ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪರೀಕ್ಷೆ ಮಾಡಿಸುವ ಮೊದಲು ಇದನ್ನು ಓದಿ!

|
Google Oneindia Kannada News

ಬೆಂಗಳೂರು, ಆ. 05: ದಿನ ಕಳೆದಂತೆ ಜನ ಸಾಮಾನ್ಯರಲ್ಲಿ ಕೊರೊನಾ ವೈರಸ್ ಕುರಿತು ಆತಂಕ ಕಡಿಮೆಯಾಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಾಗುತ್ತಲೇ ಇದೆ. ಸಣ್ಣ ನೆಗಡಿ, ಜ್ವರ, ಕೆಮ್ಮು ಇದ್ದರೂ ಕೋವಿಡ್ ಪರೀಕ್ಷೆ ಕಡ್ಡಾಯ ಎಂಬಂತಾಗಿದೆ. ಹೀಗಾಗಿ ಹೆಚ್ಚು ಪರೀಕ್ಷೆ ಮಾಡುತ್ತಿರುವುದರಿಂದ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜಗತ್ತಿನ ಶೇಕಡಾ 60ರಷ್ಟು ಜನರಿಗೆ ಕೋವಿಡ್ ಸೋಂಕು ತಗಲುತ್ತದೆ. ಆ ಬಳಿಕ ಸೋಂಕು ಕಡಮೆಯಾಗುತ್ತದೆ ಎಂದು ಈ ಹಿಂದೆಯೆ ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Recommended Video

ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

ಡಿಸೆಂಬರ್‌ನಲ್ಲಿ ಮೊದಲ ಪ್ರಕರಣ ವರದಿಯಾದ ಬಳಿಕ ಈವರೆಗೆ ಜಗತ್ತಿನಲ್ಲಿ 2,02,58,243 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಸೋಂಕಿನಿಂದ 7,39,176 ಜನರು ಮೃತಪಟ್ಟಿದ್ದು, 1,31,89,392 ಜನರು ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 2,269,052 ಮೀರಿದೆ, ನಮ್ಮ ದೇಶದಲ್ಲಿ ಸೋಂಕಿನಿಂದ 45,361 ಜನರು ಮೃತಪಟ್ಟಿದ್ದು, 1,583,489 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದೆಲ್ಲ ಅಂಕಿ-ಅಂಶ ಸತ್ಯ ಕೂಡ.

ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

ಕೊರೊನಾ ವೈರಸ್ ಎಲ್ಲರಿಗೂ ಬಂದೇ ಬರುತ್ತದೆ ಎಂದು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಕೊವಿಡ್ ಪರೀಕ್ಷೆಗೆ ಒಳಗಾಗಬೇಕಾ? ಯಾರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದರ ಕುರಿತು ತಜ್ಞರ ಅಭಿಪ್ರಾಯ ಇಲ್ಲಿದೆ.

ಕೊರೊನಾ ಮಹಾಮಾರಿ?

ಕೊರೊನಾ ಮಹಾಮಾರಿ?

ಕೊರೊನಾ ವೈರಸ್ ಅಥವಾ ಕೋವಿಡ್-19 ವೈರಸ್ ಪ್ರತಿಯೊಬ್ಬರಿಗೂ ಬರುತ್ತದೆ. ನಮ್ಮ ದೇಶದ 135 ಕೋಟಿ ಜನರಿಗೂ ಬರುತ್ತದೆ. ಅದು ಯಾರನ್ನೂ ಬಿಡುವುದಿಲ್ಲ. ಆಗ ತಾನೇ ಹುಟ್ಟಿದ ಮಗುವಿಗೂ ಕೋವಿಡ್ ಪಾಸಿಟಿವ್ ಬಂದಿದೆ. ವೈರಸ್‌ಗೆ ಜಾತಿ, ಧರ್ಮ, ಪಕ್ಷ ಲಿಂಗ ಬೇಧವಿಲ್ಲದೆ ಎಲ್ಲರಿಗೂ ಬಂದೇ ಬರುತ್ತದೆ. ವೈರಸ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಸೋಂಕು ಬಂದರೂ ಚಿಕಿತ್ಸೆ ಇಲ್ಲದೆಯೂ ಗುಣಮುಖರಾಗಬಹುದು ಎನ್ನುತ್ತಾರೆ ಕೊರೊನಾ ವೈರಸ್‌ಗೆ ಚಿಕಿತ್ಸೆ ಕೊಡುತ್ತಿರುವ ತಜ್ಞ ವೈದ್ಯರು.

