• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೀಘ್ರ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಸುರೇಶ್ ಕುಮಾರ್

|

ಬೆಂಗಳೂರು, ಜ. 02: ಮಕ್ಕಳ ಸುರಕ್ಷತೆಗೆ ಕೈಗೊಂಡ ಕ್ರಮಗಳ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಉಂಟಾಗಿದ್ದು, ಪ್ರಸ್ತುತ ವರ್ಷದ ಶಾಲಾರಂಭದ ಎರಡನೇ ದಿನವಾದ ಶನಿವಾರ ರಾಜ್ಯದೆಲ್ಲೆಡೆ ಶುಕ್ರವಾರಕ್ಕಿಂತ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

10 ಮತ್ತು 12ನೇತರಗತಿಗಳು ಮತ್ತು 6 ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳ ಆರಂಭವಾದ ಹಿನ್ನೆಲೆಯಲ್ಲಿ ಶನಿವಾರ ರಾಮನಗರ ಜಿಲ್ಲೆಯ ಬಿಡದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವೇಶ್ವರ ಪ್ರೌಢಶಾಲೆ, ರಾಮನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಶಾಂತಿನಿಕೇತನ ಶಾಲೆ, ವಿ.ಜಿ.ದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಗಡಿ ತಾಲೂಕಿನ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಚೇನಹಟ್ಟಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ರಾಮನಗರ ಜಿಲ್ಲೆ ಮತ್ತು ಬೆಂಗಳೂರು ನಗರದ ಹಲವು ಶಾಲೆಗಳಿಗೆ ಭೇಟಿ ನೀಡಿ ಪೋಷಕರು ಮತ್ತು ಮಕ್ಕಳೊಂದಿಗೆ ಶಾಲಾರಂಭದ ಕುರಿತು ಸಂವಾದ ನಡೆಸಿ ಅಭಿಪ್ರಾಯಗಳನ್ನು ಆಲಿಸಿದರು.

ಇಂದಿನ ಹಾಜರಾತಿ

ಇಂದಿನ ಹಾಜರಾತಿ

ರಾಜ್ಯದಲ್ಲಿರುವ 5492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 3,30,877 ವಿದ್ಯಾರ್ಥಿಗಳ ಪೈಕಿ ಶನಿವಾರ 1,09,319 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. 33.04 ಹಾಜರಿ) ಅಂತೆಯೇ 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,25,896 ವಿದ್ಯಾರ್ಥಿಗಳು ಹಾಜರಾಗಿದ್ದಾರೆ (ಶೇ.45.84 ಹಾಜರಾತಿ) ಎಂದು ಅವರು ತಿಳಿಸಿದ್ದಾರೆ.

ಮಕ್ಕಳಲ್ಲಿ ಹೆಚ್ಚಿದ ವಿಶ್ವಾಸ

ಮಕ್ಕಳಲ್ಲಿ ಹೆಚ್ಚಿದ ವಿಶ್ವಾಸ

ಶಾಲಾರಂಭದ ಕುರಿತು ಪೋಷಕರು ಮತ್ತು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಸುರಕ್ಷತೆ ಮತ್ತು ಎಸ್ಒಪಿ ಪಾಲನೆ ಕುರಿತು ವಿಶ್ವಾಸ ಹೊಂದಿದ್ದಾರೆ. ಬಹುದಿನಗಳ ಕಾಲ ಶಾಲೆಗಳು ಆರಂಭವಾಗದೇ ಮಕ್ಕಳ ಭವಿಷ್ಯದ ಕುರಿತು ಆತಂಕದಲ್ಲಿದ್ದ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ಶಾಲಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸುರೇಶ್ ಕುಮಾರ್ ಅವರು ಶಾಲೆಗಳಿಗೆ ಭೇಟಿ ಕೊಟ್ಟ ಬಳಿಕ ತಿಳಿಸಿದ್ದಾರೆ.

