಿ

ಪರಿಸರ ಸ್ನೇಹಿ ಪದ್ಧತಿ

ರೈತರಿಗೆ ಖುಷಿಯ ವಿಚಾರವೇನೆಂದರೆ ಮಾದರಿ ರೈತರಾದ ಎಂ. ಜಿ. ಕರಿಬಸಪ್ಪ ಅವರು ಬೆಳೆಗಳಿಗೆ ಮಾರಕವಾದಂತಹ ಕೀಟಗಳನ್ನು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡದೆ ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಸೋಲಾರ್ ಕೀಟನಾಶಕ ಯಂತ್ರ [SOLAR INSECTS TRAP] ಸಂಶೋಧನೆ ಮಾಡಿದ್ದಾರೆ.

ಪ್ರಯೋಗವು ಯಶಸ್ವಿಯಾಗಿದೆ

ಪ್ರಯೋಗವು ಯಶಸ್ವಿಯಾಗಿದೆ

ಸೋಲಾರ್ ಕೀಟನಾಶಕ ಯಂತ್ರಗಳನ್ನು ಅನೇಕ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕೃಷಿ ವಿಜ್ಞಾನಿಗಳು ಒಪ್ಪಿದ್ದಾರೆ. ಈ ಯಂತ್ರದಿಂದಾಗಿ ರಾಸಾಯನಿಕ ಔಷಧಿ ಖರ್ಚು ಉಳಿಯುವುದು. ರೈತನಿಗೆ, ರೈತನಿಂದಲೇ ನೇರವಾಗಿ ಎಲ್ಲಾ ರೈತರಿಗೆ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರೈತರು ಯಂತ್ರವನ್ನು ಅಳವಡಿಸಿಕೊಂಡು ಖರ್ಚನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಸಾವಯವ ಬೆಳೆಗಳನ್ನು ಬೆಳೆದು ವಿಷಮುಕ್ತ ಆಹಾರವನ್ನು ಸೇವಿಸಲು ಕೈಜೋಡಿಸುತ್ತಿದ್ದಾರೆ.

ಯಂತ್ರ ಹೇಗೆ ಕೆಲಸ ಮಾಡುತ್ತದೆ?

ಯಂತ್ರ ಹೇಗೆ ಕೆಲಸ ಮಾಡುತ್ತದೆ?

ಈ ಯಂತ್ರಗಳಲ್ಲಿ ಕೀಟಗಳನ್ನು ಆಕರ್ಷಿಸುವಂತಹ ವಿಶೇಷ ತಂತ್ರಜ್ಞಾನವನ್ನು ಒಳಗೊಂಡಂತಹ ಬೆಳಕು(ಬಲ್ಬ್) ನ್ನು ಇದೆ. ಬಲ್ಪಿನ ಬೆಳಕು ಪ್ರತಿದಿನ ಸಂಜೆ ಸಮಯದಲ್ಲಿ ಕೀಟಗಳು ಬೆಳೆಗಳನ್ನು ನಾಶಪಡಿಸುವ/ ಸಕ್ರಿಯವಾಗಿ ಕ್ರಿಯಾಶೀಲವಾಗುವ ಸಮಯದಲ್ಲಿ ವಿಶೇಷ ಕೀಟಗಳನ್ನು ಆಕರ್ಷಿಸುವ ಬೆಳಕು ಸ್ವಯಂಚಾಲಿತವಾಗಿ ಪ್ರಾರಂಭಗೊಂಡು, ರಾತ್ರಿ ಸಮಯದಲ್ಲಿ ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಸಂಜೆ ಸುಮಾರು 7 ರಿಂದ ರಾತ್ರಿ 10ರ ತನಕ ಅದು ಚಾಲನೆಯಲ್ಲಿರುತ್ತದೆ.

ಯಂತ್ರದ ಕೆಲಸ ಮಾಡುವ ವಿಸ್ತೀರ್ಣ

ಯಂತ್ರದ ಕೆಲಸ ಮಾಡುವ ವಿಸ್ತೀರ್ಣ

ಸೋಲಾರ್ ಕೀಟನಾಶಕ ಯಂತ್ರದ ಬೆಳಕು ಕೀಟಗಳನ್ನು ಆಕರ್ಷಿಸುವ ವಿಸ್ತೀರ್ಣ ಬೆಳೆಗಳ ಎತ್ತರಕ್ಕನುಗುಣವಾಗಿರುತ್ತದೆ. 1.5 ಎಕರೆ ಇಂದ 2.00 ಏಕರೆವರಿಗಿನ ವಿಸ್ತೀರ್ಣದಲ್ಲಿರುವ ಕೀಟಗಳನ್ನು ಆಕರ್ಷಿಸಲಿದೆ.

ಹಣ್ಣು, ತರಕಾರಿ, ತೋಟಗಾರಿಕೆ, ಅರಣ್ಯ ಬೆಳೆಗಳಂತಹ ಎಲ್ಲಾ ಬೆಳೆಗಳಿಗೂ ಇದನ್ನು ಬಳಸಬಹುದು.

ಸೈನಿಕ ಹುಳು, ರಸ ಹೀರುವ ಕೀಟ, ಕಾಯಿ ಕೊರಕ, ಕಾಂಡ ಕೊರಕ, ಬೇರು ಹುಳ, ಥ್ರಿಪ್ಸ್, ಎಲೆ ತಿನ್ನುವ ಕೀಟ, ಧ್ವಮರಿ, ಲೀಫ್ ಮೈನರ್ಸ್, ಮಥ್, ಲಾರ್ವ, ಮುಂತಾದ ಪ್ರತಿಯೊಂದು ಹಾರಾಡುವ ಕೀಟಗಳು ಈ ಯಂತ್ರದಿಂದ ನಾಶವಾಗಲಿದೆ.

ಯಂತ್ರದ ಬಾಳಿಕೆ ಹೇಗೆ?

ಯಂತ್ರದ ಬಾಳಿಕೆ ಹೇಗೆ?

ಸೋಲಾರ್ ಕೀಟನಾಶಕ ಯಂತ್ರ 3 ರಿಂದ 5 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಯಂತ್ರ ಬಳಸುವುದರಿಂದ ಕೃಷಿ ಭೂಮಿಯ ಮಣ್ಣು ಮಲಿನತೆ, ಹಾಳಾಗುವುದು ತಡೆಗಟ್ಟಬಹುದು. ವಿಷ ಆಹಾರದ ಸೇವನೆ ತಪ್ಪುವುದು, ರೈತರಿಗೆ 80% ರಿಂದ 95% ವರಿಗೂ ರಾಸಾಯನಿಕ ಕೀಟನಾಶಕಗಳ ಖರ್ಚು ಉಳಿಯುವುದು. ರಾಜ್ಯದಲ್ಲಿ ಸೋಲಾರ್ ಕೀಟನಾಶಕ ಯಂತ್ರದ ಬೆಲೆ 4875 ರೂ. ಆಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Solar Light Insect Killer farmer friendly. By this insect killer farmer can reduce the use of chemical product.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more