ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬ ರಾಜಕಾರಣ ಬರೀ ದೇವೇಗೌಡ್ರ ಸ್ವತ್ತಾ, ಇವರದ್ದೆಲ್ಲಾ ಇನ್ನೇನು ಮತ್ತೆ?

|
Google Oneindia Kannada News

Recommended Video

Lok Sabha Elections 2019 : ಕುಟುಂಬ ರಾಜಕಾರಣ ಬರೀ ದೇವೇಗೌಡ್ರ ಸ್ವತ್ತಾ, ಇವರದ್ದೆಲ್ಲಾ ಇನ್ನೇನು ಮತ್ತೆ?

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತೆ ಕುಟುಂಬ ರಾಜಕಾರಣದ ಸುದ್ದಿ ಮುನ್ನಲೆಗೆ ಬಂದಿದೆ. ದೇವೇಗೌಡರ ಇಬ್ಬರು ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ, ಫ್ಯಾಮಿಲಿ ಪಾಲಿಟಿಕ್ಸ್ ಬಹು ಚರ್ಚೆಯ ವಿಷಯವಾಗಿದೆ.

ಹಾಸನ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ದೇವೇಗೌಡರು ತುಂಬಿದ ಸಾರ್ವಜನಿಕ ಸಭೆಯಲ್ಲಿ ಕುಟುಂಬ ಸಮೇತ ಕಣ್ಣೀರಿಟ್ಟಿದ್ದಾರೆ. ಯಾಕೆ ನನ್ನ ಮೇಲೆ ಇಷ್ಟೊಂದು ದ್ವೇಷ ನಿಮಗೆ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.

ಕಣ್ಣೀರ 'ಹೊಳೆ' ಹರಿಸಿ, ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದ ದೇವೇಗೌಡ್ರುಕಣ್ಣೀರ 'ಹೊಳೆ' ಹರಿಸಿ, ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದ ದೇವೇಗೌಡ್ರು

ಸದಾನಂದ ಗೌಡರ ನಗು, ದೇವೇಗೌಡರ ಅಳು, ಎರಡೂ ದೊಡ್ಡ ವಿಷಯವಲ್ಲ ಬಿಡಿ ಎನ್ನುವುದು ಜನಸಾಮಾನ್ಯರಲ್ಲಿ ಕೇಳಿಬರುತ್ತಿರುವ ಮಾತಾದಾರೂ, ದೇವೇಗೌಡ್ರು, ರೇವಣ್ಣ, ಪ್ರಜ್ವಲ್ ಆದಿಯಾಗಿ ಎಲ್ಲರೂ ಕಣ್ಣೀರಿಟ್ಟಿದ್ದು, ಭಾರೀ ಟ್ರೋಲ್ ಆಗುತ್ತಿದೆ.

ಕುಟುಂಬ ರಾಜಕಾರಣ ಎನ್ನುವುದು ಬರೀ ದೇವೇಗೌಡರ ಕುಟುಂಬದ ಸ್ವತ್ತಾ? ಕರ್ನಾಟಕದ ಇತರ ಮುಖಂಡರ ಕುಟುಂಬದ ಸದಸ್ಯರು ಒಬ್ಬರಿಗಿಂತ ಹೆಚ್ಚು ರಾಜಕೀಯದಲ್ಲಿ ಇಲ್ಲವೇ ಎನ್ನುವ ಪ್ರಶ್ನೆಯೂ ಎದುರಾಗಿದೆ. ಆ ರೀತಿಯ ಕುಟುಂಬ ರಾಜಕಾರಣ, ಸಾಕಷ್ಟು ನಮ್ಮ ರಾಜಕಾರಣಿಗಳೂ ಮಾಡುತ್ತಿದ್ದಾರೆ. ಅವರೆಲ್ಲಾ ಯಾರು, ಕೆಲವೊಂದು ಪ್ರಮುಖ ಲಿಸ್ಟ್ , ಕೆಳಗೆ ಮುಂದುವರಿಸಲಾಗಿದೆ..

ಕುಟುಂಬ ರಾಜಕಾರಣ ಎಂದಾಗ ಗೌಡ್ರ ಹೆಸರು ಮೊದಲಿಗೆ ಬರುವುದು ಇದಕ್ಕಾಗಿಯೇ

ಕುಟುಂಬ ರಾಜಕಾರಣ ಎಂದಾಗ ಗೌಡ್ರ ಹೆಸರು ಮೊದಲಿಗೆ ಬರುವುದು ಇದಕ್ಕಾಗಿಯೇ

ಎಚ್ ಡಿ ದೇವೇಗೌಡ - ಮಾಜಿ ಪ್ರಧಾನಿ, ಹಾಲೀ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸದಸ್ಯ. ಈ ಬಾರಿಯ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದ್ದಾರೆ, ಕ್ಷೇತ್ರ ಅಂತಿಮವಾಗಿಲ್ಲ.

