ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲಕ್ಕೆ ಬಿದ್ದರೂ ವೀರಶೈವ ಮಹಾಸಭಾ ಮೀಸೆ ಮಣ್ಣಾಗಿಲ್ಲ

By ಡಾ. ಶಶಿಕಾಂತ ಪಟ್ಟಣ, ರಾಮದುರ್ಗ
|
Google Oneindia Kannada News

ಕರ್ನಾಟಕ ಮತ್ತು ಭಾರತ ಇತಿಹಾಸದಲ್ಲಿ ಹಿಂದೂಯೇತರ ಅಲ್ಪಸಂಖ್ಯಾತರಿಗೆ ಮಾನ್ಯತೆ ನೀಡಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ. 1993ರಲ್ಲಿ ಬೌದ್ಧ ಧರ್ಮದ ಐಕ್ಯತೆ ಹಾಗೂ ಧಾರ್ಮಿಕ ಹಕ್ಕನ್ನು ದೊರಕಿಸಿಕೊಟ್ಟಿದೆ. ಜೈನ ಧರ್ಮವು 2013 ಮತ್ತು 2014ರಲ್ಲಿ ಧಾರ್ಮಿಕ ಮಾನ್ಯತೆ ಹಾಗೂ ಅಲ್ಪಸಂಖ್ಯಾತ 2(C) ಮಾನ್ಯತೆ ಪಡೆಯುವಲ್ಲಿ ಯಶವನ್ನು ಕಂಡಿತು. ಆಗಲು ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಆಡಳಿತದಲ್ಲಿ ಇತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈಗ ಕರ್ನಾಟಕದಲ್ಲಿ ಕೂಡ ಬಹು ದಿನಗಳ ಬೇಡಿಕೆಯಾದ ಲಿಂಗಾಯತರ ಅಸ್ಮಿತೆ, ಐಕ್ಯತೆ, ಅನನ್ಯತೆ ಉಳಿಸಿಕೊಳ್ಳಲು ಸಿದ್ಧರಾಮಯ್ಯನವರ ಸರಕಾರ ಮುಂದೆ ಬಂದಿದೆ. ಲಿಂಗಾಯತ ಸಮುದಾಯದವರಿಗೆ, ಬಸವ ತತ್ವದಲ್ಲಿ ನಂಬಿಕೆ ಇಟ್ಟ ವೀರಶೈವರನ್ನು ಸೇರಿಸಿ ಕರ್ನಾಟಕ ಧಾರ್ಮಿಕ ಅಲ್ಪಸಂಖ್ಯಾತ 2(D) ಮಾನ್ಯತೆ ನೀಡಿ ತನ್ನ ಭರವಸೆ ಮಾತನ್ನು ಉಳಿಸಿಕೊಂಡಿದೆ.

ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಅಧಿಸೂಚನೆಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಅಧಿಸೂಚನೆ

ವೀರಶೈವರ ಸೇರ್ಪಡೆ ಇದು ಒಂದರ್ಥದಲ್ಲಿ ಬಸವ ಭಕ್ತರಿಗೆ ಸಂಪೂರ್ಣ ತೃಪ್ತಿಯನ್ನು ತರದಿದ್ದರೂ ಸಹಿತ, ಲಿಂಗಾಯತ ವೀರಶೈವ ಐಕ್ಯತೆ ಭದ್ರಗೊಳಿಸಲು ಡಾ ಎಂ ಬಿ ಪಾಟೀಲರು ಹಾಗೂ ಅವರ ಸಹೋದ್ಯೋಗಿಗಗಳು ಒಂದು ಒಳ್ಳೆಯ ನಿರ್ಣಯಕ್ಕೆ ಬಂದಿದ್ದಾರೆ. ಇದನ್ನು ಸ್ವಾಗತಿಸಿದ ಶ್ಯಾಮನೂರು ಶಿವಶಂಕರಪ್ಪ ಮರುದಿನವೇ ವೀರಶೈವ ಜಗದ್ಗುರು ಕೆಲ ಜಾತಿ ವಾದಿಗಳ ಮತ್ತು ಬಿಜೆಪಿ ಅವರ ಒತ್ತಡಕ್ಕೆ ಮಣಿದು ತಮ್ಮ ವರಸೆಯನ್ನು ಬದಲಿಸಿದ್ದಾರೆ.

