ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮಭೂಷಣ ನಂದನ್ ನಿಲೇಕಣಿ ಬಗ್ಗೆ ಒಂದಿಷ್ಟು

By Mahesh
|
Google Oneindia Kannada News

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿಲೇಕಣಿ ಊರಿನ ನಂದನ ಇಂದು ವಿಶ್ವಖ್ಯಾತಿ ಹೊಂದಿರುವ ಭಾರತದ ಪ್ರಮುಖ ಉದ್ಯಮಿ. ಇಲ್ಲಿವರೆವಿಗೂ ಇನ್ಫೋಸಿಸ್ ಸಹಸ್ಥಾಪಕ ಎಂದು ನಿಲೇಕಣಿ ಅವರನ್ನು ಗುರುತಿಸಲಾಗುತ್ತಿತ್ತು ಈಗ ಆಧಾರ್ ಕಾರ್ಡ್ ಖ್ಯಾತಿಯ ನಿಲೇಕಣಿಯಾಗಿಬಿಟ್ಟಿದ್ದಾರೆ.

ಶಿರಸಿಯಲ್ಲಿ ಜೂನ್ 2, 1955ರಲ್ಲಿ ಜನಿಸಿದ ನಂದನ್ ಅವರು ಧಾರವಾಡದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಂಬೈ ಐ ಐ ಟಿ ಪದವೀಧರರಾದರು. ಮುಂಬೈ ಮೂಲದ 'ಪಟ್ನಿ ಕಂಪ್ಯೂಟರ್ಸ್' ಸಂಸ್ಥೆಯಲ್ಲಿ ನಾರಾಯಣ ಮೂರ್ತಿಗಳಿಂದ ಆಯ್ಕೆಗೊಂಡ ನಂದನ್ ಮುಂದೆ ನಾರಾಯಣ ಮೂರ್ತಿಗಳೊಂದಿಗೆ ಇನ್ಫೋಸಿಸ್ ಸಂಸ್ಥೆಗೂ ಜೊತೆಗೂಡಿದರು.

ಮುಂದೆ ನಂದನ್ ನಿಲೇಕಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿಕೊಂಡಿದ್ದು ಜೀವನದ ಪ್ರಮುಖ ತಿರುವು.

ಇನ್ಫೋಸಿಸ್ ಹುದ್ದೆಯಿಂದ ಹೊರಬಂದ ಮೇಲೆ ಕೇಂದ್ರಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ Unique Identification Authority of India (UIDAI)ದ ಮುಖ್ಯಸ್ಥರಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಂದನ್ ರಾಜಕೀಯಕ್ಕೆ ಬನ್ನಿ; ನಿಮ್ಮ ಹಿಂದೆ ನಾವಿದ್ದೇವೆ!ನಂದನ್ ರಾಜಕೀಯಕ್ಕೆ ಬನ್ನಿ; ನಿಮ್ಮ ಹಿಂದೆ ನಾವಿದ್ದೇವೆ!

ಭಾರತ ಸರ್ಕಾರದ ತಂತ್ರಜ್ಞಾನ ಸಲಹಾ ಸಮಿತಿಯ ಮುಖ್ಯಸ್ಥರಾಗಿ ಕೂಡಾ ನಿಲೇಕಣಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಿಲೇಕಣಿ ಅವರ 'Imagining India' ಇಪ್ಪತ್ತನೆಯ ಶತಮಾನದ ಭಾರತೀಯ ಸ್ಥಿತಿಗತಿಗಳ ಅವಲೋಕನವಾಕ್ಕೆ ಭಾರತೀಯ ಕನಸುಗಾರಿಕೆಗೆ ದಿಕ್ಸೂಚಿಯಾಗಿದೆ ಎಂದು ಹೊಗಳಲಾಗಿದೆ. ಈಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿರುವ ಪದ್ಮಭೂಷಣ ಪುರಸ್ಕೃತ ನಂದನ್ ನಿಲೇಕಣಿ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...

