ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಆದೇಶ?

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೊರೊನಾವೈರಸ್ ಭೀತಿಯಿಂದ ದೇಶದೆಲ್ಲೆಡೆ ಲಾಕ್‌ಡೌನ್‌ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯದಂಗಡಿ ತೆರೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಅಬಕಾರಿ ಸಚಿವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಕರ್ನಾಟಕ ಸರ್ಕಾರ ಮದ್ಯದಂಗಡಿ ಓಪನ್ ಮಾಡಲು ಅನುಮತಿ ನೀಡಿದೆ ಎಂಬ ಆದೇಶದ ಪ್ರತಿಯುಳ್ಳ ಸಂದೇಶವೊಂದು ವಾಟ್ಸಾಪ್ ನಲ್ಲಿ ಹರಿಡಾಡುತ್ತಿದೆ.

ಮದ್ಯಪಾನಿಗಳಿಂದ ಭಾರಿ ಒತ್ತಡ ಬಂದಿದ್ದರಿಂದ ದೇಶದೆಲ್ಲೆಡೆ ಲಾಕ್ ಡೌನ್ ಸಂದರ್ಭದಲ್ಲಿ ದಿನಕ್ಕೆ ಮೂರು ಗಂಟೆಗಳ ಕಾಲ ಮದ್ಯದಂಗಡಿ ಓಪನ್ ಮಾಡಲು ಆದೇಶ ನೀಡಲಾಗಿದೆ ಎಂಬ ಸಂದೇಶ ಹರಿದಾಡುತ್ತಿದೆ. ಆದರೆ, ಇದು ನಕಲಿ ಆದೇಶ, ಸುಳ್ಳು ಸುದ್ದಿ ಎಂದು ಅಬಕಾರಿ ಇಲಾಖೆಯು ಸ್ಪಷ್ಟಪಡಿಸಿದೆ..

ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ; ಅಬಕಾರಿ ಸಚಿವರು ಏನಂದ್ರು?ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ; ಅಬಕಾರಿ ಸಚಿವರು ಏನಂದ್ರು?

ನಕಲಿ ಆದೇಶದಲ್ಲಿ ಏನಿದೆ?: ಕರ್ನಾಟಕ ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯು ನೀಡಿರುವ ಆದೇಶ 212/2020 ರಂತೆ ಮಾರ್ಚ್ 29ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5: 30 ರ ತನಕ ರಾಜ್ಯವ್ಯಾಪ್ತಿ ವೈನ್ ಸ್ಟೋರ್ ಗಳು ಓಪನ್ ಇರಲಿವೆ. 5 ಮಂದಿ ಅಬಕಾರಿ ಇಲಾಖೆ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲಾಗುವುದು. ನಿಯಮ ಮೀರಿದರೆ ಶಿಕ್ಷಿಸಲಾಗುವುದು ಎಂದು ಇಲಾಖೆ ನಿರ್ದೇಶಕರು ಸಹಿ ಹಾಕಲಾಗಿದೆ.

Fact Check: Fake circular stating Liquor shops in Karnataka will be opened up does the rounds

ನಿಜಾಂಶ ಏನು?: ಇದು ಸ್ಪಷ್ಟವಾಗಿ ಯಾರೋ ದುಷ್ಕರ್ಮಿಗಳು ಮಾಡಿರುವ ಫೇಕ್ ಆದೇಶದ ಪ್ರತಿಯಾಗಿದೆ. ಆದೇಶದ ಪ್ರತಿಯ ಲೆಟರ್ ಹೆಡ್ ನಲ್ಲಿ ತೆಲಂಗಾಣ ಸರ್ಕಾರ ಎಂದು ಬರೆಯಲಾಗಿದೆ. ಆದರೆ, ಕೆಳಗಡೆ ಕರ್ನಾಟಕ ರಾಜ್ಯದಲ್ಲಿ ಆದೇಶ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಎರಡನೇಯದಾಗಿ, ಕರ್ನಾಟಕ ಸರ್ಕಾರದಿಂದ ಯಾವುದೇ ಆದೇಶ ಹೊರಬಂದಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಬಿಟ್ಟರೆ, ಮದ್ಯ ಪೂರೈಕೆಗೆ ಯಾವುದೇ ಅಧಿಸೂಚನೆ ಹೊರಡಿಸಿಲ್ಲ.

ಹಾಗೆ ನೋಡಿದರೆ, ಇದು ತೆಲಂಗಾಣ ಸರ್ಕಾರದ ಆದೇಶದ ಪ್ರತಿ ಎಂದು ನಕಲಿ ಸಂದೇಶ ಮೊದಲಿಗೆ ಹರಡಿದೆ. ಈ ಬಗ್ಗೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ವರಿ ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಇದೇ ಚಿತ್ರವನ್ನು ಬಳಸಿಕೊಂಡು ತೆಲಂಗಾಣ ಎಂಬ ಅಕ್ಷರ ಅಳಿಸಿ ಕರ್ನಾಟಕ ಎಂದು ಬರೆದು ಫೇಕ್ ಸಂದೇಶವನ್ನು ಮತ್ತೊಮ್ಮೆ ನಕಲಿ ಮಾಡಿ ವಾಟ್ಸಾಪ್ ಗಳಲ್ಲಿ ಹಂಚಲಾಗುತ್ತಿದೆ. ಈ ರೀತಿ ತೆಲಂಗಾಣ, ಕರ್ನಾಟಕ ರಾಜ್ಯಗಳಿಂದ ಯಾವುದೇ ಆದೇಶ ಹೊರ ಬಂದಿಲ್ಲ.

English summary
Fact Check: A circular has been doing the rounds claiming that wine stores would be open for three hours everyday amidst the nation-wide lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X