ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಕರ್ಫ್ಯೂ: ಮದ್ಯ ಮಾರಾಟ ಇದೆಯೊ ?ಇಲ್ಲವೊ?

|
Google Oneindia Kannada News

ಬೆಂಗಳೂರು, ಜು. 04: ಮದ್ಯ ಸೇವನೆ ಹವ್ಯಾಸ ಉಳ್ಳವರಿಗೆ ಲಾಕ್‌ಡೌನ್, ಕೊರೊನಾ ಸಂಕಷ್ಟ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಹೀಗಾಗಿ ಸರ್ಕಾರ ಅನ್‌ಲಾಕ್‌ಗೂ ಮೊದಲೇ ಮದ್ಯದ ಅಂಗಡಿಗಳನ್ನು ಆರಂಭಿಸಿತ್ತು. ಜೊತೆಗೆ ಸರ್ಕಾರಕ್ಕೆ ಮದ್ಯದ ಮೇಲಿನ ಸುಂಕದಿಂದ ಬರುವ ಹಣ ಕೂಡ ಮದ್ಯ ಸೇವನೆ ಹವ್ಯಾಸ ಉಳ್ಳವರ ಮೇಲೆ ಸರ್ಕಾರಗಳು ವಿಶೇಷ ಅಕ್ಕರೆ ತೋರಲು ಒಂದು ಕಾರಣ.

Recommended Video

Siddaramaiah,ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ ಭಾರೀ ಭ್ರಷ್ಟಾಚಾರ| Oneindia Kannada

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದು ಹೆಚ್ಚಾಗುತ್ತಿರುವುದರಿಂದ ಪ್ರತಿ ಭಾನುವಾರ ಸಂಪೂರ್ಣ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಮಾಡಿದೆ. ಆದರೆ ಮದ್ಯದ ಅಂಗಡಿಗಳ ಬಗ್ಗೆ ಮಾತ್ರ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಅಬಕಾರಿ ಸಚಿವ ಎಚ್. ನಾಗೇಶ್ ಕೋಲಾರದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಅಬಕಾರಿ ಇಲಾಖೆಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಅಬಕಾರಿ ಇಲಾಖೆ

ನಾಳೆ ಬಾರ್ ಮುಚ್ಚುವಂತೆ ಈವರೆಗೆ ಆದೇಶ ಬಂದಿಲ್ಲ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಇಂದು ಸಂಜೆಯೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸರ್ಕಾರದಿಂದ ಬರುವ ಮಾಹಿತಿಯನ್ನು ತಿಳಿಸುತ್ತೇವೆ ಎಂದಿದ್ದಾರೆ.

Excise Minister H Nagesh said the decision on selling liquor Sunday curfew is yet to be finalized

ಮದ್ಯ ಅಗತ್ಯ ವಸ್ತು ಅಲ್ಲ. ಹೀಗಾಗಿ ನಾಳೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಮದ್ಯದ ಅಂಗಡಿಗಳನ್ನು ಮುಚ್ಚುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ ಎಂದು ನಾಗೇಶ್ ಹೇಳಿದ್ದಾರೆ. ಹೀಗಾಗಿ ನಾಳೆ ಎಣ್ಣೆ ಸಿಗುತ್ತಾ ಇಲ್ಲವಾ ಎಂಬ ಗೊಂದಲದಲ್ಲಿ ಮದ್ಯ ಪ್ರೀಯರು ಇದ್ದಾರೆ.

English summary
The government has ordered a full curfew every Sunday as the spread of coronavirus infection in the state. Minister for Excise Nagesh clarified in Kolar, that govt has not made any decisions about liquor stores till now. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X