• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಗಿಲುಮುಟ್ಟಿದ ಕಾಂಗ್ರೆಸ್ ಅಂತಃಕಲಹ: ಮುನಿಯಪ್ಪ ಆಕ್ರೋಶದ ಬೆಂಕಿಗೆ ಗುಂಡೂರಾವ್ ತುಪ್ಪ

|

ಕರ್ನಾಟಕ ಕಾಂಗ್ರೆಸ್ ನಲ್ಲಿ ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಕೆ.ಎಚ್.ಮುನಿಯಪ್ಪ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಿಂದ ಪರಾಭವಗೊಂಡ ನಂತರ, ಸ್ವಪಕ್ಷೀಯರ ಮೇಲಿನ ಇವರ ಸಿಟ್ಟು ಇನ್ನಷ್ಟು ಹೆಚ್ಚಾಗಿತ್ತು.

ನೇರವಾಗಿ ಸಿದ್ದರಾಮಯ್ಯ ವಿರುದ್ದ ಕಿಡಿಕಾರುತ್ತಿದ್ದ ಮುನಿಯಪ್ಪ, ನಂತರ, ಅವರ ಆಪ್ತರನ್ನೂ ಟಾರ್ಗೆಟ್ ಮಾಡಲಾರಂಭಿಸಿದರು. ಒಂದೆರಡು ವಾರದ ಹಿಂದೆ, ಸಿದ್ದರಾಮಯ್ಯ - ಮುನಿಯಪ್ಪ ನಡುವಿನ ಏಕವಚನದ ವಾಕ್ಸಮರ ರಾಜ್ಯದೆಲ್ಲಡೆ ಸುದ್ದಿಯಾಗಿತ್ತು.

ಅಂದು, ಇಂದು: ರಾಜಕಾರಣಿಗಳ ಮುಂದೆ ಅಸಹಾಯಕರಾದ ಧರ್ಮಸ್ಥಳ ಮಂಜುನಾಥ, ಚಾಮುಂಡೇಶ್ವರಿ

ಇನ್ನು, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಿದ್ದರಾಮಯ್ಯನವರಿಗೆ ಕೊಡಬಾರದೆಂದು ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಮುಂತಾದವರು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಇದು, ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರು ಎಂದು ದೊಡ್ಡ ಕಂದಕವನ್ನೇ ಹುಟ್ಟುಹಾಕಿತ್ತು.

ಆಧಾರ್- ವೋಟರ್ ಐಡಿ ಲಿಂಕ್: ರಾಜಕಾರಣಿಗಳಿಗೆ ಅಸಲಿ ಪರೀಕ್ಷೆ ಇನ್ನು ಶುರು

ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೋನಿಯಾ, ವಿರೋಧ ಪಕ್ಷದ ಸ್ಥಾನವನ್ನು ಸಿದ್ದರಾಮಯ್ಯನವರಿಗೇ ನೀಡಿದ್ದರು. ಈಗ, ಮುನಿಯಪ್ಪ ಆಕ್ರೋಶದ ಬೆಂಕಿಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ತುಪ್ಪ ಸುರಿಯುವ ಇನ್ನೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಘಟಕದ ಏಳು ಮುಖಂಡರ ಅಮಾನತು

ಜಿಲ್ಲಾ ಕಾಂಗ್ರೆಸ್ ಘಟಕದ ಏಳು ಮುಖಂಡರ ಅಮಾನತು

ಕೋಲಾರ ಜಿಲ್ಲಾ ಕಾಂಗ್ರೆಸ್ ಘಟಕದ ಏಳು ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇವರೆಲ್ಲಾ, ಕಟ್ಟಾ ಮುನಿಯಪ್ಪ ಬೆಂಬಲಿಗರು. ಅಮಾನತುಗೊಂಡವರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರೂ ಕೂಡಾ ಇದ್ದರು.

