ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಬಗ್ಗೆ ಮೊದಲು ಶಂಕೆ ವ್ಯಕ್ತಪಡಿಸಿದ್ದೇ ಬಿಜೆಪಿ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಮೇ 22: ವಿದ್ಯುನ್ಮಾನ ಮತಯಂತ್ರದ ಕುರಿತು ವಿರೋಧ ಪಕ್ಷಗಳ ಆಕ್ಷೇಪ ಮತ್ತು ಅನುಮಾನಗಳನ್ನು ಟೀಕಿಸಿ ಬಿಜೆಪಿ ಸಮರ್ಥನೆ ನೀಡುತ್ತಿರುವ ವೇಳೆಯಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ EC ಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ EC

ಇವಿಎಂ ಕುರಿತು ಮೊದಲು ಅನುಮಾನ ವ್ಯಕ್ತಪಡಿಸಿದ್ದು ಬಿಜೆಪಿಯವರೇ. ಈ ಬಗ್ಗೆ ಪಕ್ಷದ ವಕ್ತಾರರೇ ಪುಸ್ತಕ ಬರೆದಿದ್ದರು. ಅದಕ್ಕೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮುನ್ನುಡಿಯನ್ನೂ ಬರೆದಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿದ್ದಾರೆ.

ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದು ಬಿಜೆಪಿ.‌ ಆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹರಾವ್ ಈ ಬಗ್ಗೆ ಪುಸ್ತಕವನ್ನೇ ಬರೆದಿದ್ದರು. ಆ ಅನುಮಾನವನ್ನು ಬೆಂಬಲಿಸಿ ಎಲ್.ಕೆ.ಅಡ್ವಾಣಿ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ಇವಿಎಂ ಬಗ್ಗೆ ಈ ಹತ್ತು ವರ್ಷಗಳಲ್ಲಿ ಬಿಜೆಪಿಯ ಬದಲಾದ ನಿಲುವಿಗೆ ಕಾರಣವೇನು? ಎಂದು ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

evm was doubted by bjp first siddaramaiah

'ಇವಿಎಂಗಳಿಂದಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಶೀರ್ಷಿಕೆಯ ಪುಸ್ತಕವನ್ನು 2009ರ ಚುನಾವಣೆ ಬಳಿಕ ಆಗಿನ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಬರೆದಿದ್ದರು.

ಇವಿಎಂ ದುರ್ಬಳಕೆ ಸಾಧ್ಯವೇ? ಅದಕ್ಕೆ ಇರುವ ಭದ್ರತೆ ಏನು? ಇಲ್ಲಿದೆ ಮಾಹಿತಿ ಇವಿಎಂ ದುರ್ಬಳಕೆ ಸಾಧ್ಯವೇ? ಅದಕ್ಕೆ ಇರುವ ಭದ್ರತೆ ಏನು? ಇಲ್ಲಿದೆ ಮಾಹಿತಿ

ಇವಿಎಂ ಕುರಿತಾಗಿ ದೇಶದಾದ್ಯಂತ ತೀವ್ರ ಚರ್ಚೆ ನಡೆಯುತ್ತಿವೆ. ಇವಿಎಂ ದುರ್ಬಳಕೆ ಮಾಡಿಕೊಂಡು ಬಿಜೆಪಿ ಮತಗಳನ್ನು ಕಸಿದುಕೊಳ್ಳುತ್ತಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ. ಇದನ್ನು ಬಿಜೆಪಿ ತಳ್ಳಿಹಾಕಿದೆ. ಚುನಾವಣಾ ಆಯೋಗ ಕೂಡ ಇವಿಎಂ ದುರ್ಬಳಕೆ ಅಸಾಧ್ಯ ಎಂದು ತಿಳಿಸಿದೆ.

ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಆಗಿನ ಇವಿಎಂ ನಲ್ಲಿ ಪೇಪರ್ ಟ್ರೇಲ್ ಇರಲಿಲ್ಲ. ಹಾಗಾಗಿ ಅನುಮಾನಾಸ್ಪದವಾಗಿತ್ತು. Voter verifiable paper audit trail (VVPAT) 2011ರಲ್ಲಿ ಅಳವಡಿಸಲಾದ ನಂತರ, ಇದೀಗ ಅನುಮಾನಕ್ಕೆ ಅವಕಾಶವಿಲ್ಲದಂತಾಗಿ ಯಾರು ಬೇಕಿದ್ದರೂ ಮ್ಯಾಚ್ ಮಾಡಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ. ಹಾಗಾಗಿ ನಮ್ಮ ನಿಲುವು ಬದಲಾಗಿದೆ. any other doubts Sir? ಎಂದು ಮಾಳವಿಕಾ ಪ್ರಶ್ನಿಸಿದ್ದಾರೆ.

English summary
Congress leader Siddaramaiah said that, it was BJP who doubted first time on EVM's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X