ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ತಡೆ: ಸಕಾಲ ವ್ಯಾಪ್ತಿಗೆ ಇನ್ನು ಅಬಕಾರಿ ಇಲಾಖೆ

|
Google Oneindia Kannada News

ಬೆಂಗಳೂರು, ನವೆಂಬರ್ 19: ಅಬಕಾರಿ ಇಲಾಖೆಯಲ್ಲಿನ ಅಕ್ರಮ ತಡೆಗಟ್ಟಲು ಇಲಾಖೆಯನ್ನು ಸಕಾಲದಡಿ ತರಲಾಗಿದೆ. ಆನ್‌ಲೈನ್ ಮದ್ಯದಂಗಡಿ ಪರವಾನಗಿ ನವೀಕರಣ ಯೋಜನೆ ಜಾರಿಗೆ ಬಂದ ಬಳಿ ಈಗ ವಿವಿಧ ಸೇವೆಗಳನ್ನು ಸಕಾಲದಡಿ ಜಾರಿಗೆ ತರಲಾಗಿದೆ. ಆನ್‌ಲೈನ್ ಮದ್ಯ ಮಾರಾಟ ನಿಷೇಧಿಸುವ ಕುರಿತು ಚಿಂತನೆ ನಡೆದಿದೆ.

ಇಲಾಖೆಯ ಸೇವೆಗಳನ್ನು ಪಡೆಯಲು ಸಾಕಷ್ಟು ಬಾರಿ ಅಲೆದಾಡಿದ್ದರೂ ಲಂಚ ನೀಡದಿದ್ದರೆ ಕೆಲಸಗಳು ಆಗುತ್ತಿರಲಿಲ್ಲ, ಅಬಕಾರಿ ಇಲಾಖೆಯನ್ನು ಈಗ ಸಕಾಲ ವ್ಯಾಪ್ತಿಗೆ ಒಳಪಡಿಸಿರುವುದರಿಂದ ನಮಗೆ ತುಂಬ ಅನುಕೂಲವಾಗಿದೆ ಲಂಚದ ಕಾಟ ಇಲ್ಲವಾಗಿದೆ ಎಂದು ಬರ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ಆನ್‌ಲೈನ್‌: ಭ್ರಷ್ಟಾಚಾರಕ್ಕೆ ಬಿತ್ತು ಬ್ರೇಕ್‌ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ಆನ್‌ಲೈನ್‌: ಭ್ರಷ್ಟಾಚಾರಕ್ಕೆ ಬಿತ್ತು ಬ್ರೇಕ್‌

ಡಿಸ್ಟಲರಿ, ಬ್ರೆವರಿ, ಮೈಕ್ರೋಬ್ರೆವರಿ ಮತ್ತು ವೈನರಿ ಸನ್ನದುಗಳ ನವೀಕರಣ ಹಾಗೂ ವರ್ಗಾವಣೆ, ಮದ್ಯಸಾರ ಆಮದಿಗೆ, ರಫ್ತಿಗೆ ನಿರಾಪೇಕ್ಷಣ ಪತ್ರ, ಮದ್ಯ ರಫ್ತು, ಸಹಮತಿ ಪತ್ರ, ಸ್ಥಳೀಯ ಲೇಬಲ್ ಅನುಮೋದನೆ ಡಿಪಿ , ಎಂಆರ್‌ಪಿ ಮತ್ತು ಆರ್‌ಎಂಆರ್‌ಪಿ, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಅನುಮೋದನೆ ಸೇವೆಗಳು ಲಭ್ಯವಾಗಲಿದೆ.

Excise department will come under Sakala

ಇಲ್ಲದ ಪರವಾನಗಿ, ನಿಲ್ಲದ ಸಂಗೀತ, 400 ಬಾರ್‌, ಪಬ್‌ಗಳಿಗೆ ನೋಟಿಸ್‌ಇಲ್ಲದ ಪರವಾನಗಿ, ನಿಲ್ಲದ ಸಂಗೀತ, 400 ಬಾರ್‌, ಪಬ್‌ಗಳಿಗೆ ನೋಟಿಸ್‌

ಅಷ್ಟೇ ಅಲ್ಲದೆ ಅಂತಾರಾಜ್ಯ ಕಾಕಂಬಿ ಎತ್ತುವಳಿ ನಿರಾಪೇಕ್ಷಣ ಪ್ರಮಾಣ ಪತ್ರ, ರಾಜ್ಯ ಪಾನೀಯ ಇಗಮ ನಿಯಮಿತದಿಂದ ಸ್ವೀಕೃತವಾದ ಹೊರ ದೇಶದ ಲೇಬಲ್ ಅನುಮೋದನೆ, ಪ್ರಾಥಮಿಕ ಡಿಸ್ಟಲರಿ, ಮದ್ಯ ಉತ್ಪಾದನಾ ಡಿಸ್ಟಲರಿ, ವೈನರಿಗಳಿಗೆ ಮದ್ಯಸಾರ ಹಂಚಿಕೆ, ನೀಲಿನಕ್ಷ ಅನುಮೋದನೆ, ವಿಶೇಷ ಸಾಂದರ್ಭಿಕ ಸನ್ನದುಗಳ ಮಂಜೂರಾತಿ ಸೇರಿದಂತೆ 38 ಸೇವೆಗಳು ಲಭ್ಯವಾಗಲಿವೆ.

English summary
To curb the illegal activities in excise department government decided to introduce sakala in this department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X