ಕೆಲ ಪೋಷಕರು ಮುಂದಿನ ವಾರದಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಬಯಸಿರುವುದರಿಂದ ಸೋಮವಾರದಿಂದ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಲಿದೆ. ಸುರಕ್ಷತಾ ವಾತಾವರಣದ ಗಮನಿಸಿರುವ ಪೋಷಕರು ಉಳಿದ ತರಗತಿಗಳನ್ನೂ ಆರಂಭಿಸಲು ಹೆಚ್ಚಿನ ಒತ್ತಡ ಹೇರುತ್ತಿರುವುದು ಸಾಮಾನ್ಯವಾಗುತ್ತಿದೆ. ಎಲ್ಲಿಯೂ ಸಹ ಯಾವುದೇ ತೊಂದರೆ ಎದುರಾಗಿಲ್ಲ ಹಾಗೆಯೇ ಮಕ್ಕಳೇ ಸ್ವತಃ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವುದು ಶಿಕ್ಷಕರು ಮತ್ತು ಪೋಷಕರಿಗೆ ಸಮಾಧಾನ ತಂದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಪರೀಕ್ಷಾ ವೇಳಾಪಟ್ಟಿ ಪ್ರಕಟ

ಪರೀಕ್ಷಾ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪಠ್ಯಗಳನ್ನು ಸಿಗುವ ಅವಧಿ ಮತ್ತು ಪರೀಕ್ಷೆಗೆ ಅಗತ್ಯವಿರುವಷ್ಟು ಮಾತ್ರ ನಿಗದಿಪಡಿಸಲಾಗುವುದು. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹೊರೆಯಾಗದಂತೆ ಪಠ್ಯಕ್ರಮವಿರಲಿದೆ. ಹಾಗೆಯೇ ಕೆಲವು ದಿನಗಳಲ್ಲಿ 10 ಮತ್ತು 12ನೇ ತರಗತಿಗಳ ತ್ಕಾತ್ಕಾಲಿಕವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಸುರೇಶ್ ಕುಮಾರ್ ಹೇಳಿದ್ದಾರೆ.


ಶಾಲೆಗಳು ಆರಂಭವಾಗಿರುವುದು ಶಾಲಾ ಪರಿಸರಕ್ಕೆ ಕಳೆ ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಒಂದು ಶಾಲಾ ಉಡುಪಿನೊಂದಿಗೆ ಮಕ್ಕಳ ಓಡಾಟ ಒಂದು ರೀತಿಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ ಎಂದಿದ್ದಾರೆ.

ಶಿಕ್ಷಕರಿಗೆ ಕೊರೋನಾ

ಶಿಕ್ಷಕರಿಗೆ ಕೊರೋನಾ

ಗದಗ ಜಿಲ್ಲೆ ಗದಗದ ಲೋಯಲಾ ಪ್ರಾಥಮಿಕ ಶಾಲೆ, ಲೋಯಲಾ ಪ್ರೌಢಶಾಲೆ, ಸೇಂಟ್ ಜಾನ್ ಪ್ರಾಥಮಿಕ ಶಾಲೆ, ಮಾರಲ್ ಪ್ರಾಥಮಿಕ ಶಾಲೆ, ಸಿ.ಎಸ್. ಪಾಟೀಲ ಪ್ರೌಢಶಾಲೆ ಮತ್ತು ನರಗುಂದ ತಾಲೂಕಿನ ಜಗಾಪೂರ ಸರ್ಕಾರಿ ಪ್ರೌಢಶಾಲೆಯ ಒಟ್ಟು 10 ಶಿಕ್ಷಕರಿಗೆ ಶಾಲಾರಂಭಕ್ಕೂ ಮುನ್ನವೇ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಶಾಲೆಗಳು ಶುಕ್ರವಾರ ಆರಂಭವಾಗಿಲ್ಲ. ಶಾಲೆಗಳು ಆರಂಭವಾಗದೇ ಇದ್ದುದರಿಂದ ಈ ಶಿಕ್ಷಕರ ಯಾವುದೇ ಮಕ್ಕಳ ಸಂಪರ್ಕಕ್ಕೆಬಂದಿಲ್ಲ. ಈ ಶಿಕ್ಷಕರ ಹೋಂಕ್ವಾರಂಟೈನ್ ಅವಧಿ ಇನ್ನೂ ಏಳು ದಿನಗಳ ಬಾಕಿಯಿದ್ದು, ಈ ಶಾಲೆಗಳು ಮುಂದಿನ ದಿನಗಳಲ್ಲಿ ಆರಂಭವಾಗಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

English summary
The SSLC and Secondary PU texts are only available for the duration of the exam and as required. The curriculum will not be burdened with student learning. The Exam schedule will be announced temporarily for 10th and 12th grades in a few days said Suresh Kumar. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X