ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಿತ್ಯ ರಾವ್ RSS ಕಾರ್ಯಕರ್ತನೇ? ಕಲ್ಲಡ್ಕ ಪ್ರಭಾಕರ್ ಭಟ್ಟರ ಜೊತೆಗಿರುವುದು ಯಾರು?

|
Google Oneindia Kannada News

Recommended Video

ಕಲ್ಲಡ್ಕ ಪ್ರಭಾಕರ್ ಜೊತೆ ಇರೋದು ಯಾರು? | Kaladka Prabhakar | Oneindia Kannada

ಬೆಂಗಳೂರು, ಜನವರಿ 23: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆದಿತ್ಯ ರಾವ್ ಆರ್‌ಎಸ್‌ಎಸ್‌ ಕಾರ್ಯಕರ್ತನೇ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಕಲ್ಲಡ್ಕ ಪ್ರಭಾಕರ ಭಟ್‌ ಜೊತೆಗೆ ಗಣವೇಶ ಧರಿಸಿ ಯುವಕನೋರ್ವ ನಿಂತಿರುವ ಚಿತ್ರವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು 'ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆದಿತ್ಯ ರಾವ್' ಎಂಬ ಒಕ್ಕಣೆ ಹಾಕಿದ್ದಾರೆ. ಆ ಚಿತ್ರದಲ್ಲಿರುವ ಯುವಕ ಬಾಂಬರ್ ಆದಿತ್ಯ ರಾವ್ ಅಲ್ಲ.

ಬಾಂಬರ್ ಆದಿತ್ಯ ರಾವ್ ಬದಲಿಸಿದ್ದ ಉದ್ಯೋಗಗಳ ಪಟ್ಟಿ ಹನುಮಂತನ ಬಾಲಬಾಂಬರ್ ಆದಿತ್ಯ ರಾವ್ ಬದಲಿಸಿದ್ದ ಉದ್ಯೋಗಗಳ ಪಟ್ಟಿ ಹನುಮಂತನ ಬಾಲ

ಚಿತ್ರದಲ್ಲಿ ಇರುವ ಯುವಕನ ಹೆಸರು ಸಂದೀಪ್ ಲೋಬೋ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಕ್ರಿಯ ಕಾರ್ಯಕರ್ತ ಇವರಾಗಿದ್ದಾರೆ.

Fact Check: Is Bomber Aditya Rao RSS Member?

ತಮ್ಮ ಚಿತ್ರವನ್ನು ಹಂಚಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ಲೋಬೋ 'ಈ ಕೃತ್ಯವು ತಮ್ಮ ಹಾಗೂ ಸಂಘದ ಹೆಸರು ಕೆಡಿಸಲು ಕಿಡಿಗೇಡಿಗಳು ಮಾಡುತ್ತಿರುವ ಯತ್ನ' ಎಂದಿದ್ದಾರೆ.

ಯಾರಿದು ಇಂಜಿನಿಯರ್ ಆದಿತ್ಯ? ಈತನಿಗೇಕೆ ಬಾಂಬ್ ಬೆದರಿಕೆ ಕರೆ ಚಟ?ಯಾರಿದು ಇಂಜಿನಿಯರ್ ಆದಿತ್ಯ? ಈತನಿಗೇಕೆ ಬಾಂಬ್ ಬೆದರಿಕೆ ಕರೆ ಚಟ?

ಹಿಂದೂಸ್ತಾನ್ ಕ್ರಿಶ್ಚಿಯನ್ ವತಿಯಿಂದ ಸಿಎಎ ಪರವಾಗಿ ಸಮಾವೇಶ ಮಾಡಿದ್ದೇ ತಮ್ಮ ಚಿತ್ರವನ್ನು ಹೀಗೆ ಸುಳ್ಳು ಸುದ್ದಿ ಹರಡಲು ಬಳಸುತ್ತಿರುವ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಸ್ಫೋಟಕ ತಯಾರಿ ಬಗ್ಗೆ ಆದಿತ್ಯರಾವ್ ಜ್ಞಾನ ಕಂಡು ಬೆಚ್ಚಿದ ಪೊಲೀಸರು!ಸ್ಫೋಟಕ ತಯಾರಿ ಬಗ್ಗೆ ಆದಿತ್ಯರಾವ್ ಜ್ಞಾನ ಕಂಡು ಬೆಚ್ಚಿದ ಪೊಲೀಸರು!

ತಮ್ಮ ಚಿತ್ರವನ್ನು ಬಳಸಿ ಅಪಪ್ರಚಾರ ಮಾಡುತ್ತಿರವ ಬಗ್ಗೆ ಸಂದೀಪ್ ಲೋಬೋ ಅವರು ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ತಮ್ಮ ಚಿತ್ರವನ್ನು ಬಳಸಿ ಸುಳ್ಳು ಸುದ್ದಿ ಹರಡಿ ಮಾನಹಾನಿಗೆ ಯತ್ನಿಸಿದವರನ್ನು ಶಿಕ್ಷಿಸಬೇಕೆಂದು ಪೊಲೀಸರಲ್ಲಿ ವಿನಂತಿ ಮಾಡಿದ್ದಾರೆ. ಅಷ್ಟೆ ಅಲ್ಲದೆ ತಮ್ಮ ಚಿತ್ರವನ್ನು ಬಳಸಿ ಅಪಪ್ರಚಾರ ಮಾಡಿದವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಗಳನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ನೀಡಿರುವುದಾಗಿಯೂ ಹೇಳಿದ್ದಾರೆ.

ಇನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಆರ್‌ಎಸ್‌ಎಸ್ ಕಾರ್ಯಕರ್ತ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಆತ ಯಾವುದೇ ಸಂಘಟನೆಗೆ ಸೇರಿದ ವ್ಯಕ್ತಿ ಎಂಬ ಬಗ್ಗೆ ಪೊಲೀಸರ ವಿಚಾರಣೆಯಿಂದಲೂ ಗೊತ್ತಾಗಿಲ್ಲ.

English summary
An image circulating in social media in which a guy wearing RSS uniform stand with Kalladka Prabhakar Bhat has told as bomber Aditya Rao. But it's not true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X