ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹಿತೆ ಎಂಬ ಕಾರಣಕ್ಕೆ ಮಗಳಿಗೆ ಅನುಕಂಪದ ನೇಮಕಾತಿ ನಿರಾಕರಿಸುವಂತಿಲ್ಲ: ಹೈಕೋರ್ಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಸಹಾನುಭೂತಿಯ ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಿಂದ ವಿವಾಹಿತ ಮಗಳನ್ನು ಪರಿಗಣಿಸದೆ ಇರುವುದು ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಅನುಕಂಪದ ನೆಲೆಯಲ್ಲಿ ಮಾಡಿಕೊಳ್ಳಲಾಗುವ ನೇಮಕಾತಿಯ ಸಂದರ್ಭದಲ್ಲಿ ವ್ಯಕ್ತಿಯ ಮಗನ ವೈವಾಹಿಕ ಸ್ಥಿತಿ ಮುಖ್ಯವಾಗದೆ ಇದ್ದರೆ, ಮಗಳ ವೈವಾಹಿಕ ಸ್ಥಿತಿಯೂ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ವಿವಾಹಿತ ಮಗಳು ಕುಟುಂಬದ ಭಾಗ ಅಲ್ಲ ಎಂದಾಗುವುದಿಲ್ಲ ಮತ್ತು ಮದುವೆಯಾದ ಮಗ ಮಾತ್ರವೇ ಕುಟುಂಬದ ಭಾಗವಾಗಿ ಮುಂದುವರಿಯುತ್ತಾನೆ ಎಂಬ ಗ್ರಹಿಕೆಯನ್ನು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮಂಗಳವಾರ ತೀರ್ಪು ನೀಡಿದ್ದಾರೆ.

198 ವಾರ್ಡ್ ಗಳಿಗೆ ಬಿಬಿಎಂಪಿ ಚುನಾವಣೆ ಆರು ವಾರದಲ್ಲಿ ಪ್ರಕಟಿಸಿ : ಹೈಕೋರ್ಟ್‌ ತೀರ್ಪು198 ವಾರ್ಡ್ ಗಳಿಗೆ ಬಿಬಿಎಂಪಿ ಚುನಾವಣೆ ಆರು ವಾರದಲ್ಲಿ ಪ್ರಕಟಿಸಿ : ಹೈಕೋರ್ಟ್‌ ತೀರ್ಪು

ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭುವನೇಶ್ವರಿ ವಿ. ಪುರಾಣಿಕ್ ಎಂಬುವವರು, ತಮ್ಮ ತಂದೆಯ ಸಾವಿನ ಬಳಿಕ ಅವರ ಕೆಲಸವನ್ನು ಅನುಕಂಪದ ಆಧಾರದಲ್ಲಿ ಪಡೆದುಕೊಳ್ಳುವ ಪ್ರಯತ್ನವನ್ನು ಮಾನ್ಯ ಮಾಡದ್ದರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು. 'ಮದುವೆಯಾದ ಮಗಳು' ಎಂಬ ಕಾರಣಕ್ಕೆ ನೇಮಕಾತಿಗೆ ಅವರನ್ನು ಪರಿಗಣಿಸುವಂತಿಲ್ಲ ಎಂದು ತಿರಸ್ಕರಿಸಲಾಗಿತ್ತು. ಮುಂದೆ ಓದಿ.

ನಿಯಮಗಳ ಉಲ್ಲಂಘನೆ

ನಿಯಮಗಳ ಉಲ್ಲಂಘನೆ

ತಮ್ಮ ಅರ್ಜಿಯನ್ನು ತಿರಸ್ಕರಿಸಿರುವುದು ಕರ್ನಾಟಕ ನಾಗರಿಕ ಸೇವೆಗಳ (ಪರಿಹಾರದ ನೆಲೆಯಲ್ಲಿ ನೇಮಕಾತಿ) ನಿಮಯ 1996ರ ಅಡಿಯಲ್ಲಿ ವಿವಿಧ ನಿಯಮಗಳು ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ಭುವನೇಶ್ವರಿ ವಿ. ಪುರಾಣಿಕ್ ಆರೋಪಿಸಿದ್ದರು.

ವಿವಾಹಿತೆ ಎಂಬ ಕಾರಣಕ್ಕೆ ತಿರಸ್ಕಾರ

ವಿವಾಹಿತೆ ಎಂಬ ಕಾರಣಕ್ಕೆ ತಿರಸ್ಕಾರ

ಮೃತಪಟ್ಟ ಸರ್ಕಾರಿ ಉದ್ಯೋಗಿಗೆ ಒಬ್ಬ ಮತ್ತು ಮಗಳಿದ್ದಾರೆ. ಅನುಕಂಪದ ನೆಲೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ವಿಚಾರದಲ್ಲಿ ಮಗನಿಗೆ ಆಸಕ್ತಿ ಇಲ್ಲದ ಕಾರಣ ಈ ಉದ್ಯೋಗವನ್ನು ಅವರು ತಿರಸ್ಕರಿಸಿದ್ದರು. ಆದರೆ ಆ ಕೆಲಸ ತಮಗೆ ನೀಡುವಂತೆ ಮಗಳು ಸಲ್ಲಿಸಿದ್ದ ಅರ್ಜಿಯನ್ನು, ಆಕೆ ವಿವಾಹಿತೆ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು.

