ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರೋರಾತ್ರಿ ಬದಲಾದ ತಂತ್ರಗಾರಿಕೆ: ಅವಿಶ್ವಾಸ ನಿರ್ಣಯದ ಹಿಂದೆ ಕಾಂಗ್ರೆಸ್ಸಿನ ಅಸಲಿಯತ್ತೇ ಬೇರೆ

|
Google Oneindia Kannada News

ಏನೇ ಗುಣಾಕಾರ, ಭಾಗಾಕಾರ ಹಾಕಿದರೂ ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಕಷ್ಟ. ಹಾಗಿದ್ದರೂ, ಪ್ರಬುದ್ದ ರಾಜಕಾರಣಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು ಏಕೆ?

ಹೀಗೊಂದು ಚರ್ಚೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದೆ. ಹಲವು ಕಾಂಗ್ರೆಸ್ಸಿಗರಿಗೂ ಅರ್ಥವಾಗದ ನಡೆಯನ್ನು ಕಾಂಗ್ರೆಸ್ ಇಟ್ಟಿದ್ದು ಏಕೆ ಎನ್ನುವುದನ್ನು ರಾಜಕೀಯ ವಿಶ್ಲೇಷಕರು ಅವಲೋಕಿಸುವ ಪ್ರಕಾರ, ಸರಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವುದು.

ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ಯತ್ನಾಳ್!ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ಯತ್ನಾಳ್!

ಕೊರೊನಾ ಹಾವಳಿಯ ನಡುವೆಯೂ ಆರಂಭವಾದ ವಿಧಾನ ಮಂಡಲದ ಅಧಿವೇಶನ ನಿರೀಕ್ಷಿತ ರೀತಿಯಲ್ಲಿ ಕಾವು ಪಡೆಯದೇ ಇರುವುದು ಗೊತ್ತಿರುವ ವಿಚಾರ. ಸದನದಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಜರಾಗದ ಸದಸ್ಯರ ಸಂಖ್ಯೆಯೂ ಇದಕ್ಕೆ ಕಾರಣ ಇದ್ದಿರಬಹುದು.

ಎಲ್ಲರನ್ನೂ ಕೇಳಿದೆ ಆದರೆ ಮಾಹಿತಿ ಕೊಟ್ಟಿದ್ದು ಶ್ರೀರಾಮುಲು ಮಾತ್ರ: ಸಿದ್ದರಾಮಯ್ಯ!ಎಲ್ಲರನ್ನೂ ಕೇಳಿದೆ ಆದರೆ ಮಾಹಿತಿ ಕೊಟ್ಟಿದ್ದು ಶ್ರೀರಾಮುಲು ಮಾತ್ರ: ಸಿದ್ದರಾಮಯ್ಯ!

ಕೊರೊನಾದಿಂದಾಗಿ, ಬಿಜೆಪಿಯ ಇಬ್ಬರು ಸಂಸದರು ಮತ್ತು ಕಾಂಗ್ರೆಸ್ಸಿನ ಒಬ್ಬರು ಶಾಸಕರ ನಿಧನ, ಕಲಾಪ ಹಾಜರಾತಿಯ ಮೇಲೆ ಪರಿಣಾಮ ಬಿದ್ದಿರಬಹುದು. ಆದರೂ, ರಾತ್ರೋರಾತ್ರಿ ಕಾಂಗ್ರೆಸ್ಸಿನ ಬದಲಾದ ನಿಲುವಿಗೆ ಕಾರಣ ಹುಡುಕಲು ಹೊರಟಾಗ, ಅದರ ಸಾಧ್ಯಾಸಾಧ್ಯತೆ ಹೀಗಿದೆ:

ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ

ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ

ಇವತ್ತು, ನಾಳೆ ಅಂದುಕೊಂಡು ಕೆಪಿಸಿಸಿ ಉಸ್ತುವಾರಿಯಾಗಿ ಹೊಸದಾಗಿ ನೇಮಕವಾಗಿರುವ ರಣದೀಪ್ ಸುರ್ಜೇವಾಲ, ಬುಧವಾರ (ಸೆ 23) ಬೆಂಗಳೂರಿಗೆ ಆಗಮಿಸಿದ್ದರು. ಹಲವು ಕಾಂಗ್ರೆಸ್ ಮುಖಂಡರ ಜೊತೆಗೆ ಕ್ಲೋಸ್ ಡೋರ್ ಮೀಟಿಂಗ್ ಕೂಡಾ ನಡೆಸಿದ್ದರು. ಬಿಎಸ್ವೈ ಸರಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಸಾರ್ವಜನಿಕರ ಮುಂದೆ ಇಡಬೇಕು ಎನ್ನುವ ಫರ್ಮಾನೇ ಕಾಂಗ್ರೆಸ್ಸಿನ ಅವಿಶ್ವಾಸ ನಿರ್ಣಯ ಮಂಡನೆಗೆ ಕಾರಣ ಎಂದು ವ್ಯಾಖಾನಿಸಲಾಗುತ್ತಿದೆ. ಅದು ಹೇಗೆ ಸಾಧ್ಯ?