ಎಚ್ ಡಿ ರೇವಣ್ಣ - ಲೋಕೋಪಯೋಗಿ ಸಚಿವ, ಹಾಲೀ ಹೊಳೇನರಸೀಪುರ ಶಾಸಕ

ಎಚ್ ಡಿ ಕುಮಾರಸ್ವಾಮಿ - ಮುಖ್ಯಮಂತ್ರಿಗಳು, ಹಾಲೀ ಚನ್ನಪಟ್ಟಣ ಶಾಸಕ

ಅನಿತಾ ಕುಮಾರಸ್ವಾಮಿ - ಹಾಲೀ ರಾಮನಗರ ಶಾಸಕಿ

ಡಿ ಸಿ ತಮ್ಮಣ್ಣ - ಸಾರಿಗೆ ಸಚಿವ, ಹಾಲೀ ಮದ್ದೂರು ಶಾಸಕ (ಗೌಡ್ರ ಬೀಗರು)

ಪ್ರಜ್ವಲ್ ರೇವಣ್ಣ - ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ

ನಿಖಿಲ್ ಕುಮಾರಸ್ವಾಮಿ - ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ

ಸಿ ಎನ್ ಬಾಲಕೃಷ್ಣ - ಹಾಲೀ ಶ್ರವಣಬೆಳಗೊಳ ಶಾಸಕ (ಗೌಡ್ರ ಹತ್ತಿರದ ಸಂಬಂಧಿ)

ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು?ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು?

ಬಿಜೆಪಿ ರಾಜ್ಯಾಧ್ಯಕ್ಷರ ಮನೆಯ ಕುಟುಂಬ

ಬಿಜೆಪಿ ರಾಜ್ಯಾಧ್ಯಕ್ಷರ ಮನೆಯ ಕುಟುಂಬ

ಬಿ ಎಸ್ ಯಡಿಯೂರಪ್ಪ - ಮಾಜಿ ಮುಖ್ಯಮಂತ್ರಿಗಳು, ಹಾಲೀ ಶಿಕಾರಿಪುರ ಶಾಸಕ

ಬಿ ವೈ ರಾಘವೇಂದ್ರ - ಹಾಲೀ ಶಿವಮೊಗ್ಗ ಸಂಸದ

ಈ ಬಾರಿಯ ಚುನಾವಣೆಯಲ್ಲೂ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ

ಮೈಸೂರಿನ ಟಗರು ಎಂದೇ ಪ್ರಖ್ಯಾತಿ ಪಡೆದಿರುವ ಸಿದ್ದರಾಮಯ್ಯ

ಮೈಸೂರಿನ ಟಗರು ಎಂದೇ ಪ್ರಖ್ಯಾತಿ ಪಡೆದಿರುವ ಸಿದ್ದರಾಮಯ್ಯ

ಸಿದ್ದರಾಮಯ್ಯ - ಮಾಜಿ ಮುಖ್ಯಮಂತ್ರಿಗಳು, ಹಾಲೀ ಬಾದಾಮಿ ಶಾಸಕ

ಡಾ. ಯತೀಂದ್ರ ಸಿದ್ದರಾಮಯ್ಯ - ಹಾಲೀ ವರುಣಾ ಶಾಸಕ

ಕಳೆದ ಚುನಾವಣೆಯಲ್ಲಿ ಯತೀಂದ್ರ ಅವರನ್ನು ಕಣಕ್ಕಿಳಿಸಿ ಮಗನಿಗೆ ಜಯ ತಂದುಕೊಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು.

2014 ಲೋಕಸಭಾ ಚುನಾವಣೆ: ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ರಹಸ್ಯವೇ ಬೇರೆ ಇತ್ತು2014 ಲೋಕಸಭಾ ಚುನಾವಣೆ: ಕುಮಾರಸ್ವಾಮಿ ಸ್ಪರ್ಧೆಯ ಹಿಂದಿನ ರಹಸ್ಯವೇ ಬೇರೆ ಇತ್ತು

ಹಾವೇರಿಯ ಉದಾಸಿ ಕುಟುಂಬದ ಫ್ಯಾಮಿಲಿ ಪಾಲಿಟಿಕ್ಸ್

ಹಾವೇರಿಯ ಉದಾಸಿ ಕುಟುಂಬದ ಫ್ಯಾಮಿಲಿ ಪಾಲಿಟಿಕ್ಸ್

ಸಿ ಎಂ ಉದಾಸಿ - ಹಾಲೀ ಹಾನಗಲ್ ಶಾಸಕ

ಶಿವಕುಮಾರ್ ಉದಾಸಿ - ಹಾಲೀ ಹಾವೇರಿ ಸಂಸದ

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಕುಮಾರ್ 87,571 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಶಿವಕುಮಾರ್ ಬಹುತೇಕ ಬಿಜೆಪಿಯ ಅಭ್ಯರ್ಥಿ.