ರಾಜಕೀಯ ಕಾರ್ಯದರ್ಶಿಯಾಗಿ ಎನ್‌ ಆರ್‌ ಸಂತೋಷ್‌ ನೇಮಕ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ರಾಜಕೀಯ ಕಾರ್ಯದರ್ಶಿಯಾಗಿ ಎನ್‌ ಆರ್‌ ಸಂತೋಷ್‌ ನೇಮಕ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಅವಲಂಬಿತರನ್ನು ವ್ಯಾಖ್ಯಾನಿಸಬೇಕು

ಅವಲಂಬಿತರನ್ನು ವ್ಯಾಖ್ಯಾನಿಸಬೇಕು

ಸಹಾನುಭೂತಿ ಆಧಾರಿತ ನೇಮಕಾತಿಯಲ್ಲಿ ಅನುಮತಿ ಅಥವಾ ನಿರಾಕರಣೆಗೆ ಅವಲಂಬನೆಯು ಪ್ರಮುಖವಾದ ಅಂಶವಾಗಿದೆ. ಆದರೆ ಮಗಳು ವಿವಾಹಿತೆ ಎಂಬ ಕಾರಣಕ್ಕೆ 'ಅವಲಂಬಿತರು' ಮತ್ತು 'ಕುಟುಂಬ'ವನ್ನು ಇಲ್ಲಿ ವ್ಯಾಖ್ಯಾನಿಸಿಯೇ ಇಲ್ಲ.

ಸಂಬಂಧವನ್ನು ಮದುವೆ ಬದಲಿಸುವುದಿಲ್ಲ

ಸಂಬಂಧವನ್ನು ಮದುವೆ ಬದಲಿಸುವುದಿಲ್ಲ

'ಮಗನಾಗಿರಲಿ ಅಥವಾ ಮಗಳಾಗಿರಲಿ, ಪೋಷಕರೊಂದಿಗಿನ ಮಗುವಿನ ಸಂಬಂಧದ ಮುಂದುವರಿಕೆಯನ್ನು ಮದುವೆ ನಿರ್ಧರಿಸುವುದಿಲ್ಲ. ಮದುವೆಗೂ ಮುನ್ನ ಮಗನಾಗಿದ್ದವನು ಮಗನಾಗಿಯೇ ಇರುತ್ತಾನೆ. ಹಾಗೆಯೇ ಮಗಳು ಕೂಡ ಮದುವೆಗೆ ಮುನ್ನ ಮತ್ತು ನಂತರವೂ ಮಗಳಾಗಿಯೇ ಮುಂದುವರಿಯಬೇಕು. ಮದುವೆಯ ಕಾರಣಕ್ಕೆ ಸಂಬಂಧಗಳು ಬದಲಾಗುವುದಿಲ್ಲ. ಮದುವೆಯ ಬಳಿಕ ಪೋಷಕರೊಂದಿಗಿನ ಮಗಳ ಸಂಬಂಧ ದೂರವಾಗುವುದಿಲ್ಲ. ಹಾಗೆಯೇ ಈ ಸಂಬಂಧಗಳು ವೈವಾಹಿಕ ಸ್ಥಿತಿಯ ಮೂಲಕ ವ್ಯಾಖ್ಯಾನ ಅಥವಾ ನಿರ್ಧರಿತಗೊಳ್ಳುವುದಿಲ್ಲ' ಎಂದು ಕೋರ್ಟ್ ಹೇಳಿದೆ.

Recommended Video

ಬೆಂಗಳೂರು:ಟ್ರಾಫಿಕ್ ಕ್ಲಿಯರ್ ಮಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ | Oneindia Kannada
ಸಂವಿಧಾನದ ವಿಧಿಗಳ ಉಲ್ಲಂಘನೆ

ಸಂವಿಧಾನದ ವಿಧಿಗಳ ಉಲ್ಲಂಘನೆ

ಮದುವೆಯಾದ ಮಗಳನ್ನು ಈ ನಿಯಮಗಳ ಅಡಿಯಲ್ಲಿ 'ಕುಟುಂಬ'ದ ಅಭಿವ್ಯಕ್ತಿಯ ಪರಿಧಿಯಿಂದ ಹೊರಗಿಡುವುದು ಅಕ್ರಮ ಮತ್ತು ಅಸಾಂವಿಧಾನಿಕ. ಸಂವಿಧಾನದ 14 ಮತ್ತು 15ನೇ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

English summary
Excluding Married Daughter From Consideration for Compassionate Ground Is Unconstitutional: Karnataka High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X