ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ 4 ದಿನ ಗಾಳಿ ಸಹಿತ ಭಾರಿ ಮಳೆ

|
Google Oneindia Kannada News

ಬೆಂಗಳೂರು, ಆಗಸ್ಟ್ 05: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಗಾಳಿಯಿಂದ ಕೂಡಿದ ಧಾರಾಕಾರ ಮಳೆಯಾಗುತ್ತಿದೆ.

ಕಳೆದ ಎರಡು ದಿನಗಳಿಂದ ಆರಂಭವಾದ ಮಳೆ ಇನ್ನೂ ಕೂಡ ನಿಂತಿಲ್ಲ, ಸಾಕಷ್ಟು ಮರಗಳು ಧರೆಗುರುಳಿವೆ, ರಸ್ತೆಯ ಸಂಪರ್ಕ ಕಡಿತಗೊಂಡಿವೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲ.

ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆ

ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ,ಕೊಡಗು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ.

Extremely Heavy Rainfall Over Coastal Karnataka And Malnad Region

ಕೊಲ್ಲೂರು, ಆಗುಂಬೆ, ಭಾಗಮಂಡಲ, ಕಮ್ಮರಡಿ, ಸಿದ್ದಾಪುರ, ಅಂಕೋಲಾ, ಕಾರ್ಕಳ, ಸುಬ್ರಹ್ಮಣ್ಯ, ಸುಳ್ಯ, ಕುಂದಾಪುರ, ತಾಳಗುಪ್ಪ, ಶೃಂಗೇರಿಯಲ್ಲಿ ಭಾರಿ ಮಳೆ ಸುರಿದಿದೆ.
ಕಾರವಾರ, ತೀರ್ಥಹಳ್ಳಿ, ಹೊನ್ನಾವರ, ಸುಬ್ರಹ್ಮಣ್ಯ, ದಕ್ಷಿಣ ಕನ್ನಡ, ತಾಳಗುಪ್ಪದಲ್ಲಿ ಕೂಡ ಹೆಚ್ಚು ಮಳೆಯಾಗಿದೆ.

ಮಂಕಿ, ವಿರಾಜಪೇಟೆ, ಕೋಟಾ, ಉಡುಪಿ, ಹಳಿಯಾಳ, ಬನವಾಸಿ, ಮಂಗಳೂರು, ಬೆಳಗಾವಿ, ಆಲೂರು, ಹಾಸನ, ಬೇಲೂರು, ಧಾರವಾಡ, ಅಜ್ಜಂಪುರ, ಗಂಗಾವತಿ, ಕಡೂರಿನಲ್ಲಿ ಮಳೆಯಾಗಿದೆ.

ಮುಂದಿನ ನಾಲ್ಕು ದಿನ ಕರ್ನಾಟಕದ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ ಸುರಿಯಲಿದೆ.

Extremely Heavy Rainfall Over Coastal Karnataka And Malnad Region

ಶಿವಮೊಗ್ಗ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ. ಜೋರು ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಿನಲ್ಲೂ ಮಳೆ ಸುರಿಯುತ್ತಿದೆ. ನಗರದ ಹೊರವಲಯ ನೆಲಮಂಗಲ ನಗರ ಸೇರಿದಂತೆ ಸುಂಕದಕಟ್ಟೆ, ಬ್ಯಾಡರಹಳ್ಳಿ, ನಾಗರಬಾವಿ, ಬನಶಂಕರಿ, ಜಯನಗರ, ಮಲ್ಲೇಶ್ವರಂ, ಮೆಜೆಸ್ಟಿಕ್​​, ಕೆ.ಆರ್​ ಮಾರ್ಕೆಟ್​, ಕೆ.ಆರ್​​ ಪುರಂ, ಟೌನ್​​ಹಾಲ್​​ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ರಭಸವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ.

English summary
karnataka rain, rain in coastal karnataka, rain in uttara kannada, Extremely Heavy Rainfall Over Coastal Karnataka And Malnad Region For Four More days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X