ಸಾಯುವಾಗ ಡಿಜಿಪಿ ಪುತ್ರನ ಹೆಸರು ಹೇಳಿದ ಮಾಗಡಿ ರೈತ

Posted By:
Subscribe to Oneindia Kannada

ರಾಮನಗರ, ಆಗಸ್ಟ್ 22 : 'ನನ್ನ ಸಾವಿಗೆ ಡಿಜಿಪಿ ಓಂಪ್ರಕಾಶ್ ಮಗ ಕಾರ್ತಿಕೇಶ್ ಮತ್ತು ಕೆಲ ಅಧಿಕಾರಿಗಳು ಕಾರಣ. ನಾನು ಸತ್ತರೆ ಮಾತ್ರ ನನ್ನ ಮಕ್ಕಳಿಗೆ ನ್ಯಾಯ ಸಿಗುತ್ತದೆ' ಎಂದು ಹೇಳಿ ಮಾಗಡಿಯ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಾಗಡಿ ಮೂಲದ ಶಿವಣ್ಣ ಎಂಬ ರೈತ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಆದರೆ, ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.[ಬಾಳೆ ಬೆಲೆ ಕುಸಿತ, ರಸ್ತೆಗೆ ಬಿಸಾಡಿದ ಮಾಗಡಿ ರೈತರು]

Farmer blames DGP Omprakash son for his suicide

ಏನಿದು ವಿವಾದ? : ಶಿವಣ್ಣ ಕುಟುಂಬದಲ್ಲಿ ಆಸ್ತಿ ಕಲಹ ಉಂಟಾಗಿತ್ತು. ಈ ವೇಳೆ ನ್ಯಾಯಾಯಕ್ಕಾಗಿ ಅವರು ಪೊಲೀಸರ ಮೊರೆ ಹೋಗಿದ್ದರು. ಆದರೆ, ಶಿವಣ್ಣ ಸಹೋದರರಾದ ಲೋಕೇಶ್ ಹಾಗೂ ನಾರಾಯಣಪ್ಪ ಪರವಾಗಿ ಡಿಜಿಪಿ ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ಲಾಬಿ ನಡೆಸಿ ಶಿವಣ್ಣನಿಗೆ ಆಸ್ತಿ ದೊರೆಯದಂತೆ ಮಾಡಿದ್ದಾರೆ ಎಂಬುದು ಆರೋಪ. [ನೇಪಾಳದ ಸಂತ್ರಸ್ತರಿಗೆ ಮಾಗಡಿ ರೈತ ತೋರಿದ ಮಾನವೀಯತೆ]

ಇದೇ ಜಮೀನಿನಲ್ಲಿ ಕಾರ್ತಿಕೇಶ್ ಜಲ್ಲಿ ಕ್ರಶರ್ ನಡೆಸುತ್ತಿದ್ದರು ಹೀಗಾಗಿ ಕಾರ್ತಿಕೇಶ್ ನನಗೆ ಆಸ್ತಿ ದೊರೆಯದಂತೆ ಮಾಡಿದ್ದಾರೆ ಎಂದು ಶಿವಣ್ಣ ಆರೋಪಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ, ಗೃಹ ಸಚಿವರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದರಿಂದ ಮನನೊಂದ ಶಿವಣ್ಣ ಅವರು ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a selfie video Magadi based farmer alleged that DGP Omprakash's son Karthikesh and two othres responsible for his suicide.
Please Wait while comments are loading...