ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: 2ನೇ ಡೋಸ್ ಪಡೆಯುವ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೋವ್ಯಾಕ್ಸಿನ್ ಲಭ್ಯ

|
Google Oneindia Kannada News

ಬೆಂಗಳೂರು, ಮೇ 25: ರಾಜ್ಯದಲ್ಲಿ ಕೋವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ ಎಂದು ಸರ್ಕಾರ ಹೇಳಿದೆ.

ಅದರಲ್ಲೂ 45 ವರ್ಷ ಮೇಲ್ಪಟ್ಟವರು ಲಸಿಕೆಯ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆ ಸಿಗಲಿದೆ. ಕೇಂದ್ರದಿಂದ ಲಸಿಕೆ ಬರಲು ತಡವಾಗಲಿದ್ದು, ಖಾಸಗಿ ಲಸಿಕಾ ಕೇಂದ್ರಗಳು ಕೂಡ 45 ವರ್ಷ ಮೇಲ್ಪಟ್ಟವರಗೆ ಲಸಿಕೆಯನ್ನು ನೀಡಿ ಎಂದು ಹೇಳಿದೆ.

 ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವುದಿಲ್ಲ ಆದರೆ... ಏಮ್ಸ್ ನಿರ್ದೇಶಕರು ಹೇಳುವುದೇನು? ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವುದಿಲ್ಲ ಆದರೆ... ಏಮ್ಸ್ ನಿರ್ದೇಶಕರು ಹೇಳುವುದೇನು?

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದಲ್ಲಿ ತಕ್ಷಣಕ್ಕೆ ಎಲ್ಲರಿಗೂ ಕೊರೊನಾ ಲಸಿಕೆ ಸಿಗುವುದಿಲ್ಲ ಎಂಬ ವಾಸ್ತವಾಂಶದ ಮಧ್ಯೆ, ಕೇಂದ್ರ ಸರ್ಕಾರ ಕಾರ್ಖಾನೆಯಿಂದ ಲಸಿಕೆ ಲಸಿಕಾ ಕೇಂದ್ರಕ್ಕೆ ತಲುಪಲು 8ರಿಂದ 9 ದಿನಗಳು ಬೇಕಾಗುತ್ತವೆ, ಇವುಗಳ ಮಧ್ಯೆ ನಡೆಯುವ ಪ್ರಕ್ರಿಯೆಯಿಂದಾಗಿ ಲಸಿಕೆ ಸಿಗುವುದು ವಿಳಂಬವಾಗುತ್ತಿದೆ ಎಂದು ಹೇಳಿದೆ.

Facing Covaxin Shortage, Karnataka To Give 2nd Dose Only To Those Above 45 Years

ಈಗಿರುವ ಅಂಕಿಅಂಶ ಪ್ರಕಾರ, ಸೆರಂ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ತಲಾ 6 ಮತ್ತು 2 ಕೋಟಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಉತ್ಪತ್ತಿ ಮಾಡುತ್ತಿದ್ದು, ಈ ತಿಂಗಳಾಂತ್ಯಕ್ಕೆ 5 ಕೋಟಿ ಲಸಿಕೆಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಎಲ್ಲಾ ಲಸಿಕೆಗಳು ಆರಂಭದಲ್ಲಿ ಕಾನೂನುಬದ್ಧ ಸ್ಥಿರತೆ ಮತ್ತು ಸ್ಟೆರಿಲಿಟಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ, ಅದಕ್ಕೆ ವಾರದ ಸಮಯ ಹಿಡಿಯುತ್ತದೆ.

ನಂತರ ಅವುಗಳನ್ನು ವಿಭಾಗಗಳನ್ನಾಗಿ ಮಾಡಿ ಪ್ರತಿ ಭಾಗವನ್ನು ಸೆಂಟ್ರಲ್ ಡ್ರಗ್ಸ್ ಲ್ಯೊಬೊರೇಟರಿಗೆ ಟೆಸ್ಟಿಂಗ್ ಗೆ ಕಳುಹಿಸಬೇಕಾಗುತ್ತದೆ, ಅದಕ್ಕೆ 1ರಿಂದ 2 ದಿನ ಸಮಯ ಹಿಡಿಯುತ್ತದೆ. ಫ್ಯಾಕ್ಟರಿಯಲ್ಲಿ ಉತ್ಪತ್ತಿಯಾದ ಲಸಿಕೆ ಲಸಿಕಾ ಕೇಂದ್ರಕ್ಕೆ ಬಂದು ತಲುಪಲು 8ರಿಂದ 9 ದಿನ ಹಿಡಿಯುತ್ತದೆ ಎಂದು ವಿವಸಿದ್ದಾರೆ.

Recommended Video

ಭಾರತದ ಪರಿಸ್ಥಿತಿ ಹೀಗೆ ಆಗೋಕೆ ಮೋದಿ ಕಾರಣಾನ! | Oneindia Kannada

English summary
In an official order on Monday the state government said: "In order to tide over the current situation of short supply of Covaxin in the State of Karnataka, it is hereby advised that all the private health care institutions should utilize the available stock of Covaxin at their respective health facility, as the second dose for the age group 45 plus who are awaiting for the second dose of Covaxin as per the COVID vaccination schedule of Government of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X