ಜನಪ್ರತಿನಿಧಿಯಾಗಲು ಹೊರಟ ಉದ್ಯಮಿ

ಜನಪ್ರತಿನಿಧಿಯಾಗಲು ಹೊರಟ ಉದ್ಯಮಿ

ಕೋಟ್ಯಧಿಪತಿ ಉದ್ಯಮಿ, ಐಐಟಿ ಮುಂಬೈನ ಪದವೀಧರ, ಇನ್ಫೋಸಿಸ್ ಸಹ ಸ್ಥಾಪಕ, ಆಧಾರ್ ಗುರುತಿನ ಚೀಟಿ ಯೋಜನೆ ಮುಖ್ಯಸ್ಥ ಹೀಗೆ ನಿಲೇಕಣಿ ಅರ್ಹತೆ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ನಾಗರೀಕರೆಲ್ಲರಿಗೂ ಒಂದು ನಂಬರ್ ನೀಡಲು ನಿಲೇಕಣಿ ಶ್ರಮಿಸಿದ್ದಾರೆ.

400 ಮಿಲಿಯನ್ ಕಾರ್ಡ್ ಹಂಚುವ ಮೂಲಕ ಯುಪಿಎ ಯಶಸ್ವಿ ಯೋಜನೆ ಪಟ್ಟಿಗೆ UIDAIಅನ್ನು ಸೇರಿಸಿದೆ.

ಯುಪಿಎ ಸಾಕಷ್ಟು ಆದಾಯ, ಹೆಸರು ತಂದುಕೊಟ್ಟ ಈ ಯೋಜನೆಯ ರುವಾರಿ ನಂದನ್ ಅವರಿಗೆ ಈಗಾಗಲೇ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಇದೇ ಆದರೂ ಚುನಾವಣೆಯಲ್ಲಿ ಸ್ಪರ್ಧೆ ಬೇಕೆ? 2014ರ ಹೊತ್ತಿಗೆ ಆಧಾರ್ ಹಂಚಿಕೆ ಕಾರ್ಯಕ್ಕೆ ಮುಕ್ತಾಯ ಹಾಡಲಾಗುತ್ತದೆ.

ನಂದನ್ ಅವರನ್ನು ಬಿಟ್ಟರೆ ಖಾಸಗಿ ಸಂಸ್ಥೆ ಪಾಲಾಗುತ್ತಾರೆ. ಪಕ್ಷದಲ್ಲಿ ಉಳಿಸಿಕೊಳ್ಳಲು ಸಂಸದ್ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ನೀಡಲು ಕಾಂಗ್ರೆಸ್ ಚಿಂತಿಸಿದೆ.
ರಾಹುಲ್ ತಂತ್ರಗಾರಿಕೆ

ರಾಹುಲ್ ತಂತ್ರಗಾರಿಕೆ

2009ರಿಂದ ಕಾಂಗ್ರೆಸ್ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿರುವ ನಂದನ್ ಅವರ ಕಾರ್ಯಕ್ಷಮತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮೆಚ್ಚುಗೆಯಾಗಿದೆ.

ಹಾಗಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಆಧಾರ್ ಯೋಜನೆ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಯಿತು. ಆಧಾರ್ ಯೋಜನೆ ಬಗ್ಗೆ ಅಪಸ್ವರ, ಭಾರಿ ಮೊತ್ತ ಅವವ್ಯಹಾರಗಳ ಸುದ್ದಿಗಳನ್ನು ಸಾಯುವಂತೆ ಮಾಡುವಲ್ಲಿ ರಾಹುಲ್ ಯಶಸ್ವಿಯಾದರು.ರಾಜಕೀಯಕ್ಕೆ ಇಳಿಯಬೇಕಾದರೆ ಈಗಿನ ಸ್ಥಾನ ಬಿಡಬೇಕಾಗುತ್ತದೆ. ಅಲ್ಲದೆ ಯೋಜನೆ ಮುಕ್ತಾಯದ ಹಂತದಲ್ಲಿದೆ. ಹೀಗಾಗಿ ನಂದನ್ ಅವರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸಲು ಒಪ್ಪಿಸಿದ್ದು ಸ್ವತಃ ರಾಹುಲ್ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೊದಲ ಐಟಿ ಉದ್ಯಮಿ

ಮೊದಲ ಐಟಿ ಉದ್ಯಮಿ

ಭಾರತದ ಐಟಿ ಉದ್ಯಮದ ಒಳ ಹೊರಗು ತಿಳಿದಿರುವ ನಂದನ್ ನಿಲೇಕಣಿ ಅವರು ಚುನಾವಣೆ ಕಣಕ್ಕಿಳಿದರೆ ಉದ್ಯಮಿಗಳಲ್ಲಿ ಹೊಸ ಹುರುಪು ಮೂಡುತ್ತದೆ. ಕರ್ನಾಟಕದಲ್ಲಿ ಟೆಕ್ಕಿಗಳು ಅನೇಕರು ಕಣಕ್ಕಿಳಿದಿದ್ದಾರೆ. ಎನ್ನಾರೈಗಳು ಇಲ್ಲಿ ಬಂದು ನಿಂತು ಗೆದ್ದಿದ್ದಾರೆ ಕೂಡಾ. ಆದರೆ, ದೊಡ್ಡ ಸಂಸ್ಥೆಯಲ್ಲಿ ಸಿಇಒ ಅಗಿದ್ದ ವ್ಯಕ್ತಿ ಲೋಕಸಭೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು ಎನ್ನಬಹುದು.