ಉತ್ತರ ಕರ್ನಾಟಕದ ಪ್ರಭಾಗಿ ಲಿಂಗಾಯತ ಕುಟುಂಬ

ಉತ್ತರ ಕರ್ನಾಟಕದ ಪ್ರಭಾಗಿ ಲಿಂಗಾಯತ ಕುಟುಂಬ

ಶಾಮನೂರು ಶಿವಶಂಕರಪ್ಪ - ಹಾಲೀ ದಾವಣಗೆರೆ ಉತ್ತರ ಶಾಸಕರು

ಎಸ್ ಎಸ್ ಮಲ್ಲಿಕಾರ್ಜುನ್ - ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದ ಪರಾಜಿತ ಅಭ್ಯರ್ಥಿ

ಜಿ ಎಂ ಸಿದ್ದೇಶ್ವರ - ಹಾಲೀ ದಾವಣಗೆರೆ ಸಂಸದ

ಈ ಬಾರಿಯ ಚುನಾವಣೆಯಲ್ಲಿ ದಾವಣಗೆರೆಯಿಂದ ಜಿ ಎಂ ಸಿದ್ದೇಶ್ ಬಹುತೇಕ ಸ್ಪರ್ಧಿಸಲಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ್, ಹೆಸರು ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಳಿಬರುತ್ತಿದೆ. ಹಾಗಾದರೆ, ಬಾವ-ಮೈದುನರ ನಡುವೆ ಸ್ಪರ್ಧೆ ಏರ್ಪಡಲಿದೆ.

ಶಾಮನೂರು ಕುಟುಂಬಕ್ಕಿಲ್ಲ ದಾವಣಗೆರೆ ಟಿಕೆಟ್, 'ಕೈ' ಅಭ್ಯರ್ಥಿ ಯಾರು?ಶಾಮನೂರು ಕುಟುಂಬಕ್ಕಿಲ್ಲ ದಾವಣಗೆರೆ ಟಿಕೆಟ್, 'ಕೈ' ಅಭ್ಯರ್ಥಿ ಯಾರು?

ಹಿರಿಯ ಕಾಂಗ್ರೆಸ್ಸಿಗ, ರಾಜ್ಯದ ವರ್ಚಸ್ವೀ ನಾಯಕ

ಹಿರಿಯ ಕಾಂಗ್ರೆಸ್ಸಿಗ, ರಾಜ್ಯದ ವರ್ಚಸ್ವೀ ನಾಯಕ

ಮಲ್ಲಿಕಾರ್ಜುನ ಖರ್ಗೆ - ಹಾಲೀ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಕಲಬುರಗಿ ಸಂಸದ

ಪ್ರಿಯಾಂಕ್ ಖರ್ಗೆ - ಸಚಿವರು ಮತ್ತು ಹಾಲೀ ಚಿತ್ತಾಪುರ ಶಾಸಕ

ಈ ಬಾರಿಯ ಚುನಾವಣೆಯಲ್ಲೂ ಖರ್ಗೆ, ಕಲಬುರಗಿಯಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಮಗ ರಾಜಕೀಯದಲ್ಲಿರುವುದು ಕೆಲವರಿಗೆ ಹೊಟ್ಟೆಕಿಚ್ಚು ಎನ್ನುವ ನೋವನ್ನು ಇತ್ತೀಚೆಗೆ ಖರ್ಗೆ ತೋಡಿಕೊಂಡಿದ್ದರು.

ದಿವಂಗತ ಧರಂ ಸಿಂಗ್ ಕುಟುಂಬ

ದಿವಂಗತ ಧರಂ ಸಿಂಗ್ ಕುಟುಂಬ

ದಿವಂಗತ ಧರಂ ಸಿಂಗ್ - ಮಾಜಿ ಮುಖ್ಯಮಂತ್ರಿಗಳು, ಬೀದರ್ ಸಂಸದರೂ ಆಗಿದ್ದರು

ಅಜಯ್ ಸಿಂಗ್ - ಹಾಲೀ ಜೇವರ್ಗಿ ಶಾಸಕ

ಕಳೆದ ಲೋಕಸಭಾ ಚುನಾವಣೆಯಲ್ಲಿ ಧರಂ ಸಿಂಗ್, ಬಿಜೆಪಿಯ ಅಭ್ಯರ್ಥಿ ಭಗವಂತ ಖೂಬಾ ವಿರುದ್ದ ಸೋಲು ಅನುಭವಿಸಿದ್ದರು.