ಕೋವಿಡ್ ವೈರಸ್ ಮಹಾಮಾರಿ ವೈರಸ್ ಅಲ್ಲದಿದ್ದರೂ ಜನರು ಸಾವನ್ನಪ್ಪುತ್ತಿರುವುದು ಭಯ ಹಾಗೂ ಆತಂಕದಿಂದ. ಜೊತೆಗೆ ಅನಗತ್ಯವಾಗಿ ಕೊಡುವ ಚಿಕಿತ್ಸೆಯಿಂದ. ಆಗ ತಾನೇ ಹುಟ್ಟಿದ ಮಗುವೂ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರೂ ಗುಣಮುಖವಾಗಿದೆ. ಹೀಗಿದ್ದಾಗಲೂ ಜನರು ಸಾಯುತ್ತಿರುವುದಕ್ಕೆ ಪ್ರಮುಖ ಕಾರಣ ವೈರಸ್ ಕುರಿತು ಇರುವ ಅನಗತ್ಯ ಆತಂಕಕಾರಿ ಭಯ ಎನ್ನುತ್ತಾರೆ ಬೆಂಗಳೂರಿನ ರಾಜೂಸ್ ಹೆಲ್ದಿ ಇಂಡಿಯಾದ ವೈದ್ಯ ಡಾ. ರಾಜು ಅವರು.

ನಿರ್ಧಿಷ್ಟ ಚಿಕಿತ್ಸೆ ಇಲ್ಲ

ನಿರ್ಧಿಷ್ಟ ಚಿಕಿತ್ಸೆ ಇಲ್ಲ

ಕೊರೊನಾ ವೈರಸ್ ಮಹಾಮಾರಿಯೇ ಆಗಿದ್ದರೆ ಸೋಂಕು ತಗುಲಿದ ಎಲ್ಲರೂ ಸಾವನ್ನಪ್ಪಬೇಕಿತ್ತು. ಆದರೆ ಶೇಕಡಾ 90 ರಷ್ಟು ಜನರಿಗೆ ವೈರಸ್‌ ಯಾವುದೇ ಚಿಕಿತ್ಸೆ ಇಲ್ಲದೆಯೆ ಗುಣಮುಖರಾಗುತ್ತಿದ್ದಾರೆ. ಉಳಿದವರಲ್ಲಿ ಶೇಕಡಾ 2ರಷ್ಟು ಸೋಂಕಿತರ ಆರೋಗ್ಯ ಗಂಭೀರವಾಗುತ್ತಿದೆ. ಗಂಭೀರವಾದವರು ಸಾಯುತ್ತಿಲ್ಲ, ಆರೋಗ್ಯ ಸ್ಥಿತಿ ಗಂಭೀರವಾಗಿರುವವರು ಸಾಯುವಂತೆ ನಾವು ಮಾಡುತ್ತಿದ್ದೇವೆ. ಅದು ಹೇಗೆ ಎಂದರೆ ಸೋಂಕಿತರಲ್ಲಿ ಭಯ ತುಂಬಿ, ಚಿಕಿತ್ಸೆ ಕೊಡುವುದನ್ನು ವಿಳಂಬ ಮಾಡಿ, ಸೂಕ್ತ ಚಿಕಿತ್ಸೆಯನ್ನೂ ಕೊಡದೇ ಅನಗತ್ಯ ಚಿಕಿತ್ಸೆಯನ್ನು ಕೊಟ್ಟು ಸಾವಿನ ದವಡೆಗೆ ನೂಕುತ್ತಿದ್ದೇವೆ.

ಕೊರೊನಾವೈರಸ್ ಅಂಟಿದವರೆಲ್ಲ ಸಾವಿನ ಮನೆ ಸೇರುತ್ತಾರೆಯೇ?ಕೊರೊನಾವೈರಸ್ ಅಂಟಿದವರೆಲ್ಲ ಸಾವಿನ ಮನೆ ಸೇರುತ್ತಾರೆಯೇ?

ಕೊರೊನಾ ಭಯವನ್ನು ಎಷ್ಟು ಸೋಂಕಿನ ಭಯ ಎಷ್ಟಿದೆ ಎಂದರೆ ಕೊರೊನಾ ಪಾಸಿಟಿವ್ ಎಂಬುದು ಗೊತ್ತಾದ ತಕ್ಷಣ ಹಲವು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದಕ್ಕೆ ಕಾರಣ ಮಾಧ್ಯಮಗಳಲ್ಲಿ ಬರುವ ನಕಾರಾತ್ಮಕ ವರದಿಗಳು ಎಂದು ವಿಶ್ಲೇಷಣೆ ಮಾಡಲಾಗಿದೆ.