ಯಾರು ಎದುರಾಳಿ

ಯಾರು ಎದುರಾಳಿ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದಲ್ಲಿ ಮನೆ ಹೊಂದಿರುವ ನಿಲೇಕಣಿ ಅವರು ಹಾಲಿ ಸಂಸದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ವಿರುದ್ಧ ಸೆಣೆಸಬೇಕಾಗುತ್ತದೆ.

ಆರೆಸ್ಸೆಸ್ ಅಣತಿಯಂತೆ ಅನಂತ್ ಕುಮಾರ್ ಅವರು ಈ ಬಾರಿ ಹುಬ್ಬಳ್ಳಿಯಿಂದ ಸ್ಪರ್ಧೆಗಿಳಿಯಲಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರನ್ನು ಕರೆ ತರಲು ಬಿಜೆಪಿ ಮನಸ್ಸು ಮಾಡಲಿದೆ ಎಂಬ ಸುದ್ದಿಯಿದೆ.

ನ್ಯಾಸ್ ಕಾಂ ಸಹ ಸ್ಥಾಪಕ

ನ್ಯಾಸ್ ಕಾಂ ಸಹ ಸ್ಥಾಪಕ

ನ್ಯಾಸ್ ಕಾಂ ಸಹ ಸ್ಥಾಪಕರಾಗಿರುವ ನಂದನ್ ಅವರು ದೇಶದ ಪ್ರತಿಷ್ಠಿತ ಆರ್ಥಿಕ ಸಂಶೋಧನಾ ಸಂಸ್ಥೆ NCEAR ಹಾಗೂ Indian Council for Research on International Economic Relations (ICRIER) ಜತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಇದರ ಜತೆಗೆ ಸಲಹಾ ಸಮಿತಿಗಳಲ್ಲಿದ್ದಾರೆ. World Economic Forum Foundation ಹಾಗೂ ಬಾಂಬೆ ಹೆರಿಟೇಜ್ ಫಂಡ್ ಸಮಿತಿಯಲ್ಲೂ ಇದ್ದಾರೆ.

ಶ್ರೀಮಂತ ಅಭ್ಯರ್ಥಿ

ಶ್ರೀಮಂತ ಅಭ್ಯರ್ಥಿ

ಫೋರ್ಬ್ ಎಣಿಕೆಯಂತೆ ನಿಲೇಕಣಿ ನಿವ್ವಳ ಆಸ್ತಿ 1.3 ಬಿಲಿಯನ್ ಡಾಲರ್ ತೂಗುತ್ತದೆ. ವಿಶ್ವದ 53ನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಇದರ ಜತೆಗೆ ಇನ್ಫೋಸಿಸ್ ಷೇರುಗಳಿವೆ. ಪತ್ನಿ ರೋಹಿಣಿ ನಿಲೇಕಣಿ ಅವರು ಎನ್ ಜಿಒ ಜತೆ ಕಾರ್ಯನಿರ್ವಹಿಸುತ್ತಿದ್ದು, ಉದ್ಯಮಿಗಳ ಪೈಕಿ ರತನ್ ಟಾಟಾ ಬಿಟ್ಟರೆ ದಾನ ಧರ್ಮದಲ್ಲಿ ರೋಹಿಣಿ ಅವರದ್ದು ಎತ್ತಿದ ಕೈ.

ಸ್ಪರ್ಧೆ ಬಗ್ಗೆ ಟ್ವೀಟ್

ನಂದನ್ ನಿಲೇಕಣಿ ಚುನಾಯಿತರಾದರೆ ಮುಂದೇನು ಟ್ವೀಟ್

English summary
The former Infosys chief executive officer and chairman of the Unique Identification Authority of India (UIDAI) might be considering taking a plunge into electoral politics by joining the Congress to contest the forthcoming Lok Sabha election. The constituency is likely to be from Bangalore, Karnataka. Here’s all you need to know about Nandan Nilekani
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X