ಕೋವಿಡ್ ಉಪಕರಣ ಖರೀದಿಯಲ್ಲಿ ನಡೆಯಲಾಗಿದೆ ಎಂದು ಹೇಳಲಾಗುತ್ತಿರುವ ಭ್ರಷ್ಟಾಚಾರ

ಕೋವಿಡ್ ಉಪಕರಣ ಖರೀದಿಯಲ್ಲಿ ನಡೆಯಲಾಗಿದೆ ಎಂದು ಹೇಳಲಾಗುತ್ತಿರುವ ಭ್ರಷ್ಟಾಚಾರ

ಹಾಲೀ ಅಧಿವೇಶನದಲ್ಲಿ ಬಿಎಸ್ವೈ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ಸಿಗೆ ಬೇಕಾದ ಅಸ್ತ್ರಗಳಿದ್ದವು. ಅದರಲ್ಲೂ, ಕೋವಿಡ್ ಉಪಕರಣ ಖರೀದಿಯಲ್ಲಿ ನಡೆಯಲಾಗಿದೆ ಎಂದು ಹೇಳಲಾಗುತ್ತಿರುವ ಭ್ರಷ್ಟಾಚಾರ ಎನ್ನುವ ಬ್ರಹ್ಮಾಸ್ತ್ರ ಒಂದೇ ಸಾಕಿತ್ತು. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸದನದಲ್ಲಿ ಮಾತಾಡಿದ್ದರೂ, ಅದು ಸಾರ್ವಜನಿಕವಾಗಿ ಎಫೆಕ್ಟೀವ್ ಆಗಿರಲಿಲ್ಲ ಎನ್ನುವುದು ವಾಸ್ತವತೆ ಒಂದು ಕಡೆಯಾದರೆ, ಸಮಯಾವಕಾಶ ಇಲ್ಲದಿರುವುದು ಇನ್ನೊಂದೆಡೆ.

ಸ್ಪೀಕರ್ ಅವಕಾಶ ನೀಡುವ ಸಾಧ್ಯತೆ ಕಮ್ಮಿ

ಸ್ಪೀಕರ್ ಅವಕಾಶ ನೀಡುವ ಸಾಧ್ಯತೆ ಕಮ್ಮಿ

ಹಾಗಾಗಿ, ಈ ಎಲ್ಲಾ ವಿಷಯಗಳು ಜೊತೆಗೆ, ಯಡಿಯೂರಪ್ಪನವರ ಆಪ್ತರು ಮತ್ತು ಕುಟುಂಬದವರಿಂದ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿರುವ ಭ್ರಷ್ಟಾಚಾರದ ವಿಷಯವನ್ನು ದಾಖಲೆ ಸಮೇತ ಸದನದ ಮುಂದಿಡಲು ಅವಕಾಶ ಕೇಳಿದರೆ, ಸ್ಪೀಕರ್ ಅವಕಾಶ ನೀಡುವ ಸಾಧ್ಯತೆ ಕಮ್ಮಿ. ಹಾಗಾಗಿಯೇ, ಅವಿಶ್ವಾಸ ನಿರ್ಣಯ ಮಂಡನೆ.

ಹಲವು ವಿಚಾರಗಳನ್ನು ಪ್ರಸ್ತಾವಿಸುವ ಅವಕಾಶ ವಿರೋಧ ಪಕ್ಷಗಳಿಗೆ

ಹಲವು ವಿಚಾರಗಳನ್ನು ಪ್ರಸ್ತಾವಿಸುವ ಅವಕಾಶ ವಿರೋಧ ಪಕ್ಷಗಳಿಗೆ

ನಿರ್ಣಯ ಮಂಡನೆಯಾದ ನಂತರ, ಯಾವ ವಿಚಾರದ ಬಗ್ಗೆಯೂ ವಿರೋಧ ಪಕ್ಷಗಳು ಮಾತನಾಡುವ ಅವಕಾಶವಿರುತ್ತದೆ. ಕೋವಿಡ್, ಎಪಿಎಂಸಿ, ಬಿಎಸ್ವೈ ಕುಟುಂಬದ ಭ್ರಷ್ಟಾಚಾರ, ಭೂ ಸುಧಾರಣಾ ಕಾಯಿದೆ, ಜಿಎಸ್ಟಿ.. ಹೀಗೆ ಹಲವು ವಿಚಾರಗಳನ್ನು ಪ್ರಸ್ತಾವಿಸುವ ಅವಕಾಶ ವಿರೋಧ ಪಕ್ಷಗಳಿಗಿದೆ. ಅದರ ಭಾಗವೇ ಇದು. ಹಾಗಾಗಿ..

Recommended Video

ಭಾರತದ ಪವರ್ ಗೆ ಶಾಕ್ ಆದ China | Oneindia Kannada
ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ

ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ

ರಣದೀಪ್ ಸುರ್ಜೇವಾಲ ಈ ರಣತಂತ್ರದ ಹಿಂದಿನ ಮಾಸ್ಟರ್ ಎಂದು ಹೇಳಲಾಗುತ್ತಿದೆ. ಅವರ ಸೂಚನೆಯ ಮೇರೆಗೆ, ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದೆ. ಸರಕಾರದ ವೈಫಲ್ಯವನ್ನು ಕಾಂಗ್ರೆಸ್ ಯಾವರೀತಿ ಸದನದಲ್ಲಿ ಮಂಡಿಸಲಿದೆ, ಇದಕ್ಕೆಲ್ಲಾ ಸ್ಪೀಕರ್ ಅನುಮತಿ ನೀಡುತ್ತಾರಾ ಎನ್ನುವುದು ಆಮೇಲಿನ ಪ್ರಶ್ನೆಯಾದರೂ, ಕಾಂಗ್ರೆಸ್ ಸರಿಯಾದ ತಂತ್ರಗಾರಿಕೆ ಹೂಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

English summary
Even After Not Having Enough Strength, Why Congress Moved No Confidence Motion Against Yediyurappa Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X