ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ತೆರವು; ಸಾರಿಗೆ ಇಲಾಖೆ ಕುರಿತು ತಜ್ಞರ ಶಿಫಾರಸುಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್ 09: ಕರ್ನಾಟಕದಲ್ಲಿ ಕೊರೊನೊ ಸೋಂಕು ಹಬ್ಬುತ್ತಲೇ ಇದೆ. ಕೊರೊನಾ ಹರಡದಂತೆ ತಡೆಯಲು 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಏಪ್ರಿಲ್ 14ರ ಬಳಿಕ ಕರ್ನಾಟಕದಲ್ಲಿ ಲಾಕ್ ಡೌನ್ ಮುಂದುವರೆಯಲಿದೆಯೇ?.

Recommended Video

ಮಳೆಯಲ್ಲಿ ನೆನೆದುಕೊಂಡೇ ಹಸಿದವರಿಗೆ ಆಹಾರ ನೀಡ್ತಿದ್ದಾರೆ ಶಾಸಕಿ ಸೌಮ್ಯ ರೆಡ್ಡಿ | Oneindia Kannada

ಲಾಕ್ ಡೌನ್ ಘೋಷಣೆಯಾದ ಬಳಿಕ ಬಸ್, ರೈಲು, ವಿಮಾನ ಸೇರಿದಂತೆ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕ್ಯಾಬ್, ಓಲಾ, ಊಬರ್‌ಗಳ ಸಂಚಾರವೂ ಇಲ್ಲ. ಏಪ್ರಿಲ್ 14ರ ಬಳಿಕ ಕೆಲವು ನಿಯಮಗಳನ್ನು ಸಡಿಲಿಸಲಾಗುತ್ತದೆಯೇ? ಎಂಬ ಪ್ರಶ್ನೆ ಎದ್ದಿದೆ.

ಲಾಕ್ ಡೌನ್; ನಷ್ಟದ ಮೊತ್ತ ಅಂದಾಜಿಸಿದ ಕೆಎಸ್ಆರ್‌ಟಿಸಿ ಲಾಕ್ ಡೌನ್; ನಷ್ಟದ ಮೊತ್ತ ಅಂದಾಜಿಸಿದ ಕೆಎಸ್ಆರ್‌ಟಿಸಿ

ಕರ್ನಾಟಕ ಸರ್ಕಾರ ಲಾಕ್ ಡೌನ್ ಹೇಗೆ ತೆರವು ಮಾಡಬೇಕು? ಎಂದು ವರದಿ ನೀಡಲು ತಜ್ಞತ ಸಮಿತಿಯನ್ನು ರಚನೆ ಮಾಡಿತ್ತು. ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಹಲವು ಶಿಫಾರಸುಗಳನ್ನು ವರದಿಯಲ್ಲಿ ಮಾಡಿದೆ.

ಲಾಕ್ ಡೌನ್ ಮತ್ತು ಹಾಟ್‌ ಸ್ಪಾಟ್‌ಗಳಿಗಿರುವ ವ್ಯತ್ಯಾಸವೇನು? ಲಾಕ್ ಡೌನ್ ಮತ್ತು ಹಾಟ್‌ ಸ್ಪಾಟ್‌ಗಳಿಗಿರುವ ವ್ಯತ್ಯಾಸವೇನು?

ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿದ ಶಿಫಾರಸುಗಳ ವಿವರಗಳು ಇಲ್ಲಿವೆ. ಏಪ್ರಿಲ್ 30ರ ತನಕ ಅಥವ ಮುಂದಿನ ಆದೇಶದ ತನಕ ನಮ್ಮ ಮೆಟ್ರೋ ರೈಲಿನ ಸಂಚಾರ ಆರಂಭಿಸುವುದು ಬೇಡ ಎಂದು ಶಿಫಾರಸು ಮಾಡಲಾಗಿದೆ. ವಿವರಗಳು ಚಿತ್ರಗಳಲ್ಲಿ ಇದೆ.

ಏಪ್ರಿಲ್ 14ರ ಬಳಿಕ ಲಾಕ್ ಡೌನ್ ತೆರವಿಗೆ ಸಿದ್ಧವಾಗಿದೆ ಸೂತ್ರಏಪ್ರಿಲ್ 14ರ ಬಳಿಕ ಲಾಕ್ ಡೌನ್ ತೆರವಿಗೆ ಸಿದ್ಧವಾಗಿದೆ ಸೂತ್ರ

ಬಸ್, ವಿಮಾನ ಮತ್ತು ರೈಲು

ಬಸ್, ವಿಮಾನ ಮತ್ತು ರೈಲು

* ತಜ್ಞರ ಸಮಿತಿ ಏಪ್ರಿಲ್ 30 ಅಥವ ಮುಂದಿನ ಆದೇಶದ ತನಕ ರೈಲು, ಅಂತರರಾಜ್ಯ ಬಸ್‌ಗಳ ಸಂಚಾರವನ್ನು ಆರಂಭಿಸುವುದು ಬೇಡ ಎಂದು ಶಿಫಾರಸು ಮಾಡಿದೆ.