ಸಾವಿನ ಪ್ರಮಾಣ

ಸಾವಿನ ಪ್ರಮಾಣ

ಇನ್ನು ಅಂಕಿ-ಸಂಖ್ಯೆಗಳನ್ನು ನೋಡುವುದಾದರೆ, ನಮ್ಮ ದೇಶದಲ್ಲಿ 135 ಕೋಟಿ ಜನರಿದ್ದಾರೆ. ಅದರಲ್ಲಿ ಪ್ರತಿ ವರ್ಷ ಒಂದರಿಂದ ಒಂದೂವರೆ ಕೋಟಿಯಷ್ಟು ಜನರು ಮೃತಪಡುತ್ತಾರೆ. ಕಳೆದ 7-8 ತಿಂಗಳುಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಗಮನಿಸಿದರೆ ಅದು 40 ಸಾವಿರವಿದೆ. ಇನ್ನು ಕರ್ನಾಟಕದ ಪರಿಸ್ಥಿತಿ ನೋಡುವುದಾದರೆ ವರ್ಷದಲ್ಲಿ 4-5 ಲಕ್ಷ ಜನರು ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಾರೆ. ರಾಜ್ಯದಲ್ಲಿ ಕಳೆದ 5 ತಿಂಗಳುಗಳಲ್ಲಿ ಕೊರೊನಾ ಹಸೆರಿನಲ್ಲಿ ಮೃತಪಟ್ಟವರ ಸಂಖ್ಯೆಯನ್ನು ನೋಡದರೆ ಅದು ಕೇವಲ 2800 ಜನರು ಮಾತ್ರ.

ಚಿಕಿತ್ಸೆ ಇಲ್ಲದೆ ಗುಣಮುಖರಾಗುತ್ತಿರುವುದು, ಗಂಭೀರ ಸ್ಥಿತಿ ತಲುಪಿದ್ದರೂ ಚೇತರಿಸಿಕೊಂಡಿರುವುದು, ಚಿಕ್ಕಚಿಕ್ಕಮಕ್ಕಳಿಗೆ ಕೋವಿಡ್ ಬಂದರೂ ಗುಣಮುಖರಾಗಿರುವುದು ಹಾಗೂ ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ. ಈ ಎಲ್ಲವನ್ನೂ ನೋಡಿದಾಗ ಕೊರೊನಾ ಒಂದು ಸಾಮಾನ್ಯ ವೈರಸ್ ಎಂಬುದು ಗೊತ್ತಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ಕೊರೊನಾ ಪರಿಣಾಮ

ಕೊರೊನಾ ಪರಿಣಾಮ

ಕೊರೊನಾ ವೈರಸ್ ಪರಿಣಾಮದ ಹೊರತಾಗಿಯೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಶೇಕಡಾ 4.6 ರಷ್ಟು ಮರಣ ಪ್ರಮಾಣ ಈ ವರ್ಷ ಕಡಿಮೆಯಾಗಿರುವುದು ಕಂಡು ಬಂದಿದೆ. ರಾಜ್ಯ ಸಾಂಖ್ಯಿಕ ಇಲಾಖೆಯ ಅಂಕಿ ಅಂಶದಂತೆ, 2019ರ ಜನವರಿ ತಿಂಗಳಿನಿಂದ ಜುಲೈವರೆಗೆ ಒಟ್ಟು 37,004 ಸಾವುಗಳು, ಅದೇ 2020ರ ಜನವರಿಯಿಂದ ಜುಲೈರವರೆಗೆ 35,307 ಸಾವು ಬೆಂಗಳೂರಿನಲ್ಲಿ ಸಂಭವಿಸಿದ್ದವು. ಹೀಗಾಗಿ ಕಳೆದ ವರ್ಷದ ಅವಧಿಗೆ ಹೋಲಿಕೆ ಮಾಡಿದಾಗ ಒಟ್ಟು 1,697 ಕಡಿಮೆ ಜನರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಕೊರೊನಾ ಸಮಯದಲ್ಲಿ ಅಭ್ಯಾಸ ಹೇಗಿರಬೇಕು; ಮನೋವಿಜ್ಞಾನಿ ಶ್ರೀಧರ್ ಮಾತು...ಕೊರೊನಾ ಸಮಯದಲ್ಲಿ ಅಭ್ಯಾಸ ಹೇಗಿರಬೇಕು; ಮನೋವಿಜ್ಞಾನಿ ಶ್ರೀಧರ್ ಮಾತು...