ಅಲ್ಲೂ ಇದೆ ಕುಟುಂಬ ರಾಜಕಾರಣ

ಅಲ್ಲೂ ಇದೆ ಕುಟುಂಬ ರಾಜಕಾರಣ

ಭೀಮಣ್ಣ ಖಂಡ್ರೆ - ಮಾಜಿ ಶಾಸಕರು

ಈಶ್ವರ ಖಂಡ್ರೆ - ಭಾಲ್ಕಿ ಹಾಲೀ ಕಾಂಗ್ರೆಸ್ ಶಾಸಕರು

ಬೀದರ್ ಜಿಲ್ಲೆಯ ಪ್ರಮುಖ ರಾಜಕೀಯ ಕುಟುಂಬಗಳಲ್ಲೊಂದು. ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. (ಚಿತ್ರದಲ್ಲಿ ಈಶ್ವರ್ ಖಂಡ್ರೆ)

ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?

ಕನಕಪುರದ ಬಂಡೆ ಸಹೋದರರು

ಕನಕಪುರದ ಬಂಡೆ ಸಹೋದರರು

ಡಿ ಕೆ ಶಿವಕುಮಾರ್ - ಹಾಲೀ ನೀರಾವರಿ ಸಚಿವರು, ಕನಕಪುರ ಶಾಸಕರು

ಡಿ ಕೆ ಸುರೇಶ್ - ಹಾಲೀ ಬೆಂಗಳೂರು ಗ್ರಾಮಾಂತರ ಶಾಸಕರು

ರಾಜ್ಯ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ ಡಿಕೆಶಿ ಸಹೋದರ, ಡಿ ಕೆ ಸುರೇಶ್ ಬಹುತೇಕ ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

ಸಹೋದರ ಮತ್ತು ಸಹೋದರಿ ಪಾಲಿಟಿಕ್ಸ್ ನಲ್ಲಿ

ಸಹೋದರ ಮತ್ತು ಸಹೋದರಿ ಪಾಲಿಟಿಕ್ಸ್ ನಲ್ಲಿ

ಬಿ ಶ್ರೀರಾಮುಲು - ಹಾಲೀ ಮೊಣಕಾಲ್ಮೂರು ಶಾಸಕ

ಜೆ ಶಾಂತಾ - ಬಳ್ಳಾರಿ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ (ಕಳೆದ ಉಪಚುನಾವಣೆಯಲ್ಲಿ)

ಕಳೆದ ಉಪ ಲೋಕಸಭಾ ಚುನಾವಣೆಯಲ್ಲಿ ಜೆ ಶಾಂತಾ, ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ವಿರುದ್ದ ಸೋಲು ಅನುಭವಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ, ಶಾಂತಾ, ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳಲ್ಲೊಬ್ಬ

ಕಾಂಗೆಸ್ಸಿನ ಸೋಲಿಲ್ಲದ ಸರದಾರರಲ್ಲಿ ಒಬ್ಬರು

ಕಾಂಗೆಸ್ಸಿನ ಸೋಲಿಲ್ಲದ ಸರದಾರರಲ್ಲಿ ಒಬ್ಬರು

ಕೆ ಎಚ್ ಮುನಿಯಪ್ಪ, ಹಾಲೀ ಕೋಲಾರ ಸಂಸದ. ಈ ಬಾರಿ ಕಾಂಗ್ರೆಸ್ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಡದೇ ಇದ್ದಲ್ಲಿ ಮುನಿಯಪ್ಪನವರೇ ಅಭ್ಯರ್ಥಿ

ರೂಪಾ ಶಶಿಧರ್ - ಹಾಲೀ ಕೆಜಿಎಫ್ ಶಾಸಕಿ. (ಚಿತ್ರದಲ್ಲಿ ರೂಪಾ ಶಶಿಧರ್)

ಬೆಂಗಳೂರು ದಕ್ಷಿಣದ ಸೋಲಿಲ್ಲದ ಸರದಾರ

ಬೆಂಗಳೂರು ದಕ್ಷಿಣದ ಸೋಲಿಲ್ಲದ ಸರದಾರ

ದಿ. ಅನಂತ್ ಕುಮಾರ್ - ಬೆಂಗಳೂರು ದಕ್ಷಿಣದ ಸಂಸದರಾಗಿದ್ದರು, ಜೊತೆಗೆ ಕೇಂದ್ರದ ಕ್ಯಾಬಿನೆಟ್ ಸಚಿವರೂ ಆಗಿದ್ದರು