ವಿಪಕ್ಷ ನಾಯಕನ ಆಯ್ಕೆಯ ವಿಚಾರ

ವಿಪಕ್ಷ ನಾಯಕನ ಆಯ್ಕೆಯ ವಿಚಾರ

ವಿಪಕ್ಷ ನಾಯಕನ ಆಯ್ಕೆಯ ವಿಚಾರದಲ್ಲಿ ತಮ್ಮ ನಾಯಕ (ಕೆ.ಎಚ್.ಮುನಿಯಪ್ಪ) ಮಾತಿಗೆ ಮನ್ನಣೆ ಸಿಗಲಿಲ್ಲ ಎನ್ನುವುದು ಅಮಾನತುಗೊಂಡವರ ಸಿಟ್ಟಾಗಿತ್ತು. ಹಾಗಾಗಿ, ಬಹಿರಂಗವಾಗಿಯೇ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ದ ಹೇಳಿಕೆಯನ್ನು ನೀಡಿದ್ದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ದಿನೇಶ್ ಬ್ಯೂಸಿ

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ದಿನೇಶ್ ಬ್ಯೂಸಿ

ಪಕ್ಷದಲ್ಲಿ ಶಿಸ್ತನ್ನು ತರುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಮುಖಂಡರನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ದಿನೇಶ್ ಗುಂಡೂರಾವ್ ಬಂದಿದ್ದರು. ಇದರ ಸುಳಿವು ದೊರತ ಮುನಿಯಪ್ಪ, ಕೋಲಾರದಿಂದ, ಕೆಪಿಸಿಸಿ ಕಚೇರಿಗೆ ಬಂದಿದ್ದಾರೆ. ಇನ್ನೊಂದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ದಿನೇಶ್ ಬ್ಯೂಸಿಯಾಗಿದ್ದರು.

ದಿನೇಶ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಮುನಿಯಪ್ಪ

ದಿನೇಶ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಮುನಿಯಪ್ಪ

ಕೆಪಿಸಿಸಿ ಅಧ್ಯಕ್ಷರು ಸಭೆಯಲ್ಲಿ ಇದ್ದಾರೆ ಅನ್ನುವುದನ್ನೂ ನೋಡದೇ, ದಿನೇಶ್ ಅವರನ್ನು ಮುನಿಯಪ್ಪ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು ಎನ್ನುವ ಮಾಹಿತಿಯಿದೆ. ಇದಾದ ಸ್ವಲ್ಪಹೊತ್ತಿನಲ್ಲೇ, ಏಳು ಮುಖಂಡರ ಅಮಾನತು ಆದೇಶ ಕೆಪಿಸಿಸಿಯಿಂದ ಹೊರಬಿದ್ದಿದೆ.

ಶ್ರೀನಿವಾಸಪುರದ ಶಾಸಕರು

ಶ್ರೀನಿವಾಸಪುರದ ಶಾಸಕರು

ಇದರಿಂದ ಇನ್ನಷ್ಟು ಆಕ್ರೋಶಗೊಂಡ ಮುನಿಯಪ್ಪ, ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಮಾಡಬೇಡಿ. ಶ್ರೀನಿವಾಸಪುರದ ಶಾಸಕರು (ರಮೇಶ್ ಕುಮಾರ್) ನಡೆಸಿದ ಪಕ್ಷವಿರೋಧಿ ಚಟುವಟಿಕೆಯ ಬಗ್ಗೆ ಸಾಕ್ಷ್ಯ ಸಮೇತ ದೂರು ನೀಡಿದರೂ, ಸುಮ್ಮನೆ ಇದ್ದೀರಿ. ವಾಸ್ತವ ವಿಚಾರ ಹೇಳಿದರೆ, ಅಮಾನತು ಮಾಡುತ್ತೀರಾ ಎಂದು ಮುನಿಯಪ್ಪ, ಕೆಪಿಸಿಸಿ ಕಚೇರಿಯಿಂದ ವಾಪಸ್ ಹೊರಟರು ಎಂದು ಹೇಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ex Kolar MP Senior Congress Leader K H Muniyappa Angry On KPCC President Dinesh Gundu Rao Over Suspension Of Seven Kolar District KPCC Leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more