ಕೊರೊನಾ ವೈರಸ್‌ನಿಂದ ಮೃತಪಟ್ಟವರನ್ನೂ ಸೇರಿಸಿಯೂ ಒಟ್ಟಾರೆ ಸಾವಿನ ಪ್ರಮಾಣದಲ್ಲಿ ಕಡಿಮೆಯಿದೆಯೆ ಹೊರತು, ಹೆಚ್ಚಾಗಿಲ್ಲ. ಹೀಗಾಗಿ ತಜ್ಞರು ಕೊರೊನಾ ವೈರಸ್ ಪರೀಕ್ಷೆ ಬಗ್ಗೆ ಮಹತ್ವದ ಸಲಹೆ ಕೊಟ್ಟಿದ್ದಾರೆ.

ಕೊರೊನಾ ಪರೀಕ್ಷೆ

ಕೊರೊನಾ ಪರೀಕ್ಷೆ

ಕೆಮ್ಮು, ನೆಗಡಿ, ಜ್ವರ ಇದ್ದರೂ ಕೊರೊನಾ ಪರೀಕ್ಷೆ ಮಾಡಿಸುವ ಅಗತ್ಯವೇ ಇಲ್ಲ ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಯಾಕೆಂದರೆ ಚಿಕಿತ್ಸೆಯೆ ಇಲ್ಲದ ರೋಗವನ್ನು ಕಂಡು ಹಿಡಿದು ಮಾಡುವುದಾದರೂ ಏನು? ಎಂದು ತಜ್ಞ ವೈದ್ಯರೇ ಪ್ರಶ್ನೆ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‌ಗಳಿಗೆ ಕೊರೊನಾ ವೈರಸ್ ಚಿಕಿತ್ಸೆ ಕೊಡಲು ಸರ್ಕಾರ ಅನುಮತಿ ಕೊಟ್ಟ ಬಳಿಕ ಕೋವಿಡ್ ಸೋಂಕಿತರು ಹಾಗೂ ಸೋಂಕಿನಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಖಾಸಗಿ ಆಸ್ಪತ್ರೆಗಳ ಧನದಾಹ. ಹೀಗಾಗಿ ರೋಗ ಲಕ್ಷಣಗಳು ಇಲ್ಲದೆ ಇದ್ದರೆ ಯಾವುದೇ ಪರೀಕ್ಷೆ ಮಾಡಿಸಲು ಮುಂದಾಗಬೇಡಿ ಎಂದು ಸಲಹೆ ಕೊಟ್ಟಿದ್ದಾರೆ.

ನಿಮಗೆ ಬಂದು ಹೋಗಿದೆ!

ನಿಮಗೆ ಬಂದು ಹೋಗಿದೆ!

ನೀವು ಪರೀಕ್ಷೆಗೆ ಒಳಗಾದಾಗ ನೆಗಡಿ-ಕೆಮ್ಮು, ಜ್ವರ, ಮೈಕೈನೋವು, ತಲೆನೋವು ಅಥವಾ ಏನೂ ಇಲ್ಲದೆ ಇದ್ದರೂ ಕೂಡ ಪಾಸಿಟಿವ್ ಬರುತ್ತದೆ. Rapid ಟೆಸ್ಟ್‌ನಲ್ಲಿ ನಮ್ಮ ದೇಹದಲ್ಲಿ ಬೇರಾವುದೇ ವೈರಸ್ ಇದ್ದರೂ ಕೊರೊನಾ ಪಾಸಿಟಿವ್ ಎಂದು ತೋರಿಸುತ್ತದೆ. ಹೀಗಾಗಿ ಅನತ್ಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಡಿ.

ಕೋವಿಡ್ ಪಾಸಿಟಿವ್ ಬಂದರೂ ನೆಗಟಿವ್ ಬಂದರೂ ಯಾವುದೇ ನಿಖರ ಚಿಕಿತ್ಸೆ ಇಲ್ಲ. ಜೊತೆಗೆ ಶೇಕಡಾ 95ರಷ್ಟು ಜನರಿಗೆ ಯಾವುದೇ ಚಿಕಿತ್ಸೆಯೂ ಬೇಕಾಗಿಲ್ಲ. ರೋಗದ ಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ಕೊಡುವುದರಿಂದ ಕೋವಿಡ್ ಪರೀಕ್ಷೆ ಅಗತ್ಯವೇ ಇಲ್ಲ. ನೆಗಡಿ ಇದ್ದರೆ ಅದಕ್ಕೆ ಚಿಕಿತ್ಸೆ, ಜ್ವರವಿದ್ದರೆ ಸದಕ್ಕೆ ಚಿಕಿತ್ಸೆ ಕೊಡಬೇಕು. ಹೀಗಾಗಿ ಕೋವಿಡ್ ಪರೀಕ್ಷೆ ಎಂಬುದು ಒಂದು ಮಾಫಿಯಾ ಎನ್ನುತ್ತಾರೆ ತಜ್ಞರು.