Even after defeat Shamanur has not learnt lesson

ದಿನಾಂಕ 23ರಂದು ನಡೆದ ಅಖಿಲ ಭಾರತ ವೀರಶವ ಮಹಾಸಭೆಯ ಕಾರ್ಯಕಾರಿಣಿಯ ಸಭೆಯಲ್ಲಿ ಸರಕಾರದ ನಿಲುವನ್ನು ಖಂಡಿಸಿದ್ದು ಅತ್ಯಂತ ಹೇಯ. ಅವರ ನಿಲುವುಗಳು, ನಿರ್ಣಯಗಳು ಅಪಹಾಸ್ಯಕ್ಕೆ ಕಾರಣವಾಗಿವೆ. ಬಸವ ತತ್ವವನ್ನು ಒಪ್ಪುವ ಕಡ್ಡಾಯತನವನ್ನು ಬಿಡಬೇಕು ಎಂದು ಹೇಳಿರುವುದು ಅವರ ಮೂರ್ಖತನಕ್ಕೆ ಸಾಕ್ಷಿಯಾಗಿದೆ. ಇಂದು ಇಂಗ್ಲೆಂಡ್ ಅಮೇರಿಕ ಫ್ರಾನ್ಸ್ ಜರ್ಮನಿ ಮುಂತಾದ ರಾಷ್ಟ್ರಗಳು ಬಸವ ತತ್ವಗಳನ್ನು ಒಪ್ಪಿಕೊಳ್ಳುವಾಗ ಈ ಪಂಪಿ ಅಂಡ್ ಕಂಪನಿ ಆಕ್ಷೇಪ ವ್ಯಕ್ತಪಡಿಸಿರುವುದು ಹೇಯ ಕೃತ್ಯವಾಗಿದೆ.

ವೀರಶೈವ ಲಿಂಗಾಯತ ಎರಡೂ ಒಂದೇ : ವೀರಶೈವ ಮಹಾಸಭಾವೀರಶೈವ ಲಿಂಗಾಯತ ಎರಡೂ ಒಂದೇ : ವೀರಶೈವ ಮಹಾಸಭಾ

ಲಿಂಗಾಯತ ಧರ್ಮದ ಸ್ಥಾಪಕರ ಬಗ್ಗೆ ವಿವಾದ ಬಿಟ್ಟು ವೀರಶೈವರನ್ನು ಪುರಸ್ಕರಿಸಲು ಕೇಳಿದ್ದಾರೆ. ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಮನವಿ ತಿರಸ್ಕೃತಗೊಂಡಿದ್ದು ಸಣ್ಣಮಕ್ಕಳ ಕೈಯಲ್ಲೂ ಆದೇಶ ಓಡಾಡುತ್ತಿವೆ. ಸಂಘಟನೆ ಒಡೆಯುವದು ಬೇಡ ಎಂದು ಹೇಳಿರುವ ವೀರಶೈವ ಮಹಾಸಭೆ ಮುಂದಿನ ದಿನಗಳಲ್ಲಿ ಕೇಂದ್ರಕ್ಕೆ ಮತ್ತೆ ಮನವಿ ಸಲ್ಲಿಸಲು ನಿರ್ಧರಿಸಿವೆ. ಇಂದು ವೀರಶೈವ ಮಹಾಸಭೆಯು ಕೈಕೊಂಡ ನಿರ್ಣಯಗಳು ಅರ್ಥಹೀನ ವ್ಯರ್ಥ ಪ್ರಯತ್ನ.

'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!

ದಿನದಿಂದ ದಿನಕ್ಕೆ ಯು ಟೂರ್ನ ಹೊಡೆಯುವ ಈ ಗೊಸುಂಬಿಗಳಿಗೆ ಪಾಠ ಕಲಿಸಬೇಕು. ಈಗಾಗಲೇ ಸೋತು ಸುಣ್ಣವಾಗಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದುಕೊಳ್ಳುವ ಸಮಾಧಾನ ಅವರಿಗಿದೆ. ಇನ್ಮೇಲಾದರೂ ಸಮಾಜದ ಹಿತ ದೃಷ್ಟಿಯಿಂದ ಪಂಪಿಗಳ ಕಪಿ ಮುಷ್ಟಿಯಿಂದ ಹೊರ ಬರಲಿ ಅಖಿಲ ಭಾರತ ಲಿಂಗಾಯತ ಮಹಾಸಭೆ ಎಂದು ಮರು ನಾಮಕರಣ ಮಾಡಲಿ.

English summary
Even after defeat Shamanur Shivashankarappa has not learnt lesson, by accepting separate religion status for Lingayat, says Shashikanth Pattan. Akhila Bharat Veerashaiva Mahasabha head Shamanur Shivashankarappa says Veerashaiva and Lingayats should be not separated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X