ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛೇದನ ಪ್ರಕರಣ: ಕರ್ನಾಟಕಕ್ಕೆ 4ನೇ ಸ್ಥಾನ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 07: ಮದುವೆಯ ಈ ಬಂಧ, ಏಳೇಳು ಜನುಮದ ಅನುಬಂಧ ಎಂಬ ಮಾತು ಹಿಂದಿನಿಂದಲೂ ಇದೆ. ಮದುವೆ ಸ್ವರ್ಗದಲ್ಲಿಯೆ ನಿಶ್ಚಯವಾಗುತ್ತದೆ ಎಂಬ ಮಾತು ಇದೆ.

ಆದರೆ ಮದುವೆಯನ್ನು ಮರಿದುಕೊಳ್ಳುವುದರಲ್ಲಿ ನಮ್ಮ ಕರ್ನಾಟಕ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ನಂಬಲೇಬೇಕು. ಕರ್ನಾಟಕ ಕೌಟುಂಬಿಕ ನ್ಯಾಯಾಲಯ ನೀಡಿರುವ ಮಾಹಿತಿ ನಿಜಕ್ಕೂ ಕುಟುಂಬ ವ್ಯವಸ್ಥೆ ಎಲ್ಲಿಗೆ ಬಂದು ನಿಲ್ಲುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದೆ.[ಸಾಮಾಜಿಕ ಭದ್ರತೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?]

court

ವಿಚ್ಛೇದನ ಪ್ರಕರಣಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಇದೆ ಎಂದು ವರದಿ ಹೇಳಿದೆ.[ಬೆಂಗಳೂರು, ಮುಂಬೈ, ದೆಹಲಿ ಸ್ಮಾರ್ಟ್ ಸಿಟಿಗಳಲ್ಲ: ಸಮೀಕ್ಷೆ]

2014ರ ಅಂಕಿ ಅಂಶ ಹೇಳುವಂತೆ ಕರ್ನಾಟಕದಲ್ಲಿ ವಿಚ್ಛೇದನ ಪ್ರಕರಣ ಜಾಸ್ತಿಯಾಗಿದೆ. 16, 690 ಜೋಡಿಗಳು ಬೇರೆ ಬೇರೆ ಕಾರಣಗಳಿಗಾಗಿ ವಿಚ್ಛೇದನ ಪಡೆದುಕೊಂಡಿದ್ದರೆ, 2015ರ ಆರಂಭದಲ್ಲಿ 23,285 ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆಯಾಗಿವೆ. ಇದು ಕುಟುಂಬ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆ ಮತ್ತು ಆಧುನಿಕ ಸಮಾಝದ ಪರಿಣಾಮ ಎರಡನ್ನು ಹೇಳುತ್ತಿದೆ.

ಹೊಂದಾಣಿಕೆ ಕೊರತೆ:
ವಿಚ್ಛೇದನಕ್ಕೆ ಗಂಡ-ಹೆಂಡತಿ ನಡುವಿನ ಹೊಂದಾಣಿಕೆ ಕೊರತೆಯೇ ಪ್ರಮುಖ ಕಾರಣ ಎರಡನೇ ಮದುವೆ ಸಮಸ್ಯೆಯಿಂದಲೂ ವಿಚ್ಛೇದನ ಬಯಸಿದ ಪ್ರಕರಣವೂ ಸಾಕಷ್ಟಿವೆ ಎಂಬುದನ್ನು ವರದಿ ತಿಳಿಸಿದೆ.

English summary
Karnataka's family courts disposed of the fourth highest number of divorce petitions in 2014, after Kerala, Maharashtra and Madhya Pradesh. In 2014, 16,690 couples parted ways in Karnataka. At the beginning of the year 2015, 23,285 petitions were pending in the family courts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X