ಈಗಾಗಲೇ ನಮ್ಮ ದೇಶದ ಸುಮಾರು ಪ್ರತಿಶತಃ 60 ರಷ್ಟು ಜನಸಂಖ್ಯೆಗೆ ಕೊರೊನಾ ವೈರಸ್ ಬಂದು ಹೋಗಿದೆ. ಉಳಿದಂತೆ ಅಕ್ಟೋಬರ್ ಅಂತ್ಯದ ಒಳಗೆ ದೇಶದ ಎಲ್ಲ 135 ಕೋಟಿ ಜನರಿಗೂ ಕೋವಿಡ್ ಸೋಂಕು ಬಂದು ಹೋಗುತ್ತದೆ. ಅಂದರೆ ಇನ್ನೆರಡು ತಿಂಗಳುಗಳಲ್ಲಿ ಉಳಿದಿರುವ ಶೇಕಡಾ 40 ರಷ್ಟು ಜನರಿಗೆ ಕೊರೊನಾ ಬಂದು ಹೋಗುತ್ತದೆ ಎಂದಿದ್ದಾರೆ.

ಕೊರೊನಾ ಬಂದಿದ್ದರೇ?

ಕೊರೊನಾ ಬಂದಿದ್ದರೇ?

ಒಂದೊಮ್ಮೆ ನಿಮಗೆ ಕೊರೊನಾ ಇದ್ದರೂ ಪರೀಕ್ಷೆ ಬೇಡ ಎಂದು ತಜ್ಞ ವೈದ್ಯರು ಸಲಹೆ ಕೊಟ್ಟಿದ್ದಾರೆ. ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಇದ್ದರೂ ಯಾವುದೇ ಪರೀಕ್ಷೆ ಬೇಡ. ಪರೀಕ್ಷೆ ಮಾಡಿಸಿದರೆ ಕೊರೊನಾ ವೈರಸ್ ಸೋಂಕಿರುವುದು ದೃಢವಾಗುತ್ತದೆ. ಈಗಾಗಲೇ ಸಮುದಾಯಕ್ಕೆ ಸೋಂಕು ಹರಡಿರುವುದರಿಂದ ರೋಗ ನಿರೋಧಕ ಶಕ್ತಿ ಕೂಡ ನಮಗೆಲ್ಲ ಬಂದಿದೆ. ಆದರೆ ಜ್ವರ ಅಥವಾ ಬೇರಾವುದೇ ಲಕ್ಷಣಗಳೊಂದಿಗೆ ಉಸಿರಾಟದ ತೊಂದರೆ ಇದ್ದರೆ ಮಾತ್ರ ನೀವು ಆಸ್ಪತ್ರೆಗೆ ಹೋಗಿ ದಾಖಲಾಗಿ. ಅನಗತ್ಯವಾಗಿ ಆಸ್ಪತ್ರೆಗೆ ಹೋಗುವುದು ಬೇಡ ಎಂದು ತಜ್ಞರು ಹೇಳಿದ್ದಾರೆ.

ಆಸ್ಪತ್ರೆ ಚಿಕಿತ್ಸೆಯ ಅಡ್ಡ ಪರಿಣಾಮಗಳಿಂದಲೇ ಸಾಕಷ್ಟು ಜನರು ಸಾವನ್ನಪ್ಪಿರುವುದು ಕಂಡು ಬಂದಿದೆ. ಹೀಗಾಗಿ ಕೊರೊನಾ ವೈರಸ್ ಚಿಕಿತ್ಸೆಯನ್ನು ಮಾಡಿಸಲೇಬೇಡಿ ಎಂಬುದು ತಜ್ಞರ ಅಭಿಮತ.

English summary
As the day progresses, the general public is less worried about the coronavirus. But the number of coronavirus infections is increasing alarmingly from day to day. Covid test is mandatory despite minor colds, fever and cough. Thus, it is argued that the more people tested the more infected they are. About 60% of people in the world are infected with Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X