* ಮುಂದಿನ ಆದೇಶ ಅಥವ ಏಪ್ರಿಲ್ 30ರ ತನಕ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಆರಂಭಿಸುವುದು ಬೇಡ. ವಿಮಾನ ಮತ್ತು ರೈಲಿನಲ್ಲಿ ಸಹ ಪ್ರಯಾಣಿಕರಿಂದ ಕೊರೊನಾ ಸೋಂಕು ಹರಡಬಹುದು. ವಿಮಾನ ಮತ್ತು ರೈಲಿನ ಶೌಚಾಲಯಗಳು ಸೋಂಕು ಹರಡಲು ಕಾರಣವಾಗಬಹುದು.

ಸರಕು ಸಾಗಣೆ ವಾಹನಗಳಿಗೆ ಪ್ರವೇಶ

ಸರಕು ಸಾಗಣೆ ವಾಹನಗಳಿಗೆ ಪ್ರವೇಶ

* ಅಂತರರಾಜ್ಯ, ಅಂತರಜಿಲ್ಲೆ ನಡುವೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಇದಕ್ಕಾಗಿ ಚೆಕ್ ಪೋಸ್ಟ್‌ಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕಠಿಣಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

* ನಮ್ಮ ಮೆಟ್ರೋ ಸೇವೆಯನ್ನು ಏಪ್ರಿಲ್ 30ರ ತನಕ ಆರಂಭಿಸುವುದು ಬೇಡ. ಮೆಟ್ರೋ ಬೋಗಿಗಳು ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿವೆ ಎಂದು ತಜ್ಞರ ಸಮಿತಿ ಹೇಳಿದೆ.

ಬಸ್ ಸಂಚಾರಕ್ಕೂ ಷರತ್ತು ಹಾಕಿ

ಬಸ್ ಸಂಚಾರಕ್ಕೂ ಷರತ್ತು ಹಾಕಿ

* ಸಾರ್ವಜನಿಕ ಬಸ್‌ಗಳ ಸಂಚಾರಕ್ಕೆ (ಹವಾನಿಯಂತ್ರಣ ರಹಿತ) ಅವಕಾಶ ನೀಡಬಹುದು. ಆದರೆ, ಪ್ರಯಾಣಿಕರಿಗೆ ಮಾರ್ಗಸೂಚಿ ಸಿದ್ಧಪಡಿಸಬೇಕು. ಬಸ್‌ನಲ್ಲಿಯೂ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಬೇಕು. ಬಸ್ ಸಂಪೂರ್ಣ ಭರ್ತಿಯಾಗದಂತೆ ಎಚ್ಚರ ವಹಿಸಬೇಕು.

* ಹವಾನಿಯಂತ್ರಣ ರಹಿತವಾದ ಬಸ್‌ಗಳನ್ನು ಮಾತ್ರ ಓಡಿಸಬಹುದು. ಎಸಿ ಬಸ್‌ಗಳನ್ನು ಓಡಿಸಬಾರದು ಎಂದು ತಜ್ಞರ ಸಮಿತಿ ಹೇಳಿದೆ.

ಕ್ಯಾಬ್ ಸಂಚಾರ ಬೇಡ

ಕ್ಯಾಬ್ ಸಂಚಾರ ಬೇಡ

* ಆಟೋ ರಿಕ್ಷಾ, ಬೈಕ್ ಸಂಚಾರಕ್ಕೆ ಒಪ್ಪಿಗೆ ನೀಡಬಹುದು. ಆದರೆ, ಓಲಾ, ಊಬರ್ ಸೇರಿದಂತೆ ಖಾಸಗಿ ಟ್ಯಾಕ್ಸಿ ಸೇವೆಗಳನ್ನು ಏಪ್ರಿಲ್ 30ರ ತನಕ ಆರಂಭಿಸುವುದು ಬೇಡ ಎಂದು ಶಿಫಾರಸು ಮಾಡಲಾಗಿದೆ.

* ಖಾಸಗಿ ಕಾರುಗಳಿಗೆ ವಿಶೇಷ ಇ-ಪಾಸ್‌ಗಳನ್ನು ವಿತರಣೆ ಮಾಡಬೇಕು. ಸಮ-ಬೆಸ ಮಾದರಿಯಲ್ಲಿ ಕಾರುಗಳು ಸಂಚಾರ ನಡೆಸಬೇಕು. ಬೆಳಗ್ಗೆ 8 ರಿಂದ ರಾತ್ರಿ 8ರ ತನಕ ಜನರ ಸಂಚಾರವನ್ನು ಮಿತಿಗೊಳಿಸಬೇಕು.

English summary
The expert group constituted by the Government of Karnataka submitted report on exit strategy after 21 days lockdown. Here are the recommendations for transport sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X