ತೇಜಸ್ವಿನಿ ಅನಂತ್ ಕುಮಾರ್ - ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (ಅಧಿಕೃತ ಘೋಷಣೆಯೊಂದೇ ಬಾಕಿ)

ಜೆಡಿಎಸ್ ನಿಂದ ಬಿಜೆಪಿಗೆ ಸೇರಿದ ಬೊಮ್ಮಾಯಿ

ಜೆಡಿಎಸ್ ನಿಂದ ಬಿಜೆಪಿಗೆ ಸೇರಿದ ಬೊಮ್ಮಾಯಿ

ದಿ. ಎಸ್ ಆರ್ ಬೊಮ್ಮಾಯಿ - ರಾಜ್ಯ ಸಚಿವರೂ ಮತ್ತು ಶಾಸಕರೂ ಆಗಿದ್ದರು
ಬಸವರಾಜ್ ಬೊಮ್ಮಾಯಿ - ಹಾಲೀ ಶಿಗ್ಗಾಂವ್ ಕ್ಷೇತ್ರದ ಶಾಸಕ
(ಚಿತ್ರದಲ್ಲಿ: ಅಟಲ್, ಆಡ್ವಾಣಿ ಜೊತೆ ಸೀನಿಯರ್ ಬೊಮ್ಮಾಯಿ)

ಕೋಲಾರದ ಪ್ರಮುಖ ರಾಜಕೀಯ ಕುಟುಂಬ

ಕೋಲಾರದ ಪ್ರಮುಖ ರಾಜಕೀಯ ಕುಟುಂಬ

ದಿ. ಸಿ ಭೈರೇಗೌಡ - ಮಾಜೀ ಸಚಿವರೂ, ಶಾಸಕರೂ, ಅಖಿಲ ಭಾರತ ಪ್ರಗತಿಪರ ಜನತಾದಳದ ಅಧ್ಯಕ್ಷರು

ಕೃಷ್ಣ ಭೈರೇಗೌಡ - ಹಾಲೀ ಬ್ಯಾಟರಾಯನಪುರ ಶಾಸಕರು ಮತ್ತು ಕುಮಾರಸ್ವಾಮಿ ಸರಕಾರದ ಕ್ಯಾಬಿನೆಟ್ ಸಚಿವರು
(ಚಿತ್ರದಲ್ಲಿ: ಸಿ ಭೈರೇಗೌಡ)

ಗುಂಡೂರಾವ್ ಕುಟುಂಬ

ಗುಂಡೂರಾವ್ ಕುಟುಂಬ

ದಿ. ಗುಂಡೂರಾವ್ - ಮಾಜೀ ಮುಖ್ಯಮಂತ್ರಿಗಳು

ದಿನೇಶ್ ಗುಂಡೂರಾವ್ - ಹಾಲೀ ಗಾಂಧಿನಗರ ಶಾಸಕ, ಕೆಪಿಸಿಸಿ ಅಧ್ಯಕ್ಷ

ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಅವರ ಪತ್ನಿಯ ಹೆಸರು, ಬೆಂಗಳೂರು ನಗರದ ಸಂಭಾವ್ಯ ಲೋಕಸಭಾ ಕ್ಷೇತ್ರದಲ್ಲಿ ಕೇಳಿಬರುತ್ತಿತ್ತು

ರೆಡ್ಡಿ ಸಹೋದರರದ್ದು ಕೂಡಾ ಕುಟುಂಬ ರಾಜಕಾರಣ

ರೆಡ್ಡಿ ಸಹೋದರರದ್ದು ಕೂಡಾ ಕುಟುಂಬ ರಾಜಕಾರಣ

ಕರುಣಾಕರ ರೆಡ್ಡಿ - ಹಾಲೀ ಹರಪನಹಳ್ಳಿ ಶಾಸಕ
ಜನಾರ್ಧನ ರೆಡ್ಡಿ - ಮಾಜೀ ವಿಧಾನಪರಿಷತ್ ಸದಸ್ಯರು, ಮಾಜೀ ಪ್ರವಾಸೋದ್ಯಮ ಸಚಿವರು
ಸೋಮಶೇಖರ ರೆಡ್ಡಿ - ಹಾಲೀ ಬಳ್ಳಾರಿ ನಗರ ಶಾಸಕ

English summary
Family members in politics in Karnataka: It is not only in Devegowda family, BJP and Congress leaders family members also in active politics. Here is some of the list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X